Home Crime ಸರ್ಪದೋಷ ನಿವಾರಣೆಗೆಂದು ಬಂದಿದ್ದ ಜ್ಯೋತಿಷಿ.. ಯುವತಿಯ ಅಂದ ನೋಡಿ ಮಂಚಕ್ಕೆ ಕರೆದಿದ್ದ ಪಾಪಿ..! ನಿನಗೆ 5 ಬಾರಿ...

ಸರ್ಪದೋಷ ನಿವಾರಣೆಗೆಂದು ಬಂದಿದ್ದ ಜ್ಯೋತಿಷಿ.. ಯುವತಿಯ ಅಂದ ನೋಡಿ ಮಂಚಕ್ಕೆ ಕರೆದಿದ್ದ ಪಾಪಿ..! ನಿನಗೆ 5 ಬಾರಿ ತಾಳಿ ಕಟ್ಟಿ 5 ಬಾರಿ ಸಂಬೋಗ ನಡೆಸಿದ್ರೆ ದೋಷ ನಿವಾರಣೆಯಾಗುತ್ತೆ ಎಂದ ಕಾಮಿಸ್ವಾಮಿ..!?

2108
0
SHARE

ನಿಮ್ಗೆ ಆ ದೋಷ ಇದೆ. ನಿವಾರಿಸ್ದೇ ಹೋದ್ರೆ ಬರಬಾರದ್ದು ಬಂದು ಚಾಪೆ ಸುತ್ಕೊಂಡ್ ಹೋಗ್ತೀರಿ ಅಂತಾ ಪುಂಗೋ ಸೋ ಕಾಲ್ಡ್ ಪೂಜಾರಿಗಳನ್ನ, ಕಳ್ ಸ್ವಾಮಿಗಳನ್ನ ನೋಡಿರ್ತೀವಿ. ಆದ್ರೆ, ಇಲ್ಲೊಬ್ಬ ಕಾಮಿಸ್ವಾಮಿ ಕನಕಾಂಬರಾ ನೋಟು ಬೇಕು, ನೋಟು ಕೊಟ್ಟ ಲೇಡಿಮಣಿಯೂ ಬೇಕು ಅಂತ ಹಲ್ಲುಗಿಂಜಿ ಎಂತಹ ಅವಸ್ಥೆ ತಂದುಕೊಂಡಿದ್ದಾನೆ ಕಾಮಿಸ್ವಾಮಿ..

ತಲೆಯಲ್ಲಿ ತರ್ಟಿಫೋರ್ಟಿ ಸೈಟಿಟ್ಟಿರೋ ಈ ಭೂಪನ ಹೆಸ್ರು ಗಣೇಶ. ಇನ್ನು ಯಾವ್ದೋ ಖಾಯಿಲೆ ಬಂದು ಹಾಸಿಗೆ ಹಿಡಿದವನ ರೀತಿ ಗಡ್ಡ ಬಿಟ್ಕೊಂಡಿರೋನ ಹೆಸರು ಇದೇ ಗಣೇಶನ ಕುಲಪುತ್ರ ಮಣಿಕಂಠ. ಇವ್ರಿಗೆ ಮಾಡೋಕೆ ಕ್ಯಾಮೆ ಇಲ್ಲ ಅಂತ ಪೂಜಾರಿಕೆ ವೃತ್ತಿಯನ್ನ ಮಾಡಿ ವಂಚಿಸ್ತಾ ಅವರಿವರನ್ನ ಸುಲಿಗೆ ಮಾಡೋದೇ ಕಾಯಕವಾಗಿ ಮಾಡಿಕೊಂಡುಬಿಟ್ಟಿದ್ರು.

ಅವರಿವರನ್ನ ನಂಬಿಸಿ ದೇವರು-ದೋಷಾ ಹೀಗೆ ನಾನಾ ವಿಧದ ವಿಚಾರಗಳನ್ನ ಹೇಳಿ ಜನರನ್ನ ಭಯಭೀತಪಡಿಸಿ ಪರಿಹಾರದ ಹೆಸರಲ್ಲಿ ಜೇಬಿಗೆ ನೋಟನ್ನ ಇಳಿಸಿಕೊಳ್ಳೋದೇ ಇವರ ಫುಲ್ ಟೈಂ ಕಾಯಕ. ಹೀಗಿದ್ದವ್ರು ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಬಾಣಸವಾಡಿಯಲ್ಲಿ ಖಾಸಗಿ ಕಂಪೆನಿಗೊಂದರಲ್ಲಿ ಕೆಲಸ ಮಾಡ್ತಿದ್ದ ಈ ಹೆಣ್ಮಗಳಿಗೆ ದೋಷ ಇದೆ ಅದೇ ಸರ್ಪದೋಷ. ಆ ಸರ್ಪ ದೋಷವನ್ನ ನಿವಾರಣೆ ಮಾಡದೇ ಹೋದ್ರೆ ತೊಂದರೆಯಾಗುತ್ತೆ ಅಂತ ನೀಟಾಗೇ ಮಹಿಳೆಯಿಂದ ಹಣವನ್ನ ಕಿತ್ತು ಹೋಮಹವನ ಮಾಡಿಸಿಬಿಟ್ಟಿದ್ದರು.

ಪೂಜೆ-ಪುನಸ್ಕಾರ ಮುಗಿದ ಬಳಿಕ ಅಂದ್ರೆ ಇದೇ ಸೆಪ್ಟೆಂಬರ್ ೧೦ ನೇ ತಾರೀಕು ಭಸ್ಮವನ್ನ ಕುಕ್ಕೆಸುಬ್ರಮಣ್ಯದ ಬಳಿಯಲ್ಲಿರೋ ಕುಮಾರಧಾರ ಹೊಳೆಗೆ ಅರ್ಪಿಸಬೇಕು ಎಂದು ಮಹಿಳೆಯ ಬಳಿ ಹೇಳಿದ್ರು.‌ ಅದರಂತೆ ಕುಕ್ಕೆಸುಬ್ರಮಣ್ಯಕ್ಕೆ ಮಹಿಳೆಯನ್ನ ಕರೆದೊಯ್ದ ಗಣೇಶ ಹಾಗೂ ಮಣಿಕಂಠ ಮೆತ್ತಗೆ ಆಕೆಯನ್ನ ತಮ್ಮ ಬಳಿ ಮಂಚಹಂಚಿಕೊಳ್ಳುವಂತೆ ಪುಸಲಾಯಿಸೋಕೆ ಶುರುಮಾಡಿದ್ದರು. ರೂಮ್ ಬುಕ್ ಮಾಡಿ ಮಹಿಳೆಗೆ ನಿನ್ನ ಮರ್ಮಾಂದಲ್ಲಿ ದೋಷವಿದೆ ಎಂದು ಯೂಟ್ಯೂಬ್ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ್ದಾನೆ.

ನಂತರ ನಾನು ನಿನಗೆ 5 ಬಾರಿ ತಾಳಿ ಕಟ್ಟಿ 5 ಬಾರಿ ಸಂಬೋಗ ನಡೆಸಿದ್ರೆ ದೋಷ ನಿವಾರಣೆಯಾಗುತ್ತೆ ಎಂದು ಪುಂಗಿ ಬಿಟ್ಟಿದ್ದಾನೆ.ಇನ್ನೂ ಕಾಮಿಸ್ವಾಮಿಯ ಮಾತು ಕೇಳಿ ಗಾಬರಿಗೊಂಡ ಮಹಿಳೆ, ಹೇಳದೇ ಕೇಳದೇ ಬೆಂಗಳೂರಿಗೆ ಬಂದು ಬಾಣಸವಾಡಿ ಪೊಲೀಸ್ ಠಾಣೆಗೆ ಬಂದು‌ ದೂರನ್ನ ನೀಡಿದ್ದಾರೆ.‌‌ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಮುಖ ಆರೋಪಿ ಗಣೇಶ್ ಮಗ ಮಣಿಕಂಠನನ್ನ ಬಂಧಿಸಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಗಣೇಶ್ ಗಾಗಿ ಬಲೆ ಬೀಸಿರುವ ಬಾಣಸವಾಡಿ ಪೊಲೀಸ್ರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ..

ಇನ್ನೂ ಕಾಮಿಸ್ವಾಮಿಯ ಮಾತು ಕೇಳಿ ಗಾಬರಿಗೊಂಡ ಮಹಿಳೆ, ಹೇಳದೇ ಕೇಳದೇ ಬೆಂಗಳೂರಿಗೆ ಬಂದು ಬಾಣಸವಾಡಿ ಪೊಲೀಸ್ ಠಾಣೆಗೆ ಬಂದು‌ ದೂರನ್ನ ನೀಡಿದ್ದಾರೆ.‌‌ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಮುಖ ಆರೋಪಿ ಗಣೇಶ್ ಮಗ ಮಣಿಕಂಠನನ್ನ ಬಂಧಿಸಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಗಣೇಶ್ ಗಾಗಿ ಬಲೆ ಬೀಸಿರುವ ಬಾಣಸವಾಡಿ ಪೊಲೀಸ್ರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

LEAVE A REPLY

Please enter your comment!
Please enter your name here