Home District ಸಲಿಂಗ ಕಾಮಿಗಳಿಗೆ ಗುಡ್ ನ್ಯೂಸ್ ನೀಡುತ್ತಾ ಸುಪ್ರೀಂ ಕೋರ್ಟ್..?! ಸಲಿಂಗಿಗಳ ಚಿತ್ತ ಸುಪ್ರೀಂ ಕೋರ್ಟ್ ತೀರ್ಪಿನತ್ತ…

ಸಲಿಂಗ ಕಾಮಿಗಳಿಗೆ ಗುಡ್ ನ್ಯೂಸ್ ನೀಡುತ್ತಾ ಸುಪ್ರೀಂ ಕೋರ್ಟ್..?! ಸಲಿಂಗಿಗಳ ಚಿತ್ತ ಸುಪ್ರೀಂ ಕೋರ್ಟ್ ತೀರ್ಪಿನತ್ತ…

363
0
SHARE

ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಸೆಕ್ಷನ್​ 377 ಕಾಯ್ದೆಯನ್ನು ನಿರಾಪರಾಧೀಕರಣ ಗೊಳಿಸೋ ಕುರಿತು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಿಂದ‌ ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರಬೀಳಲಿದೆ. ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರನ್ನ ಒಳಗೊಂಡ ತ್ರಿಸದಸ್ಯ ಪೀಠ ಇಂದು ಅಂತಿಮ ತೀರ್ಪು ಪ್ರಕಟಿಸಲಿದೆ. ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್‌ ಸಲಿಂಗಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು.

ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್‌ ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧವೆಂದು ಘೋಷಿಸಿತ್ತು. ನಂತರ, ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಐವರು ಅರ್ಜಿ ಸಲ್ಲಿಸಿದ್ದು, ಕೆಲವೇ ಕ್ಷಣದಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಸೆಕ್ಷನ್​ 377 ಸಲಿಂಗ ಕಾಮ ಅನೈಸರ್ಗಿಕ ಅಪರಾಧವಾಗಿದ್ದು, ಈ ಕಾಯ್ದೆ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿದೆ.

ಒಂದೇ ಲಿಂಗದವರು ದೈಹಿಕ ಕ್ರಿಯೆಯನ್ನು ಸ್ವಯಂ ಪ್ರೇರಿತವಾಗಿ ಹೊಂದಿದರೆ, ಅವರು ಜೈಲು ಶಿಕ್ಷೆಗೆ ಒಳಗಾಗುತ್ತಾರೆ. ಇವರಿಗೆ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸೆಕ್ಷನ್‌ 377ಕ್ಕೆ ತಿದ್ದುಪಡಿ ತಂದು ಸಲಿಂಗ ಕಾಮವನ್ನು ಕಾನೂನು ಬದ್ಧವಾಗಿಸಬೇಕೋ ಅಥವಾ ಅಪರಾಧವೆಂದು ಪರಿಗಣಿಸಬೇಕೋ ಎಂದು ಸುಪ್ರಿಂ ಕೋರ್ಟ್‌ನ ನ್ಯಾಯಮೂರ್ತಿಗಳ ಪೀಠ ನಿರ್ಧರಿಸಲಿದ್ದಾರೆ.

ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 377ರ ಮೇಲೆ ಮತ್ತು 158 ವರ್ಷಗಳ ಹಿಂದೆ ರೂಪಿಸಲಾದ ಕಾನೂನನ್ನು ಪ್ರಶ್ನಿಸಿ ಹೂಡಲಾದ ಅರ್ಜಿಗೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯ ಏನು ತೀರ್ಪು ನೀಡಲಿದೆ ಎಂಬುದರ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ.
ಭಾರತದಲ್ಲಿ ಇನ್ನೂ ಬ್ರಿಟಿಷರ ಆಡಳಿತ ನಡೆಯುತ್ತಿದ್ದಾಗಲೇ 1861ರಲ್ಲಿ ಲಾರ್ಡ್ ಮೆಕಾಲೆ ನೇತೃತ್ವದಲ್ಲಿ, ಭಾರತದ ಕಾನೂನು ಪ್ರಾಧಿಕಾರ ನೀಡಿದ ಶಿಫಾರಸಿನ ಮೇರೆಗೆ, ಭಾರತೀಯ ದಂಡ ಸಂಹಿತೆಯನ್ನು ಡ್ರಾಫ್ಟ್ ಮಾಡಲಾಯಿತು.

ಅದರಲ್ಲಿನ ಸೆಕ್ಷನ್ 377 ಅಸ್ವಾಭಾವಿಕ ಲೈಂಗಿಕತೆಯ ಅಪರಾಧಕ್ಕೆ ಯಾವ ಶಿಕ್ಷೆಯನ್ನು ನೀಡಬೇಕೆಂದು ವಿವರಿಸುತ್ತದೆ.ಸೆಕ್ಷನ್ 377 ಏನು ಹೇಳುತ್ತದೆ? : ಅಸಹಜ ಅಪರಾಧಗಳು – ಯಾರಾದರೂ ಸ್ವಇಚ್ಛೆಯಿಂದ ನೈಸರ್ಗಿಕ ಕ್ರಿಯೆಗೆ ವಿರುದ್ಧವಾಗಿ ಪುರುಷ, ಸ್ತ್ರೀ ಅಥವಾ ಪ್ರಾಣಿಯೊಡನೆ ದೈಹಿಕ ಸಂಭೋಗ ನಡೆಸುತ್ತಾರೋ ಅವರು 10 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ.

ಈ ಕಾನೂನಿನ ವಿರುದ್ಧವೇ ಈಗ ಸಮರ ಆರಂಭವಾಗಿ, ತೀರ್ಪು ನೀಡುವ ಹಂತಕ್ಕೆ ಬಂದಿದೆ.ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ಬಲವಂತದ ದೈಹಿಕ ಸಂಭೋಗಕ್ಕೆ ಸಂಬಂಧಿಸಿದ್ದರೆ, ಸೆಕ್ಷನ್ 377 ಸ್ವಇಚ್ಛೆಯಿದ್ದರೂ ನಿಸರ್ಗಕ್ಕೆ ಅಥವಾ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ದೈಹಿಕ ಸಂಭೋಗದ ಬಗ್ಗೆ ಹೇಳುತ್ತದೆ. ಆದರೆ, ಈ 377 ಸೆಕ್ಷನ್ ಪುರುಷ, ಸ್ತ್ರೀ ಸಲಿಂಗ ಕಾಮಿಗಳು, ಲೈಂಗಿಕ ಅಲ್ಪಸಂಖ್ಯಾತರು, ದ್ವಿಲಿಂಗಿಗಳ ಸಮುದಾಯದ ಬಗ್ಗೆಯಾಗಲಿ, ಅವರ ಲೈಂಗಿಕ ಕ್ರಿಯೆಗಳ ಬಗ್ಗೆಯಾಗಲು ನೇರವಾಗಿ ಏನನ್ನೂ ಹೇಳುವುದಿಲ್ಲ.

ಈ ಕಾನೂನಿನಡಿಯಲ್ಲಿ ಸಲಿಂಗ ಕಾಮಿಗಳು ಮಾತ್ರವಲ್ಲ ಭಿನ್ನಲಿಂಗೀಯ ಕಾಮ ಕೂಡ ಅಪರಾಧ ಎಂದು ಹೇಳುತ್ತದೆ. ಇಂಥ ಪ್ರಕೃತಿಗೆ ವಿರುದ್ಧವಾದ ಸಂಭೋಗ ಸ್ವಇಚ್ಛೆಯಿಂದ ನಡೆಸಿದರೆ ಕೂಡ ಅದು ಕಾನೂನಿಗೆ ವಿರುದ್ಧವಾಗಿರುತ್ತದೆ ಮತ್ತು ಅಪರಾಧವಾಗುತ್ತದೆ. ಶಿಶ್ನ ಮತ್ತು ಯೋನಿ ಕೂಡಿಕೆಯ ಸಂಭೋಗವನ್ನು ಹೊರತುಪಡಿಸಿ ಮತ್ತಾವುದೇ ಸಂಭೋಗವಾಗಲಿ, ಗುದ ಸಂಭೋಗ, ಮೌಖಿಕ ಸಂಭೋಗ ಕೂಡ, ಅದು ಸ್ವಇಚ್ಛೆಯಿಂದ ಮಾಡಿದ್ದರೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅಡಿಯಲ್ಲಿ ಅಪರಾಧವಾಗುತ್ತದೆ.

LEAVE A REPLY

Please enter your comment!
Please enter your name here