Home Crime ಸಮಾಜಕ್ಕೆ ಮಾದರಿಯಾಗ ಬೇಕಿದ್ದ ಮಗ ಬೆಟ್ಟಿಂಗ್ ದಂಧೆಗೆ ಬಲಿ..! ತಂದೆ-ತಾಯಿಗೆ ಆಸರೆಯಾಗಬೇಕಿದ್ದ ಮಗ ಬಾರದ ಲೋಕಕ್ಕೆ...

ಸಮಾಜಕ್ಕೆ ಮಾದರಿಯಾಗ ಬೇಕಿದ್ದ ಮಗ ಬೆಟ್ಟಿಂಗ್ ದಂಧೆಗೆ ಬಲಿ..! ತಂದೆ-ತಾಯಿಗೆ ಆಸರೆಯಾಗಬೇಕಿದ್ದ ಮಗ ಬಾರದ ಲೋಕಕ್ಕೆ ಪಯಣ..

1500
0
SHARE

ಪೋಷಕರು ತಾವು ಓದದಿದ್ರೂ… ತಮ್ಮ ಮಗ ಚೆನ್ನಾಗಿ ಓದಿ ಜೀವನದಲ್ಲಿ ಮುಂದೆ ಬರಲಿ ಅಂತ, ಆ ಬಡ ಕಟುಂಬವೊಂದು… ಪ್ರತಿಷ್ಠಿತ ಕಾಲೇಜಿನಲ್ಲಿ ಮಗನನ್ನು ಪದವಿ ಓದಿಸುತ್ತಿದ್ರು.

ಆದ್ರೆ ತಂದೆ- ತಾಯಿಯ ಕಷ್ಟ ಅರಿಯದ ಆ ವಿದ್ಯಾರ್ಥಿ, ಬಾರದ ಲೋಕಕ್ಕೆ ತೆರಳಿದ್ದಾನೆ. ಮನೆಯಲ್ಲಿ ಸಾಕಿ ಬೆಳಸಿದ ತಂದೆ-ತಾಯಿಗೆ ಆಸರೆಯಾಗಬೇಕಿದ್ದ ಮಗ ತನ್ನ ಹವ್ಯಾಸಗಳ ಹಿಂದೆ ಹೋಗಿ ಇದೀಗ ಸ್ಮಶಾನ ಹೆಣವಾಗಿದ್ದಾನೆ.ಇತನ ಹೆಸರು ಮದನಗೌಡ. ದೊಡ್ಡಬಳ್ಳಾಪುರ ತಾಲೂಕಿನ ಶಿವಪುರ ಗ್ರಾಮದ ನಿವಾಸಿ. ನೂರಾರು ಕನಸಗಳನ್ನು ಹೊತ್ತು ವಿದ್ಯಾಭ್ಯಾಸ ಮಾಡಲು ಚಿಕ್ಕಬಳ್ಳಾಪುರ ನಗರದ ಹೊರಹೊಲಯದಲ್ಲಿರುವ ಬಿ.ಜಿ.ಎಸ್ ಮ್ಯಾನೇಜ್ ಮೆಂಟ್ ಕಾಲೇಜಿಗೆ ಸೇರಿದ್ದನು. ಮೊದಲೇ ತಂದೆಯಿಲ್ಲದ ಈತನಿಗೆ ಹೆತ್ತ ತಾಯಿ ಹಗಲು ರಾತ್ರಿ ಕಷ್ಟಪಟ್ಟು. ಮಗ ಚೆನ್ನಾಗಿ ಓದಲಿ ಅಂತ ಪ್ರತಿಷ್ಠಿತ ಕಾಲೇಜಿನಲ್ಲಿ ಬಿ.ಕಾಂ ಓದಿಸುತ್ತಿದ್ರು, ಆದ್ರೆ ತಾಯಿಯ ಕಷ್ಟ ಅರಿಯದ ಈ ವಿದ್ಯಾರ್ಥಿ, ಕಾಲೇಜಿನ ಎದುರುಗಡೆಯೆ ಹೊಂಗೆ ಮರದಲ್ಲಿ ವೈರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶನಿವಾರ ಊರಿಗೆ ಹೋಗಿದ್ದ ಮದನಗೌಡ, ನಿನ್ನೆ ಸಂಜೆ ರೂಮ್ ಗೆ ಬಂದಿದ್ದಾನೆ, ರಾತ್ರಿಯೆಲ್ಲಾ ಲವಲವಿಕೆಯಿಂದ ಇದ್ದು ಸ್ನೇಹಿತರ ಜೊತೆ ಮಾತನಾಡಿದ್ದಾನೆ, ಆದ್ರೆ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಆತ ಮರದಲ್ಲಿ ನೇಣಿಗೆ ಶರಣಾಗಿದ್ದಾನೆ. ಮಧ್ಯರಾತ್ರಿ ಒಂದೆ ಪೋನ್ ನಂಬರ್ ಗೆ ಹತ್ತಾರು ಬಾರಿ ಕರೆ ಮಾಡಿದ್ದಾನೆ, ಆದ್ರೆ ಆತನ ರೂಮ್‌ಮೇಟ್ಸ್ ಹೇಳೋದೆ ಬೇರೆ ಆಗಿದೆ.. ಇತ್ತೀಚೆಗೆ ಇವನು ಕ್ರಿಕೆಟ್ ಬೆಟ್ಟಿಂಗ್ ಆಡ್ತಿದ್ದ, ಅದರಲ್ಲಿ ಅವನು ಹಲವು ಬಾರಿ ನಷ್ಟ ಅನುಭವಿಸಿದ್ದ. ಹೀಗಾಗಿ ಅತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಎಸ್.ಜೆ.ಸಿ.ಐ.ಟಿ ಹಾಗೂ ಬಿ.ಜಿ.ಎಸ್ ಮ್ಯಾನೇಜ್ ಮೆಂಟ್ ಕಾಲೇಜಿನ ಪಕ್ಕದ ತುಮಕಲಹಳ್ಳಿ ಗ್ರಾಮದಲ್ಲಿ, ಗಾಂಜಾ, ಡ್ರಗ್ಸ್, ಬೆಟ್ಟಿಂಗ್ ಧಂದೆ ಸಕ್ರೀಯವಾಗಿದೆಯಂತೆ, ನಿನ್ನೆ ನಡೆದ ಆಸ್ಟ್ರೇಲಿಯಾ ಹಾಗೂ ಇಂಡಿಯಾ ಕ್ರಿಕೇಟ್ ಮ್ಯಾಚ್ ಗೆ ಬೆಟ್ಟಿಂಗ್ ನಲ್ಲಿ ಹಣ ತೊಡಗಿಸಿರುವ ಬಗ್ಗೆ ನಂಧಿಗಿರಿಧಾಮ ಠಾಣೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಮೃತನ ಸ್ನೇಹಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here