Home Elections 2018 “ಸರ್ಕಾರದ ಬೊಕ್ಕಸವನ್ನು ಲೂಟಿಮಾಡ್ತಿರೋದೇ ದೇವೇಗೌಡರ ಕುಟುಂಬ, ಡಿಕೆಶಿಗೆ ಚೆಸ್ ಪಾನ್ ಮೂವ್ ಮಾಡೋದು ಚೆನ್ನಾಗಿ ಗೊತ್ತಿದೆ”-B.S.ಯಡಿಯೂರಪ್ಪ…

“ಸರ್ಕಾರದ ಬೊಕ್ಕಸವನ್ನು ಲೂಟಿಮಾಡ್ತಿರೋದೇ ದೇವೇಗೌಡರ ಕುಟುಂಬ, ಡಿಕೆಶಿಗೆ ಚೆಸ್ ಪಾನ್ ಮೂವ್ ಮಾಡೋದು ಚೆನ್ನಾಗಿ ಗೊತ್ತಿದೆ”-B.S.ಯಡಿಯೂರಪ್ಪ…

345
0
SHARE

ಸರ್ಕಾರದ ಬೊಕ್ಕಸವನ್ನು ಲೂಟಿಮಾಡ್ತಿರೋದೇ ದೇವೇಗೌಡರ ಕುಟುಂಬ ಅಂತಾ ವಿಪಕ್ಷ ನಾಯಕ ಬಿಎಸ್, ಯಡಿಯೂರಪ್ಪ ಆರೋಪಿಸಿದ್ದಾರೆ.. ಬೆಂಗಳೂರಿನ ಅರಮನೆ ಮೈದಾನದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಮಕ್ಕಳು ಹಗರಣದ ರುವಾರಿಗಳು, ದೇವೇಗೌಡರ ಕುಟುಂಬ ವರ್ಗದವರ ಭೂ ಅಕ್ರಮದ ಬಗ್ಗೆ ಮಾಜಿ ಸಚಿವ ಓಲೆ ಮಂಜು ಬಹಿರಂಗ ಪಡಿಸಿದ್ದಾರೆ.

ಜಿಲ್ಲಾಧಿಕಾರಿಯವರು ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳದೇ ಇದ್ದರೆ ನಾವೂ ಹೋರಾಟ ಮಾಡ್ತೇವೆ ಅಂತಾ ಕಿಡಿಕಾರಿದ್ದಾರೆ..ಇನ್ನು ಈಗಿನ ಸರ್ಕಾರ ಕಮೀಷನ್ ಏಜೆಂಟ್ ಸರ್ಕಾರ… ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆಯಲ್ಲಿ ಕಮೀಷನ್ ಇಲ್ಲದೆ ಯಾವ ಅಭಿವೃದ್ಧಿ ಕಾರ್ಯವೂ ನಡೆಯೋದಿಲ್ಲ ಅಂತಾ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ರು…

ಇದೇ ವೇಳೆ ಜಲಸಮಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಬಿಎಸ್‌ವೈ, ಡಿ.ಕೆ ಶಿವಕುಮಾರ್ ಅವರು ತಾವು ಚೆಸ್ ಪಾನ್ ಹೇಗೆ ಮೂವ್ ಮಾಡಬೇಕು ಎಂದು ಗೊತ್ತಿದೆ ಎಂದಿದ್ದಾರೆ. ಆದರೆ ಎದುರಾಳಿಯೇ ಇಲ್ಲದೆ ಚೆಸ್ ಗೇಮ್ ಹೇಗೆ ಸಾಧ್ಯ ಅಂತಾ ವ್ಯಂಗ್ಯವಾಡಿದ್ರು..

ಸರ್ಕಾರದ ಬೊಕ್ಕಸವನ್ನು ಲೂಟಿಮಾಡ್ತಿರೋದೇ ದೇವೇಗೌಡರ ಕುಟುಂಬ- ಡಿಕೆಶಿಗೆ ಚೆಸ್ ಪಾನ್ ಮೂವ್ ಮಾಡೋದು ಚೆನ್ನಾಗಿ ಗೊತ್ತಿದೆ- ಅರಮನೆ ಮೈದಾನದಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ…

LEAVE A REPLY

Please enter your comment!
Please enter your name here