Home Cinema ಸನ್ನಿ ಲಿಯೋನ್ ಅಂದ್ರೆ ಬರೀ ಮಾದಕ ಅಷ್ಟೇ ಅಲ್ಲ, ಮಾದರಿಯೂ ಹೌದು..! ಬೈದವರೆನ್ನ ಬಂಧುಗಳೆನ್ನುತ್ತಿರೋ ಸನ್ನಿಗೆ...

ಸನ್ನಿ ಲಿಯೋನ್ ಅಂದ್ರೆ ಬರೀ ಮಾದಕ ಅಷ್ಟೇ ಅಲ್ಲ, ಮಾದರಿಯೂ ಹೌದು..! ಬೈದವರೆನ್ನ ಬಂಧುಗಳೆನ್ನುತ್ತಿರೋ ಸನ್ನಿಗೆ ಹೊಡೀರಿ ಸಲಾಮೊಂದು..! ಕೇರಳ ಪ್ರವಾಹ ಸಂತ್ರಸ್ಥರಿಗೆ ಸನ್ನಿ 5 ಕೋಟಿ ಕೊಟ್ಟಿದ್ದು ನಿಜಾನಾ ಗೊತ್ತಿಲ್ಲ!

2860
0
SHARE

ಕೇರಳ ಪ್ರವಾಹ ಸಂತ್ರಸ್ಥರಿಗೆ ಸನ್ನಿ 5 ಕೋಟಿ ಕೊಟ್ಟಿದ್ದು ನಿಜಾನಾ ಗೊತ್ತಿಲ್ಲ!ಆದ್ರೆ ನಮ್ಮ ರಾಜಕಾರಣಿಗಳಿಗಿಂತ ಸನ್ನಿ ಹೆಚ್ಚು ಕೊಟ್ಟಿರೋದಂತೂ ಸುಳ್ಳಲ್ಲ! ಇತ್ತೀಚಿಗೆ ಪ್ರವಾಹಕ್ಕೆ ತುತ್ತಾಗಿರೋ ಕೇರಳಕ್ಕೆ ಅನೇಕ ಸೆಲೆಬ್ರಿಟಿಗಳು ಸ್ಪಂದಿಸಿ ಹಣ ದಾನ ನೀಡ್ತಿದ್ದಾರೆ. ಅದ್ರಲ್ಲೂ ಸನ್ನಿ ಲಿಯೋನ್ ಕೇರಳಕ್ಕೆ ಬರೊಬ್ಬರಿ 5ಕೋಟಿ ರೂಪಾಯಿ ಸಹಾಯ ಧನ ನೀಡದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮಿಡಿಯಾನಲ್ಲಿ ಹರಿದಾಡ್ತಾ ಇದೆ. ಇದನ್ನ ನೋಡಿ ಜನ ಸನ್ನಿಗಿರೋ ಉದಾರ ಮನಸ್ಸಿಗೆ ಕೋಟಿ ಕೋಟಿ ಧನ್ಯವಾದ ಹೇಳ್ತಿದಾರೆ. ಸನ್ನಿಯನ್ನ ಟೀಕಿಸ್ತಾ ಇದ್ದವರು ನಾಚಿಕೆ ಪಟ್ಟುಕೊಂದು ಸುಮ್ಮನಾಗಿದಾರೆ.

ಆದ್ರೆ ನಿಜವಾಗಿಯೂ ಸನ್ನಿ 5ಕೋಟಿ ಕೊಟ್ಟಿದಾರಾ ಅಂತ ನೋಡಹೋದ್ರೆ,. ಸನ್ನಿ ಲಿಯೋನ್ ಅಧಿಕೃತವಾಗಿ 5ಕೋಟಿ ಕೊಟ್ಟಿರೋದನ್ನ ಎಲ್ಲೂ ಹೇಳಿಕೊಂಡಿಲ್ಲ.  ಈ ಬಗೆಗೆ ಹರಿದಾಡ್ತಿರೋ ರೂಮರ್  ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಸನ್ನಿ, ಹಣ ನೀಡಿರೋದು ನಿಜ ಆದ್ರೆ ಅದು ಎಷ್ಟು ಅನ್ನೋದನ್ನ ಬಹಿರಂಗ ಪಡಿಸೋದಕ್ಕೆ ಇಷ್ಟ ಇಲ್ಲ ಅಂತ ಪ್ರತಿಕ್ರಿಯಿಸಿದಾರೆ.ಕೋಟಿ ಕೋಟಿ ಆಸ್ತಿ ಹೊಂದಿರೋ ಕೆಲ ರಾಜಕಾರಣಿಗಳು ಹತ್ತಿಪ್ಪತ್ತು ಸಾವಿರ ಕೊಟ್ಟು ಅದನ್ನೇ ದೊಡ್ಡ ಸಹಾಯ ಅನ್ನುವಂತೆ ಬಿಲ್ಡ್ ಅಪ್ ಕೊಡ್ತಿದಾರೆ. ಆದ್ರೆ ಸನ್ನಿ ಕೋಟಿ ಕೋಟಿ ಹಣ ಕೊಟ್ಟು ಅದನ್ನ ಹೇಳುಕೊಳ್ಳೋದಕ್ಕೆ ಮುಜುಗರ ಪಟ್ಟುಕೊಳ್ತಿದಾರೆ. ಅಷ್ಟರ ಮಟ್ಟಿಗೆ ಸನ್ನಿ, ನಮ್ಮ ರಾಜಕಾರಣಿಗಳಿಗಿಂತ ಮೇಲು ಅನ್ನಬಹುದು.

ಅಷ್ಟಕ್ಕೂ ಸನ್ನಿಗೂ ಕೇರಳಕ್ಕೂ ಒಂದು ಭಾವನಾತ್ಮಕ ನಂಟಿದೆ. ಕಳೆದ ಕೆಲ ತಿಂಗಳ ಹಿಂದೆ ಸನ್ನಿ ಒಂದು ಖಾಸಗಿ ಕಾರ್ಯಕ್ರಮಕ್ಕಾಗಿ ಕೇರಳಕ್ಕೆ ಭೇಟಿ ಕೊಟ್ಟಿದ್ರು. ಆಗ ಸನ್ನಿಯನ್ನ ನೋಡೋದಕ್ಕೆ ಸಾವಿರಾರು ಜನ ಹರಿದು ಬಂದಿದ್ರು. ಸನ್ನಿ ಕಾರಿನ ಸುತ್ತಾ ಸಾವಿರಾರು ಜನ ಮುತ್ತಿಗೆ ಹಾಕಿರೋ ಫೋಟೋವೊಂದು ವೈರಲ್ ಆಗಿತ್ತು.ಈ ಫೋಟೋವನ್ನ ಸೋಶಿಯಲ್ ಮಿಡಿಯಾನಲ್ಲಿ ಶೇರ್ ಮಾಡಿದ್ದ ಸನ್ನಿ, ಈ ಪ್ರೀತಿಗೆ ಹೇಗೆ ಧನ್ಯವಾದ ಹೇಳೋದೋ ಗೊತ್ತಿಲ್ಲ ಅಂದಿದ್ರು. ಇದೀಗ ಅದೇ ಕೇರಳಿಗರು ಕಷ್ಟದಲ್ಲಿರೋವಾಗ ದೊಡ್ಡದೊಂದು ಮೊತ್ತವನ್ನ ದಾನ ಮಾಡಿ ಕೇರಳಿಗರ ಋಣ ತೀರಿಸಿದ್ದಾರೆ.

ಅಷ್ಟಕ್ಕೂ ಸನ್ನಿಗೆ ಕೇರಳಿಗರ ಮೇಲಷ್ಟೇ ಅಲ್ಲ, ಇಡೀ ಭಾರತೀಯರ ಮೇಲೆ ಪ್ರೀತಿ. ವಿದೇಶದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸ್ತಾ ಇದ್ದವಳನ್ನ ಕರೆತಂದು, ಕೈ ತುಂಬಾ ಸಿನಿಮಾ ಆಫರ್ ಕೊಟ್ಟು, ಪ್ರೀತಿ-ಅಭಿಮಾನ ಕೊಟ್ಟವರು ಭಾರತೀಯರು ಅನ್ನೋದೇ ಸನ್ನಿ ಪ್ರೀತಿಗೆ ಕಾರಣ.ಸನ್ನಿ ಭಾರತೀಯ ಮೂಲದವಳಾದ್ರೂ, ನೆಲೆನಿಂತಿದ್ದು ಕೆನಡಾದಲ್ಲಿ ಬದುಕಿಗಾಗಿ ಮಾಡ್ತಾ ಇದ್ದಿದ್ದು ಪಾರ್ನ್ ಮೂವಿಗಳಲ್ಲಿ ನಟಿಸೋ ವೃತ್ತಿ. ಆದ್ರೆ ಸನ್ನಿಯನ್ನ ಬಾಲಿವುಡ್ ಕೈ ಬೀಸಿ ಕರೀತು. ಆರಂಭದಲ್ಲಿ ಭಾರತದಲ್ಲಿ , ಅದ್ರಲ್ಲೂ ಬಾಲಿವುಡ್ ನಲ್ಲಿ ತಾನು ನೆಲೆನಿಲ್ಲೋದಕ್ಕೆ ಸಾಧ್ಯನಾ ಅನ್ನೋ ಅನುಮಾನ ಸನ್ನಿಗಿತ್ತಂತೆ. ಆದ್ರೆ ಭಾರತೀಯ ಸಿನಿಪ್ರಿಯರು ಸನ್ನಿಯನ್ನ ಅಪ್ಪಿ-ಒಪ್ಪಿಕೊಂಡ್ರು.

ಇದೀಗ ಕೇರಳಿಗರ ಕಷ್ಟಕ್ಕೆ ಸಹಾಯ ಮಾಡಿದ್ದಾಳೆ. ಸಿನಿಮಾ ಅವಕಾಶಗಳು ಸಿಕ್ತಿವೆ.. ಕೋಟಿ ಕೋಟಿ ಹಣ ಸಂಭಾವನೆ ಯಾಗಿ ಬರ್ತಿದೆ.ನನಗ್ಯಾಕೆ ಜನರ ಕಷ್ಟ.. ಅಂತ ಸನ್ನಿ ಸುಖವಾಗಿ ಬದುಕು ಕಳೀತಿಲ್ಲ. ಬದಲಾಗಿ ಯಾರಾದ್ರೂ ಕಷ್ಟದಲ್ಲಿ ಇದ್ದಾರನ್ನೋದು ಗೊತ್ತಾದ್ರೆ ಸ್ಪಂದಿಸ್ತಾರೆ. ಅಷ್ಟಕ್ಕು ಸನ್ನಿಗೆ ಎತ್ತರಕ್ಕೆ ಏರಿದಾಗ ಮೈಮರೆಯಬಾರದು ಅನ್ನೋ ಪಾಠವನ್ನ ಕಲಿಸಿರೋದೇ ಆಕೆಯ ಬದುಕೇ. ಎಷ್ಟೇ ಎತ್ತರದಲ್ಲಿದ್ರೂ ಸನ್ನಿಯಲ್ಲಿ ಒಂದು ಸಹೃದಯತೆ ಇದೆ ಅಂದ್ರೆ ಅದಕ್ಕೆ ಆಕೆಯ ಹಿಂದಿನ ಬದುಕು ಕಲಿಸಿರೋ ಪಾಠಗಳೇ ಕಾರಣ ಅಂದ್ರೆ ತಪ್ಪಾಗಲ್ಲ.

ಬೈದವರೆನ್ನ ಬಂಧುಗಳೆನ್ನುತ್ತಿರೋ ಸನ್ನಿಗೆ ಹೊಡೀರಿ ಸಲಾಮೊಂದು:ಹೌದು ಸನ್ನಿ ಲಿಯೋನ್ ಅಂದ್ರೆ ಬರಿ ಮಾದಕತೆ ಅಲ್ಲ. ಪಾರ್ನ್ ಸಿನಿಮಾಗಳನ್ನ ಬಿಟ್ಟು ಬಂದು ಮೇನ್ ಸ್ಟ್ರೀಮ್ ಸಿನಿಮಾಗಳಲ್ಲಿ ನಟಿಸ್ತಾ ಇದ್ದರೂ ಸನ್ನಿಗೆ ಸಿಗೋವೆಲ್ಲಾ ಹಸಿಬಿಸಿ ಮಾದಕತೆಯ ಪಾತ್ರಗಳೇ. ಸೌತ್ ಸಿನಿಇಂಡಸ್ಟ್ರಿಯಲ್ಲಂತೂ ಸನ್ನಿ ಅಂದ್ರೆ ಹಸಿ ಬಿಸಿ ಐಟಂ ಸಾಂಗ್ ಗೆ ಸೀಮಿತ ಅನ್ನುವಂತೆ ಆಗಿದೆ.ಆದ್ರೆ ಇಂಥವುಗಳಿಂದ ಸನ್ನಿಯೇನೂ ಬೇಸರಿಸಿಕೊಂಡಿಲ್ಲ. ಇಂಥಾ ಚಿತ್ರಗಳಿಂದ ಬರೋ ಆದಾಯವನ್ನ ಆಕೆ ಒಳ್ಳೆ ಕೆಲಸಗಳಿಗೆ ಬಳಸ್ತಾ ಇದ್ದಾಳೆ. ಸನ್ನಿ ಮಾಡ್ತಿರೋ ಸಕಾರ್ಯಗಳ ಬಗ್ಗೆ ಕೇಳಿದ್ರೆ ಸನ್ನಿ ಅಂದ್ರೆ ಬರಿ ಮಾದಕತೆಯಲ್ಲ ಆಕೆಯದ್ದು ಮಾದರಿ ಕಥೆ ಅನ್ನೋದು ಗೊತ್ತಾಗುತ್ತೆ.

ಕಳೆದ ವರ್ಷ ಜುಲೈ ನಲ್ಲಿ ಮಹಾರಾಷ್ಟ್ರದ ಲಾತೂರ್ ನಿಂದ ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ಒಂದು ಅನಾಥ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಆ ಮಗುವಿಗೆ ನಿಶಾ ಕೌರ್ ವೆಬರ್ ಎಂದು ನಾಮಕರಣ ಮಾಡಿ, ತಾವೇ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಅನಾಥವಾದ ಮಗುವಿಗೆ ಸನ್ನಿ ಮತ್ತವರ ಪತಿ, ತಾಯಿ-ತಂದೆಯ ಪ್ರೀತಿಯನ್ನ ಕೊಡ್ತಾ ಇದ್ದಾರೆ. ಹೆಣ್ಣುಮಗು ಅನ್ನೋ ಕಾರಣಕ್ಕೆ ಯಾರೋ ಬಿಟ್ಟು ಹೋಗಿದ್ದ ಮಗುವಿಗೆ ಸನ್ನಿ ಒಂದು ಸುಂದರ ಬದುಕು ಕಟ್ಟಿಕೊಡೋದಕ್ಕೆ ಹೊರಟಿದಾರೆ.

ಇನ್ನೂ ಸನ್ನಿ ಬರೀ ಮಗುವನ್ನಷ್ಟೇ ದತ್ತು ಪಡೆದಿಲ್ಲ. ಮಕ್ಕಳಿಂದ ದೂರವಾಗಿರೋ ಇಬ್ಬರು ವೃದ್ದ ದಂಪತಿಗಳನ್ನ ದತ್ತು ಪಡೆದು ಅವರನ್ನ ಸಾಕ್ತಾ ಇದ್ದಾರೆ.   ಸನ್ನಿಲಿಯೋನ್ ಮೂಲತಃ ಸಿಖ್ ಧರ್ಮಕ್ಕೆ ಸೇರಿದವರು. ಆ ಧರ್ಮದ ಪ್ರಕಾರ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು ಪುಣ್ಯದ ಕೆಲಸ. ವಯಸ್ಸಾದವರ ಸೇವೆ ಮಾಡಿದರೆ, ದೇವರ ಸೇವೆ ಮಾಡಿದ ಹಾಗೆ. ಅದೇ ಕಾರಣದಿಂದ ಸನ್ನಿ ಲಿಯೋನ್ ವಯಸ್ಸಾಗಿರುವ ಅಜ್ಜ, ಅಜ್ಜಿಯನ್ನು ದತ್ತು ತೆರೆದುಕೊಂಡಿದ್ದಾರಂತೆ. ಆ ಹಿರಿ ಜೀವಗಳ ಆರೈಕೆಯನ್ನು ಅವರು ಮಾಡುತ್ತಿದ್ದಾರೆ.

ಈಗಲೂ ಕ್ಯಾನ್ಸರ್ ಪೀಡಿತರಿಗೆ ನೆರವಾಗೋ ಎನ್.ಜಿ.ಓ ಒಂದರ ಜೊತೆಗೆ ಕೈ ಜೋಡಿಸಿದಾರೆ. ಪೇಟಾ ಸಂಸ್ಥೆಯ ಜೊತೆ ಕೈ ಜೋಡಿಸಿ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಅಂತ ಸಾರ್ತಾ ಇದಾರೆ./. ಹೇಳ್ತಾ ಹೋದ್ರೆ ಸನ್ನಿ ಬಗೆಗೆ ಗೌರವ ಮೂಡುತ್ತೆ. ಅರೇ ಸನ್ನಿಗೆ ಇಂಥದ್ದೂ ಒಂದು ವ್ಯಕ್ತಿತ್ವ ಇದೆಯಾ ಅಂತ ಅಚ್ಚರಿಯಾಗುತ್ತೆ. ಸನ್ನಿಯೆಡೆಗಿನ ಮಾದಕ ನೋಡ ಬದಲಾಗಿ ಗೌರವದ ಭಾವ ಮೂಡುತ್ತೆ.ಒಟ್ನಲ್ಲಿ ಸನ್ನಿಯ ಕಷ್ಟದ ಬದುಕು ಆಕೆಯಲ್ಲಿ ಒಂದು ಮಾನವೀಯತೆಯನ್ನ ಹೃದಯವಂತಿಕೆಯನ್ನ ಜೀವಂತವಾಗಿಟ್ಟಿದೆ. ಕೇರಳ ಪ್ರವಾಹದ ಸಮಯದಲ್ಲಿ ಅದು ಮತ್ತೊಮ್ಮೆ ಬಹಿರಂಗವಾಗಿದೆ. ಸನ್ನಿ ಅಂದ್ರೆ ಮಾದಕತೆ ಅಲ್ಲ ಅವಳದ್ದು ಮಾಧರಿ ಕಥೆ ಅನ್ನೋದು ಕೂಡ ಮತ್ತೊಮ್ಮೆ ಜಗಜ್ಜಾಹಿರಾಗಿದೆ.

LEAVE A REPLY

Please enter your comment!
Please enter your name here