Home District ಸನ್ನಿ ಲಿಯೋನ್, ಕಾಜಲ್ ಅಗರವಾಲ್ ಆಯ್ತು, ಈಗ ಹೊಲಕಾಯ್ತಿದ್ದಾರೆ BJP ನಾಯಕರು..?! ಬೆಳೆಗಳನ್ನು ರಕ್ಷಿಸ್ತಾರೆ ನರೇಂದ್ರ...

ಸನ್ನಿ ಲಿಯೋನ್, ಕಾಜಲ್ ಅಗರವಾಲ್ ಆಯ್ತು, ಈಗ ಹೊಲಕಾಯ್ತಿದ್ದಾರೆ BJP ನಾಯಕರು..?! ಬೆಳೆಗಳನ್ನು ರಕ್ಷಿಸ್ತಾರೆ ನರೇಂದ್ರ ಮೋದಿ, ಅಮಿತ್ ಷಾ, ಬಿ.ಎಸ್. ಯಡಿಯೂರಪ್ಪ,..!?

695
0
SHARE

ಹೊಲ, ತೋಟದಲ್ಲಿ ಬಂದ ಬೆಳೆ ಪ್ರಾಣಿ ಪಕ್ಷಿ ಪಾಲಾಗಬಾರದು ಅಂತ ರೈತರು ಬೆದರುಗೊಂಬೆ ಹಾಕೋದು ಮೊದಲಿನಿಂದಲೂ ವಾಡಿಕೆ… ರಾಕ್ಷಸ ರೂಪದಲ್ಲಿ ಬೆದರುಗೊಂಬೆಗಳನ್ನು ಫಸಲು ಮಧ್ಯದಲ್ಲಿ ಹಾಕಿ ಪ್ರಾಣಿ ಪಕ್ಷಿಗಳನ್ನು ಓಡಿಸುವ ಯತ್ನ ಮಾಡುತ್ತಾರೆ ಅನ್ನದಾತರು.. ಈ ಹಿಂದೆ ಆಂಧ್ರಪ್ರದೇಶದಲ್ಲಿ ನಟಿ ಕಾಜೋಲ್ ಅಗರವಾಲ್ ಚಿತ್ರ ಬಳಸಿ ಫಸಲು ಕಾಪಾಡಿಕೊಂಡಿದ್ದ ಒಬ್ಬ ರೈತ..ಉತ್ತರ ಭಾರತದಲ್ಲಿ ಒಬ್ಬ ರೈತ ಎಲ್ಲರಿಗಿಂತ ವಿಭಿನ್ನವಾಗಿ ಯೋಚನೆ ಮಾಡಿ ನೀಲಿಚಿತ್ರ ತಾರೆ ಸನ್ನಿಲಿಯೋನ್ ಭಾವಚಿತ್ರ ಹಾಕಿ ಎಲ್ಲರ ಗಮನ ಸೆಳೆದಿದ್ದ…

ಆದ್ರೆ ಸನ್ನಿಲಿಯೋನ್ ಚಿತ್ರ ಹಾಕಿದ್ದು ಉತ್ತಮವಾಗಿ ಬಂದಿದ್ದ ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳಬಾರದು ಅಂತಾ ಈ ಐಡಿಯಾ ಮಾಡಿದ್ದ…ಈ ರೈತರಿಂದ ಪ್ರೇರಿಪಿತರಾಗಿರೋ ಚಿಕ್ಕಮಗಳೂರು ರೈತರು ವಿನೂತನ ಐಡಿಯಾ ಮಾಡಿದ್ದಾರೆ… ಯೆಸ್ ತಮ್ಮ ತೋಟದ ಬೆಳೆಗಳನ್ನು ಪ್ರಾಣಿ ಮತ್ತು ಪಕ್ಷಿಗಳಿಂದ ರಕ್ಷಿಸಲು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಗ್ರಾಮದ ರೈತರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಚ್ರಾಧ್ಯಕ್ಷ ಅಮಿತ್ ಶಾ ಅವರ ಕಟೌಟ್ ಗಳನ್ನು ಬಳಸಿಕೊಂಡಿದ್ದಾರೆ…

ಕಳೆದ ವಿಧಾನ ಸಭೆ ಚುನಾವಣೆ ಪ್ರಚಾರದ ವೇಳೆ ಪಬ್ಲಿಸಿಟಿಗಾಗಿ ಬಳಸಲಾಗಿದ್ದ ಕಟೌಟ್ ಗಳನ್ನು ಲಕ್ಕವಳ್ಳಿ ರೈತರು ತಮ್ಮ, ಹೊಲದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಇಟ್ಚಿದ್ದಾರೆ, ಈ ದೊಡ್ಡ ದೊಡ್ಡ ಕಟೌಟ್ ಗಳು ಕೀಟಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತಿವೆ.ಕಾಡುಪ್ರಾಣಿಗಳು ಮತ್ತು ಪಕ್ಷಿಗಳು ನಮ್ಮ ಹೊಲಕ್ಕೆ ಬಂದು ಬೆಳೆಗಳನ್ನು ನಾಶ ಮಾಡುತ್ತಿದ್ದವು. ಮನುಷ್ಯರಂತಿರುವ ಕಟೌಟ್ ಗಳು ನಮ್ಮ ಬೆಳೆಗಳನ್ನು ರಕ್ಷಿಸುತ್ತಿವೆ…

ಜೊತೆಗೆ ಬಂಟಿಂಗ್ಸ್ ಹೋರ್ಡಿಂಗ್, ಫ್ಲೆಕ್ಸ್ ಮತ್ತು ಬ್ಯಾನರ್ ಇವುಗಳನ್ನೆಲ್ಲಾ ರ್ಯಾಲಿ ನಂತರ ಬಿಸಾಡಲಾಗಿತ್ತು,ಅವುಗಳನ್ನು ನಾವು ಕಾರ್ಪೆಟ್ ರೀತಿ ಬಳಸಿಕೊಂಡು ಆಹಾರ ಧಾನ್ಯ ಹಾಕುತ್ತೇವೆ, ನಮ್ಮ ತೋಟಗಳಿಗೆ ಬೇಲಿಯ ರೀತಿ, ಬಾತ್ ರೂಂ ಮತ್ತು ಟಾಯ್ಲೆಟ್ ಗಳಿಗೆ ಗೋಡೆಗಳ ರೀತಿ ಬಳಸಿಕೊಳ್ಳುತ್ತೇವೆ, ಜೊತೆಗೆ, ಕಲರ್ ಫುಲ್ ಬ್ಲಂಟಿಂಗ್ ಗಳನ್ನು ನಮ್ಮ ತೋಟದ ಸುತ್ತಮುತ್ತ ಅಂಟಿಸಿ ಪಕ್ಷಿಗಳನ್ನ ಎದುರಿಸಲು ಬಳಸಲಾಗುತ್ತದೆ ಎಂದು ಅಲ್ಲಿನ ರೈತರೊಬ್ಬರು ತಿಳಿಸಿದ್ದಾರೆ…

ಪ್ರಧಾನಿ ಮೋದಿ, ಮಾಸ್ಟರ್ ಮೈಂಡ್ ಅಮಿತ್ ಶಾ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿಯನ್ನೇ ಅಧಿಕಾರಕ್ಕೆ ತರಲು ಹಪಹಪಿಸುತ್ತಿದ್ದಾರೆ. ಇತ್ತ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳ್ಕೊಂಡು ಅತಂತ್ರರಾಗಿ ಸರ್ಕಾರ ಉರುಳಿಸೋಕೆ ಶತಪ್ರಯತ್ನ ನಡೆಸ್ತಿದ್ದಾರೆ. ಆದ್ರೆ, ಕಾಫಿನಾಡಿನ ರೈತರು ಈ ಮೂವರನ್ನು ತಮ್ಮ ಜಮೀನು ಕಾಯಲು ಬಿಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದವರು ಬರೀಗೈಲಿ ಹೋಗ್ಬಾರ್ದೆಂದು ಬಂದವರೆಲ್ಲಾ ತಮ್ಮ ನಾಯಕರ ಭಾವಚಿತ್ರದ ಕಟೌಟ್ಗಳನ್ನ ಹೊತ್ಕೊಂಡ್ ಹೋಗಿದ್ರು. ಇದನ್ನೆಲ್ಲಾ ಕಂಡ ಬಿಜೆಪಿಯವ್ರು ಬಿಜೆಪಿ ಅಧಿಕಾರಕ್ಕೆ ಬರೋದು ಗ್ಯಾರಂಟಿ ಎಂದು ಮನದಲ್ಲಿ ಮೊಸರನ್ನ ತಿಂತಿದ್ರು…

ಆದ್ರೆ, ರೈತರ ಆ ಕಟೌಟ್ ಪ್ರೀತಿ ಈಗ ಬಟಾಬಯಲಾಗಿದೆ. ಅಂದು ರೈತರು ತಲೆಮೇಲೆ ಹೊತ್ತುಕೊಂಡು ಹೋದ ಮೋದಿ, ಅಮಿತ್ ಶಾ, ಯಡಿಯೂರಪ್ಪನನ್ನ ಹೊಲ-ಗದ್ದೆ ಕಾಯಲು ಬಿಟ್ಟಿದ್ದಾರೆ. ಮಳೆ ಚೆನ್ನಾಗಿ ಆಗಿರೋದ್ರಿಂದ ಹೊಲ-ಗದ್ದೆಗಳಲ್ಲಿ ನಾಟಿ ಮಾಡಿದ್ದಾರೆ. ಭತ್ತದ ಮಡಿಗಳನ್ನ ಪ್ರಾಣಿ-ಪಕ್ಷಿಗಳು ತಿನ್ನುತ್ತಿವೆ. ಅದಕ್ಕಾಗಿ ಇವರೆಲ್ಲಾ ಇರೋದು ನಮ್ಮ ಉದ್ಧಾರಕ್ಕೆ ಈಗಾದ್ರು ನಮ್ಮ ಉದ್ದಾರ ಮಾಡಲಿ ಎಂದು ಪ್ರಾಣಿ ಪಕ್ಷಿಗಳಿಗೆ ಹೆದರಿಸೋಕೆ ಇವರನ್ನೆಲ್ಲಾ ಕಾವಲು ಬಿಟ್ಟಿದ್ದಾರೆ. ಆದ್ರೆ, ಕೆಲ ಪಕ್ಷಿಗಳು ಇವರನ್ನ ನೋಡಿ ಇವರು ಮೋದಿ, ಅಮಿತ್ ಶಾ, ಯಡಿಯೂರಪ್ಪರಂತೆ ಅಷ್ಟೆ, ಅವರೇ ಅಲ್ಲ ಎಂದು ಅವರ ಹೆಗಲ ಮೇಲೆ ಕೂರ್ತಿವೆ…

LEAVE A REPLY

Please enter your comment!
Please enter your name here