Home Cinema ಸಾಂಗು-ಟೀಸರು ಟ್ರೆಂಡಿಂಗ್..! ಈಗ ಕಟೌಟ್ ಮೇಕಿಂಗ್‌ನಲ್ಲೂ ವಿಲನ್ ಕಿಂಗ್..?! ರಾಮ ಯಾರು..? ರಾವಣ ಯಾರು ?...

ಸಾಂಗು-ಟೀಸರು ಟ್ರೆಂಡಿಂಗ್..! ಈಗ ಕಟೌಟ್ ಮೇಕಿಂಗ್‌ನಲ್ಲೂ ವಿಲನ್ ಕಿಂಗ್..?! ರಾಮ ಯಾರು..? ರಾವಣ ಯಾರು ? ಎಂದು ಮತ್ತೇ ಕನ್ಫೂಸ್ ಮಾಡಿದ ಪ್ರೇಮ್..

324
0
SHARE

ದಿ ವಿಲನ್.. ಸುದೀಪ್ & ಶಿವಣ್ಣ.. ಅಭಿಮಾನಿಗಳ ಕಾಯುವಿಕೆಯನ್ನ ವಿಪರೀತಗೊಳಿಸಿರುವ ಸಿನಿಮಾ. ಸ್ಯಾಂಡಲ್‌ವುಡ್‌ನ ಮೋಸ್ಟ್ ಅವೇಡೇಟ್ ಚಿತ್ರ. ಸದ್ಯ ಸಾಂಗ್ ಮೂಲಕ ಅಭಿಮಾನಿಗಳಲ್ಲಿ ದಿ ವಿಲನ್ ಅಬ್ಬರ ಜೋರಾಗಿಸಿದ್ದ ಚಿತ್ರತಂಡ, ಸದ್ಯ ಸಾಂಗ್ ಮೇಕಿಂಗ್ ಝಲಕ್ ಅನ್ನು ಅನಾವರಣ ಮಾಡಿದೆ.ಸಾಂಗ್ ಮತ್ತು ಕಟೌಟ್ ಮೇಕಿಂಗ್‌ನಲ್ಲೂ ವಿಲನ್ ಕಿಂಗ್:ಯಸ್.. ದಿ ವಿಲನ್ ರಾಮ & ರಾಮಣರ ಕಾಳಗವಿರುವ ಚಿತ್ರ.

ಸಾಕಷ್ಟು ಸಪ್ರೈಸಿಂಗ್ ಎಲಿಮೆಂಟ್ ಮೂಲಕ ಪ್ರೇಕ್ಷಕರ ತೀವ್ರ ಕುತೂಹಲ ಹುಟ್ಟಿಹಾಕಿತ್ತು.. ಇತ್ತೀಚೆಗಷ್ಟೇ ನಾಲ್ಕು ಟೀಸರ್‌ನ್ನು ಒಟ್ಟಿಗೆ ರಿಲೀಸ್ ಮಾಡುವ ಮೂಲಕ ಹೊಸ ತನಕ್ಕೆ ನಾದಿ ಹಾಡಿ ನಿರ್ದೇಶಕ ಪ್ರೇಮ್ಸ್ ಇದೀಗ, ಚಿತ್ರದ ಸಾಂಗ್ ಮೇಕಿಂಗ್ ರಿವೀಲ್ ಮಾಡಿದ್ದಾರೆ.ಯಸ್.. ಇದು ದಿ ವಿಲನ್ ಚಿತ್ರ ಎಕ್ಸ್ ಕ್ಯೂಸಿವ್ ಸಾಂಗ್ ಮೇಕಿಂಗ್ ಝಲಕ್ ಇದು. ಚಿತ್ರದ ಮೇಲಿನ ಕುತೂಹಲ ಹಾಗೂ ಕೌತುಕವನ್ನು ಇಮ್ಮಡಿಗೊಳಿಸುವ ಮೇಕಿಂಗ್, ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಚಿತ್ರದ ಆರು ಹಾಡುಗಲ್ಲಿ ಸುದೀಪ್ ಮತ್ತು ಶಿವಣ್ಣನ ಪಾತ್ರದ ಅನಾವರಣ ಮಾಡಿದ್ದಾರೆ ನಿರ್ದೇಶಕರು. ಇಬ್ಬರು ಸ್ಟಾರ್‌ಗಳು ಡಿಫರೆಂಟ್ ಲುಕ್, ವಿನೂತನ ಮ್ಯಾನರಿಸಂ ಮೂಲಕ ಗಮನಸೆಳೆಯುತ್ತಿದ್ದಾರೆ. ಫಾರಿನ್ ಲೊಕೇಷನ್ ಗಳಲ್ಲಿ ಸುದೀಪ್ ಬಿಂದಾಸ್ ಔಟ್‌ಲುಕ್‌ನ ಅನಾವರಣ ಮೇಕಿಂಗ್‌ನಲ್ಲಿ ಕಾಣಸಿಗಲಿದೆ.ಇನ್ನು ಚಿತ್ರದ ಮೇನ್ ಅಟ್ಯಾಕ್ಷನ್ ಅಂದ್ರೆ ರಾವಣ ಯಾರು ಅನ್ನೋದು. ಬಿಡುಗಡೆಯಾಗಿರುವ ಮೇಕಿಂಗ್‌ನಲ್ಲಿ ರಾವಣ್ಣನ ಹಾಡಿನಲ್ಲಿ ಹಿರಿಯ ಕಲಾವಿದ ಶರತ್ ಲೋಕಿತಾಶ್ವ ಕಾಣಿಸಿಕೊಂಡಿದ್ದಾರೆ.

ನಾಟಕದ ರಂಗವೇದಿಕೆಯಲ್ಲಿ ಕೈಯಲ್ಲಿ ಗದೆ ಹಿಡಿದು, ರಕ್ಕಸ ರಾವಣನ ಲುಕ್‌ಗೆ ಖದ್ದರಾಗಿ ಹೆಜ್ಜೆ ಹಾಕಿದ್ದಾರೆ. ಶರತ್ ಲೋಕಿತಾಶ್ವ ಶಿವಣ್ಣ ಮತ್ತು ಸುದೀಪ್ ತಂದೆಯ ಪಾತ್ರದ್ಲಿ ಕಾಣಿಸಿಕೊಂಡಿರಬಹುದಾ ಎನ್ನುವ ಅನುಮಾನ ಮೂಡಿರ್ತಿದೆ. ಆದ್ರೆ ಚಿತ್ರ ಶುರುವಿನಿಂದ್ಲೂ ರಾಮ ಯಾರು..? ರಾವಣ ಯಾರು ? ಎಂದು ಬೇಜಾನ್ ತಲೆಗೆ ಹುಳ ಬಿಟ್ಟುಕೊಂಡಿದ ಅಭಿಮಾನಿಗಳಿಗೆ ಮತ್ತೆ ಸಾಂಗ್ ಮೇಕಿಂಗ್‌ನಲ್ಲಿ ಕೂಡ ಪ್ರೇಮ್ ಇನ್ನಷ್ಟು ಗೊಂದಲ ಮೂಡುವಂತೆ ಮಾಡಿದ್ದಾರೆ.

ಇನ್ನೂ, ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿವೆ. ಇದೇ ಸಾಹಸ ಸನ್ನಿವೇಶಗ ಳನ್ನು ಶಿವಣ್ಣ ಅಷ್ಟೇ ಎನರ್ಜಿಯಿಂದಾನೂ ಮಾಡಿದ್ದಾರೆ. ಇದಕ್ಕೆ ಪುರಾವೆ ಅನ್ನುವಂತಿದೆ ಸಾಹಸ ಚಿತ್ರೀಕರಣದ ಮುನ್ನ, ಸೆರೆ ಸಿಕ್ಕಿರುವ ಈ ಮೇಕಿಂಗ್ ದೃಶ್ಯಗಳು.ಇನ್ನು ನಟರಾಜ ಚಿತ್ರಮಂದಿರದಲ್ಲಿ ಚಿತ್ರದ ಕಟೌಟ್ ಕಾರ್ಯಕೂಡ ಪ್ರಗತಿಯಲ್ಲಿದೆ. ಶಿವಣ್ಣ ಮತ್ತು ಸುದೀಪ್ ಫ್ಯಾನ್ಸ್ ಕಟೌಟ್ ವಿಚಾರವಾಗಿ ಕೂಡ ಸಾಕಷ್ಟು  ಸದ್ದು ಮಾಡಿದ್ರು.

ಇಬ್ಬರಲ್ಲಿ ಯಾರ ಕಟೌಟ್ ಎತ್ತರವಾಗಿರಲಿದೆ ಎಂದು ಕಾತುರದ ಕಣ್ಣುಗಳಿಂದ ಎದುನೋಡ್ತಿದ್ದಾರೆ. ಕರ್ನಾಟಕದಾದ್ಯಂತ ಸಾಕಷ್ಟು ಮುಖ್ಯ ಚಿತ್ರಮಂದಿರದ ಮುಂಭಾಗ ಕಟೌಟ್‌ಗಳು ತಲೆಎತ್ತಲಿದ್ದು, ಇಬ್ಬರು ಅಭಿಮಾನಿಗಳ ಅಬ್ಬರ ಥಿಯೇಟರ್‌ನಲ್ಲಿ ಜೋರಾಗಿರಲಿದೆ.ಇನ್ನೂ ಚಿತ್ರದ ಕಥಾನಾಯಕಿ ಆಮಿ ಜಾಕ್ಸನ್ ಕೂಡ ಇದೇ ಮೇಕಿಂಗ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಪ್ರೇಮ್ ಹೇಳಿಕೊಡುವ ದೃಶ್ಯಗಳನ್ನಾಲಿಸುತ್ತಾ, ಶಿವಣ್ಣ ತಮಾಶೆ ಗಳನ್ನು ಎಂಜಾಯ್ ಮಾಡುವ ಸನ್ನಿವೇಶದಲ್ಲಿ ಕ್ಯಾಮರಾ ಕಣ್ಣಲ್ಲಿ ಆಮಿ ಜಾಕ್ಸನ್ ಸೆರೆಯಾಗಿರೋದು ಹೀಗೆ..ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮೂಡಿಬರ್ತಿದೆ. ಎಜರ್ನಿ ಟಿಕ್ ಸಾಂಗ್‌ಗಳಿಗೆ ಇಬ್ಬರು ಸ್ಟಾರ್‌ಗಳು ಮಸ್ತಾಗೆ ಹೆಜ್ಜೆ ಹಾಕಿದ್ದಾರೆ. ಎನರ್ಜಿ & ಕುಣಿತ ಕಂಡು ಥ್ರಿಲ್ಲಾಗಿದ್ದಾರೆ ಅಭಿಮಾನಿಗಳು

LEAVE A REPLY

Please enter your comment!
Please enter your name here