Home Cinema ಸಲ್ಮಾನ್ ಖಾನ್‌ಗೆ ಬಿಗ್ ರಿಲೀಫ್..! ಕೊನೆಗೂ ಬೇಲ್ ಆಯ್ತು ಭಾಯೀಜಾನ್‌ಗೆ…

ಸಲ್ಮಾನ್ ಖಾನ್‌ಗೆ ಬಿಗ್ ರಿಲೀಫ್..! ಕೊನೆಗೂ ಬೇಲ್ ಆಯ್ತು ಭಾಯೀಜಾನ್‌ಗೆ…

72
0
SHARE

20 ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೋಧಪುರ್‌ ಕೋರ್ಟ್‌ನಿಂದ ಜಾಮೀನು ನೀಡಲಾಗಿದೆ. ಇನ್ನು ಖಾನ್‌ಗೆ 50 ಸಾವಿರ ರೂಪಾಯಿ ಬಾಂಡ್‌ ನೀಡುವಂತೆ ಕೋರ್ಟ್‌ ಸೂಚನೆ ನೀಡಿದೆ…

1998ರಲ್ಲಿ ಕೃಷ್ಣಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳ ಹಿಂದೆ ರಾಜಸ್ಥಾನದ ಜೋಧಪುರ ನ್ಯಾಯಾಲಯ ಮಹತ್ವದ ತೀರ್ಪು ನೀಡಿ, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಸಿತ್ತು. ಜತೆಗೆ 10 ಸಾವಿರ ರೂಪಾಯಿ ದಂಡ ಹಾಕಿತ್ತು. ‘ಹಮ್ ಸಾಥ್‌ ಸಾಥ್‌ ಹೈ’ ಚಿತ್ರದ ಚಿತ್ರೀಕರಣದ ವೇಳೆ ಜೋಧ್‌ಪುರ್‌ ಸಮೀಪದ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ ಆರೋಪ ಬಾಲಿವುಡ್‌‌ ನಟ-ನಟಿಯರ ಮೇಲಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನ್ಯಾಯಾಲಯ ಸಲ್ಮಾನ್‌ಗೆ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು…

https://www.youtube.com/watch?v=MWW3XCc_LhA

 

LEAVE A REPLY

Please enter your comment!
Please enter your name here