ನಾವು ರಾಜಕಾರಣ ಮಾಡೋಕೆ ಈ ಕುರ್ಚಿ ಮೇಲೆ ಕುಳಿತಿರೋದು.. ಯಾವುದೇ ಸಮಾಜ ಸೇವೆ ಮಾಡಲಿಕ್ಕೆ ಅಲ್ಲ ಅಂತಾ ಕೇಂದ್ರ ಸಚಿವ, ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ. ಉ.ಕ ಜಿಲ್ಲೆ ಶಿರಸಿಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತಮಾಡಿದ ಸಂಸದ ಹೆಗಡೆ, ಯಾರೋ ಕೇಳಬಹುದು ನೀವ್ ರಾಜಕಾರಣ ಮಾಡ್ತೀರಾ ಅಂತ.
ಹೌದು ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ. ಅದಕ್ಕೋಸ್ಕರನೇ MLA, MP ಗಳಾಗಿದ್ದು. ಸಮಾಜ ಸೇವೆ ಮಾಡಲು ಈ ಕುರ್ಚಿಯ ಮೇಲೆ ಬಂದು ಕುಳಿತಿಲ್ಲ. ರಾಜಕಾರಣ ಬಿಟ್ಟು ಬೇರೇನೂ ಮಾಡಲಿಕ್ಕೆ ಬರೋದಿಲ್ಲ. ರಾಜಕಾರಣಾನೇ ಮಾಡೋದು ಅಂತಾ ಹೇಳಿ ಅಂತಾ ಕಾರ್ಯಕರಿಣಿ ಸಭೆ ಉದ್ದೇಶಿಸಿ ಮಾತನಾಡಿದ್ರು.
ಇನ್ನು ಮಾಧ್ಯಮದವರು ಹೇಗೆ ಬರ್ಕೊಳ್ತಿರೋ ಬರ್ಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿ ಅಂತಾ ಲೇವಡಿ ಮಾಡಿದ್ರು. ಆದ್ರೆ ಜನಪ್ರತಿನಿಧಿಗಳು ಸಮಾಜ ಸೇವೆ ಮರೆತು ಕೇವಲ ರಾಜಕಾರಣಕ್ಕೆ ಮೀಸಲಾಗಿದ್ದಾರ ಎಂಬ ಪ್ರಶ್ನೆ ಮೂಡುತ್ತಿದೆ. ಸಂಸದರಾಗಿ ಇದೀಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ ಸಮಾಜ ಸೇವೆ ಮರೆತು ಕೇವಲ ರಾಜಕಾರಣ ಮಾಡೋಕೆ ಮಾತ್ರ ರಾಜಕೀಯಕ್ಕೆ ದುಮುಕಿದ್ರ..?
ಜನರಿಗೆ ಎಷ್ಟೋ ಭರವಸೆ ನೀಡೋ ಜನ ಪ್ರತಿನಿಧಿಗಳ ಬಾಯಲ್ಲಿ ಸಮಾಜ ಸೇವೆ ಮರೆತಿರುವ ಮಾತು ಕೇಳಿ ಬಂದಿದೆ. ಇನ್ನು ಜನರಿಗೆ ಯೋಜನೆ ನೀಡೋದು ಯಾವ ಸೇವೆ ಅಂತ ಕೂಡ ಪ್ರಶ್ನೆ ಉದ್ಬವವಾಗತ್ತೆ.