Home Cinema “ಸನ್ನಿ ಲಿಯೊನ್” ರಸಿಕರಿಗೆ ಮೈಚಳಿ ಬಿಡಿಸೋಕೆ ಬರ‍್ತಾಳೆ ಬೆಂಗಳೂರಿಗೆ .! ಬೆಂಗಳೂರಿನಲ್ಲಿ ಈಗ ’ಸನ್ನಿಸಮೂಹ’ದ ಅಟ್ಟಹಾಸ..!

“ಸನ್ನಿ ಲಿಯೊನ್” ರಸಿಕರಿಗೆ ಮೈಚಳಿ ಬಿಡಿಸೋಕೆ ಬರ‍್ತಾಳೆ ಬೆಂಗಳೂರಿಗೆ .! ಬೆಂಗಳೂರಿನಲ್ಲಿ ಈಗ ’ಸನ್ನಿಸಮೂಹ’ದ ಅಟ್ಟಹಾಸ..!

3647
0
SHARE

ಪಡ್ಡೆ ಹುಡುಗರ ನಿದ್ದೆ ಕೆಡಿಸೋಕೆ ನಮ್ಮ ಸಿಲಿಕಾನ್ ಸಿಟಿಗೆ ಸನ್ನಿಲಿಯೊನ್ ಎಂಟ್ರಿ ಕೊಡ್ತಿದಾಳೆ. ಈ ಹಿಂದೆ ಸನ್ನಿಲಿಯೊನ್ ನಮ್ಮ ನೆಲದಲ್ಲಿ ಡ್ಯಾನ್ಸ್ ಮಾಡೋದು ಬೇಡ ಅಂತ ಕೆಲವು ಕನ್ನಡ ಪರ ಸಂಘಟನೆಗಳು ರೊಚ್ಚಿಗೆದಿದ್ದವು. ಆದರೆ ಈಗ ಈ ಹೋರಾಟಗಳ ಮಧ್ಯೆಯೇ ಸನ್ನಿ ’ಐ ಜಸ್ಟ್ ಲವ್ ಬೆಂಗಳೂರ್’ ಅಂತ ಮೆಲ್ಲಗೆ ಬೆಂಗಳೂರಿಗೆ ಕಾಲಿಡ್ತಾಳಂತೆ..

ಸನ್ನಿಲಿಯೊನ್ ಹೆಸರು ಕೇಳಿದ್ರೆ ಹುಡುಗರಿಗೆ ಹೈ ಫೀವರ್ ಉಂಟಾಗುತ್ತೆ. ಯಾಕಂದ್ರೆ ತನ್ನ ಸಕತ್ ಹಾಟ್‌ಲುಕ್‌ಗಳಿಂದ ಸನ್ನಿ ಲಿಯೊನ್ ಬಾಲಿವುಡ್ ಅಂಗಳದಲ್ಲಿ ಫ್ಯಾನ್ ಫಾಲೊಯಿಂಗ್ ಹುಟ್ಟುಹಾಕಿಕೊಂಡಿದಾಳೆ. ಇಂತಹ ಮಾದಕ ಬೆಡಗಿ ಸನ್ನಿ ಲಿಯೊನ್ ತಮ್ಮ ಚಿತ್ರದಲ್ಲಿ ಕುಣಿಯಬೇಕು ಅಂತ ಆಸೆ ಇಟ್ಟುಕೊಂಡು ಎಷ್ಟೋ ನಿರ್ಮಾಪಕರು ಸನ್ನಿ ಮನೆ ಮುಂದೆ ಕ್ಯೂ ನಿಲ್‌ತಾರೆ. ಸನ್ನಿ ಸ್ಟೇಜ್ ಶೋಗಳಿಗೂ ಭಾರೀ ಡಿಮ್ಯಾಂಡ್ ಇದೆ ಕಣ್ರೀ.

ಎಲ್ಲಾ ಹಿರೋಯಿನ್‌ಗಳೂ ನಾಚಿ ನೀರಾಗುವ ಹಾಗೇ ಸ್ಟೇಜ್ ಮೇಲೆ ಬೆಂಕಿ ಹಚ್ತಾಳೆ ಈ ಬಿಂದಾಸ್ ಬೆಡಗಿ ಸನ್ನಿಲಿಯೊನ್. . !ಈಗ ಬೆಂಗಳೂರಿನಲ್ಲಿ ತನ್ನ ಮೈಮಾಟದ ಝಲಕ್ ತೋರಿಸೋಕೆ ಸನ್ನಿ ತುದಿಗಾಲಿನಲ್ಲಿ ನಿಂತಿದಾಳೆ. ನವೆಂಬರ್. ೩ ರಂದು ನಾಗವರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆಯಲಿರೊ ’ಫ್ಯೂಶನ್ ನೈಟ್’ ಎಂಬ ಕಾರ‍್ಯಕ್ರಮದಲ್ಲಿ ಸನ್ನಿ ತನ್ನ ಐಟಮ್ ನಂಬರ್‌ಗಳಿಗೆ ಹೆಜ್ಜೆ ಹಾಕಲಿದ್ದಾಳೆ.

ವಿಶೇಷ ಏನಪ್ಪಾ ಅಂದ್ರೆ, ಅದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ತಮ್ಮ ರಾಕ್ ಗಾಯನದಿಂದ ವೀಕ್ಷಕರಿಗೆ ಮನರಂಜನೆ ನೀಡಲಿದ್ದಾರೆ.ಇನ್ನು ’ಫ್ಯೂಶನ್ ನೈಟ್’ ಕಾರ‍್ಯಕ್ರಮದ ಆಯೋಜಕರಾದ ಹರೀಶ್ ಮೈಸೂರ್ ’ಫ್ಯೂಶನ್ ನೈಟ್’ ಪ್ರೋಗ್ರಾಮ್ ಡಿಸೈನ್ ಹಾಗೂ ತಾವು ಈ ಕಾರ್ಯಕ್ರಮವನ್ನ ನಡೆಸ್ತಿರೋದಕ್ಕೆ ಎದುರಿಸುತ್ತಿರುವ ಸಮಸ್ಯೆಗಳನ್ನ ಹಂಚಿಕೊಂಡ್ರು.

ಇನ್ನು ’ಫ್ಯೂಶನ್ ನೈಟ್’ ಕಾರ್ಯಕ್ರಮವನ್ನ ಹೋಸ್ಟ್ ಮಾಡ್ತಿರೊ ಬಿಗ್‌ಬಾಸ್ ಖ್ಯಾತಿಯ ರಿಯಾಜ್ ಭಾಷಾ ಫಸ್ಟ್ ಟೈಮ್ ಸನ್ನಿ ಜೊತೆ ವೇದಿಕೆ ಹಂಚಿಕೊಳ್ಳೊ ಖುಷಿಯಲ್ಲಿದ್ರು. ಸನ್ನಿ ಲಿಯೊನ್ ಬಗೆಗಿನ ತಪ್ಪು ಕಲ್ಪನೆಗಳನ್ನ ನಾವು ದೂರಮಾಡಬೇಕು ಅಂತ ಜನರಲ್ಲಿ ಮನವಿ ಮಾಡಿಕೊಂಡ್ರು.
’ಫ್ಯೂಶನ್ ನೈಟ್ ಕಾರ್ಯಕ್ರಮ ಭಾರೀ ಸುದ್ಧಿ ಮಾಡುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಿರಲಿ ಅಂತ ಈಗಾಗಲೇ ಕರ್ನಾಟಕ ಪೋಲಿಸ್ ಇಲಾಖೆ ೩೩೫ ಸಿಬ್ಬಂದಿಯನ್ನ ನೇಮಿಸಿದೆ.

ಷೋ ನ ಟಿಕೆಟ್‌ಗಳು ಹಾಟ್ ಕೇಕ್‌ನಂತೆ ಬಿಕರಿಯಾಗಿವೆ. ಒಂದು ಕಡೆ ಸನ್ನಿ ಲಿಯೊನ್ ಬಂದು ನಮ್ಮ ನೆಲದಲ್ಲಿ ಕುಣಿದರೆ ಸಂಸ್ಕೃತಿ ಹಾಳಾಗುತ್ತೆ ಅನ್ನೋ ಟಾಕ್ ಕ್ರಿಯೆಟ್ ಆದ್ರೆ, ಇನ್ನೊಂದು ಕಡೆ ’ಬೆಂಗಳೂರು ಇಸ್ ವೈಟಿಂಗ್ ಫಾರ್ ಯೂ ಸನ್ನಿ’ ಎನ್ನುವ ಪಡ್ಡೆ ಹೈಕಳ ಸಂಘಗಳಿಗೇನೂ ಕೊರತೆನೇ ಇಲ್ಲ ಬಿಡಿ. ಒಟ್ಟಾರೆಯಾಗಿ ಸನ್ನಿ ಸ್ಟೆಪ್ಸ್ ನೋಡಿ ಕಣ್ಣು ತುಂಬಿಕೊಳ್ಳಬೇಕು ಅಂತಿರೋ ಸನ್ನಿ ಭಕ್ತಾಧಿಗಳಿಗೆ ನಾಳಿದ್ದು ಪೈಸಾವಸೂಲ್ ಡೇ…

LEAVE A REPLY

Please enter your comment!
Please enter your name here