Home Cinema ಸಲ್ಲು ಜೊತೆ ಕಿಚ್ಚ.. ರಂಗೇರಿದೆ ದಬಂಗ್ ಸಂತೆ..!

ಸಲ್ಲು ಜೊತೆ ಕಿಚ್ಚ.. ರಂಗೇರಿದೆ ದಬಂಗ್ ಸಂತೆ..!

803
0
SHARE

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹಾರಿ ಕಮಾಲ್ ಮಾಡ್ತೀರೊ ಅಭಿನಯ ಚಕ್ರವರ್ತಿಯ ಅಡ್ಡಾದಿಂದ ಮತ್ತೊಂದು ಬ್ಲಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ. ವಿತ್ ಔಟ್ ರೆಸ್ಟ್ ಸಿನಿಮಾಗಳಲ್ಲಿ ಬಿಜಿಯಾಗಿರೋ ಸುದೀಪ್ ದಬಂಗ್-೩ ಚಿತ್ರಕ್ಕೆ ಬರೋಬ್ಬರಿ ಎಂಭತ್ತು ದಿನಗಳ ಲಾಂಗ್ ಡೇಟ್ಸ್ ನೀಡಿ ಎಲ್ಲರಿಗೂ ಸರ್‌ಪ್ರೈಸ್ ಕೊಟ್ಟಿದಾರೆ. ಸುದೀಪ್ ಹಾಗೂ ಸಲ್ಮಾನ್‌ರನ್ನ ಒಟ್ಟಿಗೆ ತೆರೆಮೇಲೆ ನೋಡಿ ಮಜಾ ತೆಗೊಳೊಕೆ ರೆಡಿಯಾಗಿರುವ ಕಿಚ್ಚನ ಫ್ಯಾನ್ಸ್‌ಗಂತೂ ಹಬ್ಬವೋಹಬ್ಬ ಬಿಡಿ. ಬ್ಯಾಡ್‌ಬಾಯ್ ಜೊತೆಗಿನ ಕಿಚ್ಚನ ಆನ್‌ಸ್ಕ್ರೀನ್ ಪೇರ್ ಹೇಗಿರುತ್ತೆ ಎನ್ನುವುದರ ಸ್ಮಾಲ್ ಹಿಂಟ್ ಇಲ್ಲೇ ಸಿಕ್ಕಿಬಿಡುತ್ತೆ. ಎಂಭತ್ತು ದಿನಗಳು ಅಂದ್ರೇ ಸುಮ್ಮನೇನಾ, ಸಿನಿಮಾದಲ್ಲಿ ಸುದೀಪ್ ಕ್ಯಾರೆಕ್ಟರ್ ಎಷ್ಟು ದೊಡ್ಡದು ಅಂತ ಇಲ್ಲಿಯೇ ಗೆಸ್ ಮಾಡಬಹುದು.ಈಗಾಗಲೇ ದಬಂಗ್-೩ ಸಿನಿಮಾದ ಸೆಕೆಂಡ್ ಶೆಡ್ಯೂಲ್ ಶುರುವಾಗಿದೆ.

ಮುಂಬೈನಲ್ಲಿ ನಡೆದ ಚಿತ್ರೀಕರಣದಲ್ಲಿ ಸುದೀಪ್ ಜರ್ಬದಸ್ತಾಗಿ ಜಾಯ್ನ್ ಆಗಿದಾರೆ. ಎವರಿಥಿಂಗ್ ಈಸ್ ಫೈನ್ ಎನ್ನುವ ಹಾಗೇ ಕಿಚ್ಚ ಫುಲ್ ಖುಷಿಯಾಗಿದಾರೆ. ತಮ್ಮ ಮೊದಲ ದಿನದ ಅನುಭವವನ್ನ ಟ್ವೀಟರ್ ಪೇಜ್‌ನಲ್ಲಿ ಬಿಚ್ಚಿಟ್ಟಿದಾರೆ ಕಿಚ್ಚ ಸುದೀಪ್. ಮುಂಬೈನ ಹಿಟ್ ಬಹಳ ಜೋರಾಗಿತ್ತು. ಆದರೂ ದಬಂಗ್-೩ ಸೆಟ್‌ನಲ್ಲಿದ್ದ ಎನರ್ಜಿಯನ್ನ ಯಾರಿಗೂ ಮೀರಿಸೋಕೆ ಆಗಲಿಲ್ಲ. ನಿಜಕ್ಕೂ ಇದೊಂದು ಥ್ರಿಲ್ಲಿಂಗ್ ಎನರ್ಜಿ. ಅದ್ಭುತವಾದ ಯೂನಿಟ್, ಒಳ್ಳೆ ಜನ ಹಾಗೂ ಬೃಹತ್ ಜಿಮ್ ಸೆಟ್ ಇದಕ್ಕೆ ಬೋನಸ್. ಬಹಳ ಸಂತೋಷವಾಗಿ ಮೊದಲದಿನದ ಶೂಟಿಂಗ್ ಕಂಪ್ಲೀಟ್ ಮಾಡಿದ್ದೇವೆ. ನನಗೆ ಆಚೆ ಬಂದು ಶೂಟ್ ಮಾಡಿದ ಅನುಭವಾಗ್ತಿಲ್ಲ. ಮನೆಯ ಫೀಲ್ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಸಲ್ಮಾನ್ ಖಾನ್. ಅಭಿನಯ ಚಕ್ರವರ್ತಿಗೆ ಯಾವ ಭಾಷೆಯ ಗಡಿಯೂ ಇಲ್ಲ. ಅವಕಾಶ ಸಿಕ್ಕರೆ ಎಲ್ಲ ರೀತಿಯ ಪಾತ್ರಗಳನ್ನ ಬೇರೆ ಭಾಷೆಗಳಲ್ಲೂ ಮಾಡೋಕೆ ರೆಡಿ ಅಂತ ಪ್ರೂವ್ ಆಗುತ್ತೆ.

ಅಂದಹಾಗೇ ದಬಂಗ್‌ನಲ್ಲಿ ಸಿಖಂದರ್ ಭಾರದ್ವಾಜ್ ಎನ್ನುವ ಪಾತ್ರಕ್ಕೆ ಸುದೀಪ್ ಬಣ್ಣ ಹಚ್ಚಿದಾರೆ. ಇದೊಂದು ಬಹಳ ವೈಟೆಜ್ ಇರೋ ಪಾತ್ರ ಅಂತ ಸ್ಪೆಷಾಲ್ಲಾಗಿ ಹೇಳಬೇಕಿಲ್ಲ. ಪ್ಯೂರ್ ನೆಗೆಟಿವ್ ಶೇಡ್ ಇರುವ ಕ್ಯಾರೆಕ್ಟರ್‌ನಲ್ಲಿ ಕಿಚ್ಚ ಚುಲ್‌ಬುಲ್ ಪಾಂಡೆಗೆ ಭಯ ಹುಟ್ಟಿಸಲಿದ್ದಾರೆ. ಮುಂಚೆಯಿಂದಲೂ ನಿರ್ದೆಶಕ ಪ್ರಭುದೇವ ಈ ಪಾತ್ರವನ್ನ ಸುದೀಪ್ ಕೈಯಲ್ಲೇ ಮಾಡಿಸಬೇಕು ಅಂತ ಪಟ್ಟು ಹಿಡಿದ್ದಿದ್ರಂತೆ. ಹಾಗಾಗೀ ಈಗ ಎಲ್ಲದಕ್ಕೂ ಕಾಲ ಕೂಡಿಬಂದಿದೆ. ಸಲ್ಮಾನ್ ಖಾನ್ ಹಾಗೂ ಸುದೀಪ್ ಕಾಂಬಿನೇಷನ್ ಹೇಗೆ ಮೂಡಿ ಬರುತ್ತೆ ಅಂತ ಎಲ್ರೂ ಯೋಚನೆ ಮಾಡ್ತೀರೊ ಈ ಟೈಮ್‌ನಲ್ಲೇ ಈ ಸಿಹಿ ಸುದ್ಧಿ ಬಂದಿದೆ.ಸುದೀಪ್ ಹಂಚಿಕೊಂಡಿರೋ ಫೋಟೊ ನೋಡಿದ್ರೆ ಸಲ್ಮಾನ್ ಹಾಗೂ ಸುದೀಪ್ ಜಿಮ್‌ನಲ್ಲಿ ಎಷ್ಟು ಬೆವರಿಳಿಸಿರಬಹುದು ಅಂತ ಅಂದಾಜು ಮಾಡಬಹುದು. ಅಷ್ಟಕ್ಕೂ ಸುದೀಪ್ ಸಲ್ಮಾನ್‌ಗೆ ಮೊದಲಿನಿಂದಲೂ ಪರಿಚಯ.

ಆದರೆ ಈಗ ಫಸ್ಟ್‌ಟೈಮ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡ್ತಿರೋದು ಸಿನಿಪ್ರಿಯರಿಗೆ ಮನರಂಜನೆಯ ಹೊಸ ಥಡಕಾ ಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇಬ್ಬರ ಈ ಫೋಟೊಗೆ ಭಾರೀ ಚಪ್ಪಾಳೆ ಸಿಕ್ಕಿದೆ.ಇನ್ನೊಂದು ವಿಶೇಷವೆಂದ್ರೆ ಮೊನ್ನೆಯಷ್ಟೇ ಚಿತ್ರದ ಸೆಟ್‌ಗೆ ನಿರ್ದೆಶಕ ಪ್ರೇಮ್‌ರನ್ನ ಕಿಚ್ಚ ಸುದೀಪ್ ಆಹ್ವಾನಿಸಿದ್ರು. ಪ್ರೇಮ್ ಕೂಡ ಚಿತ್ರತಂಡವನ್ನ ಭೇಟಿ ಮಾಡಿ ಭಾಯಿಜಾನ್ ಜೊತೆ ಫೋಟೊ ತೆಗೆಸಿಕೊಂಡು ಖುಷಿಪಟ್ಟಿದ್ರು. ಆದರೆ ಪ್ರೇಮ್ ಪತ್ನಿ ರಕ್ಷಿತಾ ಇದಕ್ಕೆ ಲೈಟಾಗಿ ಬೇಸರವ್ಯಕ್ತಪಡಿಸಿದ್ರು. ನನಗೆ ಸಲ್ಮಾನ್ ಖಾನ್ ಅಂದ್ರೆ ತುಂಬಾ ಇಷ್ಟ ಅಂತ ಗೊತ್ತಿದ್ರೂ ಯಾರು ನನಗೆ ಇನ್‌ವೈಟ್ ಮಾಡಿಲ್ಲ. ಎಲ್ಲರನ್ನೂ ಕರೆದು ನನ್ನನ್ನ ಮಾತ್ರ ಕರೆದಿಲ್ಲ ಅಂತ ತಮಾಷೆಗೆ ಕಿಚ್ಚರನ್ನ ಕಾಲೆಳೆದಿದ್ರು.

ಆದರೆ ರಕ್ಷಿತಾರ ಟಾಂಗ್‌ಗೆ ಕಿಚ್ಚ ಸುದೀಪ್ ತಮ್ಮದೇ ಸ್ಟೈನಲ್ಲಿ ರಿಪ್ಲೇ ಕೊಟ್ಟಿದಾರೆ. ನೀವು ಒಮ್ಮೆಯೂ ವಿಲನ್ ಸೆಟ್‌ಗೆ ಬರ್‌ಲಿಲ್ಲ. ಈ ಚಿತ್ರವನ್ನ ನಿಮ್ಮ ಪತಿಯೇ ಡೈರೆಕ್ಟ್ ಮಾಡಿದ್ರು. ಚಂದ್ರಲೇಔಟ್‌ನಿಂದ ಮಿನರ್ವ ಮಿಲ್‌ಗೆ ಬರೋಕೆ ಆಗದೇ ಇರೋರು ತಾವು. ಇನ್ನು ನಿಮ್ಮನ್ನ ಮುಂಬೈಗೆ ಕರೆದು ಯಾಕೆ ಕಷ್ಟಕೊಡೋದು ಅಂತ ಕರಿಲಿಲ್ಲ ಎಂದು ಟ್ವೀಟ್ ಮಾಡೋ ಮೂಲಕ ಸುದೀಪ್ ತಮ್ಮ ಸೆನ್ಸ್ ಆಫ್ ಹ್ಯೂಮರ್ ಮೆರೆದಿದ್ದಾರೆ.ಅದೇನೇ ಇರ‍್ಲಿ, ಈ ವರ್ಷದ ಕೊನೆಯಲ್ಲಿ ಸಲ್ಮಾನ್ ಹಾಗೂ ಸುದೀಪ್ ಸೇರಿ ಮನರಂಜನೆಯ ಮೃಷ್ಟಾನ್ನ ಬಡಿಸೋಕೆ ಮುಹೂರ್ತ ಕೂಡಿ ಬಂದಿದೆ. ಹೇಳಿಕೇಳಿ ದಬಂಗ್ ಸೀರೀಸ್ ಮೊದಲೇ ಬಾಕ್ಸ್‌ಆಫೀಸ್ ಕೊಳ್ಳೆಹೊಡೆಯುತ್ತೆ ಅಂತ ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಸುದೀಪ್ ಕಾಂಟ್ರಿಬ್ಯೂಷನ್ ಸೇರಿಕೊಂಡಿರೋದು ಸೋನೆ ಪೇ ಸೂಹಾಗ ಎನ್ನಬಹುದು. ಇಬ್ಬರೂ ಸೇರಿ ಒಂದು ಪಕ್ಕಾ ಆಕ್ಷನ್ ಎಂಟರ್‌ಟೈನ್‌ಮೆಂಟ್ ಕೊಡೊದ್ರಲ್ಲಿ ಸಂದೇಹ ಬೇಡ. ಸಲ್ಮಾನ್ ಆಪೊಸಿಟ್ ಮಿಂಚಲಿರುವ ಸಲ್ಮಾನ್‌ಗೆ ಇನ್ನಷ್ಟು ಬಾಲಿವುಡ್ ಪ್ರಾಜೆಕ್ಟ್‌ಗಳು ಸಿಕ್ಕುವ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಂತೂ ಕನ್ನಡದ ದೀಪ ಹಿಂದಿಯಲ್ಲಿ ಸೂಪರಾಗಿ ಶೈನ್ ಆಗಲಿ ಅನ್ನೋದೆ ಕನ್ನಡಿಗರ ಒಂದು ಕನಸು.

LEAVE A REPLY

Please enter your comment!
Please enter your name here