Home KARNATAKA ಸರಣಿ ಗೆಲುವಿನ ಅಮಲಿನಲ್ಲಿದ್ದ ಭಾರತಕ್ಕೆ ಕಿವೀಸ್ ಗುದ್ದು..! 4ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್ ಗಳ...

ಸರಣಿ ಗೆಲುವಿನ ಅಮಲಿನಲ್ಲಿದ್ದ ಭಾರತಕ್ಕೆ ಕಿವೀಸ್ ಗುದ್ದು..! 4ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್ ಗಳ ಹೀನಾಯ ಸೋಲು..!

234
0
SHARE

ಹ್ಯಾಮಿಲ್ಟನ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಹೀನಾಯ ಸೋಲು ಕಂಡಿತು. ಮಾರಕ ಬೌಲಿಂಗ್ ದಾಳಿ ನಡೆಸಿದ ಕಿವೀಸ್ ಟೀಂ ಇಂಡಿಯಾ ಬ್ಯಾಟಿಂಗ್ ಬೆನ್ನೆಲುಬನ್ನ ಮುರಿದು ಹಾಕಿದ್ರು..

ಇದರೊಂದಿಗೆ ಸತತ ಗೆಲುವಿನ ಉಮೇದಿಯಲ್ಲಿ ತೇಲುತ್ತಿದ್ದ ಬ್ಲೂಬಾಯ್ಸ್ ಆರ್ಭಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದ್ರು.ಏಕದಿನ ಸರಣಿ ಗೆದ್ದ ಅಮಲಿನಲ್ಲಿದ್ದ ಟೀಂ ಇಂಡಿಯಾಗೆ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಪ್ರಬಲವಾದ ಗುದ್ದು ನೀಡಿದೆ. ಹ್ಯಾಮಿಲ್ಟನ್ಅಂಗಳದಲ್ಲಿ ಬ್ಲೂ ಬಾಯ್ಸ್ ಮೇಲೆ ಮುಗಿಬಿದ್ದ ಬ್ಲ್ಯಾಕ್ ಕ್ಯಾಪ್ಸ್, ಘನಘೋರ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣರಾದ್ರು.

ಅಲ್ದೇ 8 ವಿಕೆಟ್ ಗಳಿಂದ ಪಂದ್ಯ ಗೆದ್ದು, ವೈಟ್ ವಾಶ್ ಕನಸು ಕಾಣುತ್ತಿದ್ದ ಭಾರತಕ್ಕೆ ಭರಿಸಲಾಗದ ಪೆಟ್ಟು ನೀಡಿದ್ರು.ಸರಣಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಮೆನ್ ಇನ್ ಬ್ಲೂ 4ನೇ ಪಂದ್ಯದಲ್ಲೂ ವಿಜಯದ ಓಟ ಮುಂದುವರೆಸುವ ಇರಾದೆಯಲ್ಲಿತ್ತು. ಆದ್ರೆ ವಿರಾಟ್ ಕೊಹ್ಲಿ ಮತ್ತು ಎಂ.ಎಸ್.ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸಿದ ರೋಹಿತ್ ಶರ್ಮಾ ತಮ್ಮ 200ನೇ ಏಕದಿನ ಪಂದ್ಯದಲ್ಲಿ ಸೋಲಿನ ಮುಖಭಂಗ ಅನುಭವಿಸಿದ್ರು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಟ್ರೆಂಟ್ ಬೋಲ್ಟ್ ಘಾತಕ ದಾಳಿಗೆ ತತ್ತರಿಸಿತು. ಶಿಖರ್ ಧವನ್ 13, ರೋಹಿತ್ ಶರ್ಮಾ 07, ಡೆಬ್ಯು ಹಿರೋ ಶುಭಮನ್ ಗಿಲ್ 09, ಕೇದಾರ್ ಜಾಧವ್ 01 ಮತ್ತು ಹಾರ್ದಿಕ್ ಪಾಂಡ್ಯಾ 16 ರನ್ ಗಳಿಸಿ ಬೋಲ್ಟ್ ತೋಡಿದ್ದ ಖೆಡ್ಡಾಕ್ಕೆ ಬಲಿಯಾದ್ರು.

ಉಳಿದಂತೆ ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು ಶೂನ್ಯ ಸಂಪಾದಿಸಿದ್ರೆ, ಬಾಲಂಗೋಷಿಗಳಾದ ಭುವಿ, ಕುಲ್ದೀಪ್ ಮತ್ತು ಚಾಹಲ್ ಮೂರಂಕಿ ರನ್ ಗಳಿಸಲಷ್ಟೆ ಶಕ್ತರಾದ್ರು. ಹಾಗಾಗಿ ಕಳಪೆ ಬ್ಯಾಟಿಂಗ್ ನಡೆಸಿದ ಭಾರತ 30.5 ಓವರ್ ಗಳಲ್ಲಿ ಕೇವಲ 92 ರನ್ ಗಳಿಗೆ ಸರ್ವಪತನವಾಯ್ತು. ಬೋಲ್ಟ್ 5, ಗ್ರ್ಯಾಂಡ್ ಹೋಮ್ 3 ವಿಕೆಟ್ ಪಡೆದು ಮಿಂಚಿದ್ರು.

92 ರನ್ ಗಳ ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಕಿವೀಸ್ 14.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ ಗುರಿ ಮುಟ್ಟಿತು. ಮಾರ್ಟಿನ್ ಗಪ್ಟಿನ್ 14, ವಿಲಿಯಂಸನ್ 11, ಹೆನ್ರಿ ನಿಕೋಲ್ಸ್ ಅಜೇಯ 30 ಮತ್ತು ರಾಸ್ ಟೇಲರ್ ಅಜೇಯ 37 ರನ್ ಸಿಡಿಸಿ ಗೆಲುವಿನ ರೂವಾರಿಗಳಾದ್ರು.
ಪ್ಲೋ..

LEAVE A REPLY

Please enter your comment!
Please enter your name here