Home Cinema ಸಾರಥಿ ಕೊಟ್ಟ ಸರ್‌ಪ್ರೈಸ್ ಗೆ ಅಮೂಲ್ಯ ತಕಧಿಮಿತ..! ಯಜಮಾನ ಕೊಡಲಿರುವ ಉಡುಗೊರೆ ಏನು ಗೊತ್ತಾ..!

ಸಾರಥಿ ಕೊಟ್ಟ ಸರ್‌ಪ್ರೈಸ್ ಗೆ ಅಮೂಲ್ಯ ತಕಧಿಮಿತ..! ಯಜಮಾನ ಕೊಡಲಿರುವ ಉಡುಗೊರೆ ಏನು ಗೊತ್ತಾ..!

420
0
SHARE

ಯಜಮಾನ.. ಯಜಮಾನ.. ಯಜಮಾನ.. ದರ್ಶನ್ ಭಕ್ತಗಣ ದಿನನಿತ್ಯ ಜಪಿಸುತ್ತಿರುವ ಹೆಸರು.
ಶಿವನಂದಿ ಜೊತೆ ಬಂದಾಗ ಇರ‍್ಲಿ, ಒಂದು ಮುಂಜಾನೆ ಯಜಮಾನ ಪ್ರೀತಿಯ ಹಾಡು ಹಾಡಿದಾಗ ಇರ‍್ಲಿ, ಬಸಣ್ಣಿ ಜೊತೆ ಬಜಾರ್‌ಗೆ ಬಂದಾಗ.. ನಿಂತ ನೋಡೋ ಯಜಮಾನ ಅಂದಾಗ.. ಯಜಮಾನನಿಗೆ ಅಭಿಮಾನಿಗಳು ಕೊಟ್ಟಿದ್ದು ಬೊಗಸೆ ತುಂಬ ಪ್ರೀತಿ.

ಅಭಿಮಾನಿಗಳು ಕೊಟ್ಟ ಇದೇ ಪ್ರೀತಿಯ ಫಲವೆನ್ನುವಂತೆ ಯಜಮಾನನಿಗೆ ಯುಟ್ಯೂಬ್ ಸೆಲ್ಯೂಟ್ ಹೊಡಿತಾನೇ ಬಂದಿದೆ. ಯಜಮಾನನ ಬಗ್ಗೆ ಅತೀವವಾದ ಕೂತುಹಲ ಡಿ ಕಂಪನಿಯಲ್ಲಿದೆ. ಇದಕ್ಕೆ ತಕ್ಕಂತೆ ಹಾಡುಗಳೂ ಚಿತ್ರದ ಮೇಲಿನ ಇದೇ ಕೂತುಹಲವನ್ನ ಇಮ್ಮಡಿಗೊಳಿಸಿವೆ. ಹಾಗಾಗೇ, ಹಾಡುಗಳೇ ಹೀಗೆ.. ಇನ್ನು ಟ್ರೇಲರ್ ಹೇಗೆ ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಇದೇ ಪ್ರಶ್ನೆ ಅಭಿಮಾನಿಗಳು ಚಿತ್ರತಂಡಕ್ಕೆ ಅನೇಕ ಬಾರಿ ಕೇಳಿದ್ದು ಇದೆ.

ಟ್ರೇಲರ್ ಬೇಕು ಅನ್ನುವ ಮನವಿಯನ್ನೂ ಇಟ್ಟಿದೆ. ಇದೀಗ, ಅಭಿಮಾನಿಗಳ ಇದೇ ಕೋರಿಕೆ ಈಡೇರುವ ದಿನ ಬಂದಿದೆ. ಯಜಮಾನನ ಟ್ರೇಲರ್.. ಇನ್ನು ಎರಡೇ ಎರಡು ದಿನಗಳಲ್ಲಿ ಬಿಡುಗಡೆಯಾಗ್ತಿದೆ.ಯಸ್, ಯಜಮಾನ ಟ್ರೇಲರ್‌ನ್ನೊತ್ತು ಬರ‍್ತಿದ್ದಾನೆ. ಅದು ನಾಡಿದ್ದು.. ಅಂದ್ರೆ ಫೆಬ್ರುವರಿ ಹತ್ತಕ್ಕೆ. ಸರಿಯಾಗಿ ಹತ್ತು ಘಂಟೆಗೆ. ಅಲ್ಲಿಗೆ ಯಜಮಾನನ ಉತ್ಸವಕ್ಕೆ ದಿನಗಣನೆ ಆರಂಭವಾದಂತಾಗಿದೆ.

ಹಾಗಾಗೇ, ತುದಿಗಾಲಿನಲ್ಲಿ ಕುಂತಿರುವ ದರ್ಶನ್ ಅಭಿಮಾನಿಗಳೂ ಆಗ್ಲೇ ನಿಂತ ನೋಡೋ ಯಜಮಾನ, ಬಂದೇ ಬಿಡ್ತು ಟ್ರೇಲರ್ ನೋಡೋ ದಿನ ಅಂಥ ತಮ್ಮಲ್ಲಿನ ಎಕ್ಸಾಯಟ್ಮೆಂಟ್‌ನ ಪ್ರದರ್ಶನ ಮಾಡಲು ಶುರುವಿಟ್ಟುಕೊಂಡಿದ್ದಾರೆ.ಇನ್ನೂ ದರ್ಶನ್ ಒಂದು ವಾರದ ಮೊದಲು, ತಮ್ಮ ಅಭಿಮಾನಿಗಳಿಗೆ ಕೊಡ್ತಿರುವ ಗಿಫ್ಟ್ ಇದು ಅನ್ನಲು ಅಡ್ಡಿ ಇಲ್ಲ. ಹೌದು, ಎಲ್ಲರಿಗೂ ಗೊತ್ತಿರುವಂತೆ ಇದೇ ಫೆಬ್ರುವರಿ ಹದಿನಾರಕ್ಕೆ ದರ್ಶನ್ ಹುಟ್ಟುಹಬ್ಬ.

ಹುಟ್ಟುಹಬ್ಬಕ್ಕೆ ಆರು ದಿನಗಳು ಇರುವಾಗ ಬರಲಿರುವ ಯಜಮಾನ ಟ್ರೇಲರ್, ದರ್ಶನ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಲಿದೆ.ಒಂದ್ಕಡೆ ಯಜಮಾನ ಟ್ರೇಲರ್ ಬಿಡುಗಡೆಯಾಗ್ತಿರುವ ಸಡಗರ ಅಭಿಮಾನಿಗಳಲ್ಲಿದೆ. ದರ್ಶನ್‌ಗೂ ಯಜಮಾನ ಟ್ರೇಲರ್ ಅಭಿಮಾನಿಗಳಿಗೆ ಇಷ್ಟವಾಗುತ್ತೆ ಅನ್ನುವ ನಂಬಿಕೆ ಇದೆ. ಅಷ್ಟೇ ಅಲ್ಲ ಯಜಮಾನ ಸಿನಿಮಾ ಅಭಿಮಾನಿಗಳ ಮನಸು ಸಂಪೂರ್ಣ ತಣಿಸುತ್ತೆ ಅನ್ನುವ ವಿಶ್ವಾಸನೂ ಇದೆ. ಇದೇ ವಿಶ್ವಾಸ ಹಾಗೂ ನಂಬಿಕೆನಿಂದಾಗಿಯೇ ಸ್ವಲ್ಪ ರಿಲ್ಯಾಕ್ಸ್ ಆಗಿರುವ ದರ್ಶನ್, ಇತ್ತೀಚಿಗೆ ಬಿಡುವು ಮಾಡಿಕೊಂಡು ಅಮೂಲ್ಯಗೊಂದು ಸರ್‌ಪ್ರೈಸ್ ಕೊಟ್ಟಿದ್ದಾರೆ.

ಹೌದು, ದರ್ಶನ್.. ಅಮೂಲ್ಯಗೊಂದು ಕಾಣಿಕೆಯನ್ನ ಕೊಟ್ಟಿದ್ದಾರೆ. ನಿಮಗೆ ಗೊತ್ತಿರಲಿ ನಿನ್ನೆ.. ಅಮೂಲ್ಯ ಪತಿ ಜಗದೀಶ್‌ಗೆ ಹುಟ್ಟುಹಬ್ಬದ ಸಡಗರ. ಇದೇ ಸಡಗರ.. ಸಂಜೆ ರಂಗೇರಿತ್ತು. ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೊಣ್ಣಚ್ಚ, ಭುವನ್ ಪೊನ್ನಣ್ಣ, ಶಿಲ್ಪಾ ಗಣೇಶ್, ಹೀಗೆ ಕನ್ನಡ ಚಿತ್ರರಂಗದ ಅನೇಕ ತಾರೆಯರು ಒಂದ್ಕಡೆ ಸೇರಿದ್ದರು. ಜಗದೀಶ್ ಹುಟ್ಟುಹಬ್ಬವನ್ನ ಸಂಭ್ರಮದಿಂದನೇ ಸೆಲೆಬ್ರೇಟ್ ಮಾಡ್ತಿದ್ದರು. ಆಗ್ಲೇ ಅಲ್ಲಿಗೆ ಬಂದಿದ್ದು ನೋಡಿ ನಯಾ ಯಜಮಾನ
ಯಸ್, ಬರ್ಥ್‌ಡೇಗೆ.. ಆಗಮಿಸಿದ ದರ್ಶನ್ ಕಾರ್ಯಕ್ರಮದ ಸಡಗರ ಮತ್ತಷ್ಟು ಹೆಚ್ಚಾಗುವಂತೆ ಮಾಡಿದರು. ಕೇಕ್ ಕಟ್ ಮಾಡಿ ಸಂಭ್ರಮಿಸಿದರು.

ಅಸಲಿಗೆ ದರ್ಶನ್.. ಆಗಮನವನ್ನ ಅಮೂಲ್ಯ ನಿರೀಕ್ಷೆ ಮಾಡಿದಂತಿರಲಿಲ್ಲ. ಹಾಗಾಗೇ ದರ್ಶನ್ ಹಾಜರಾತಿ ನಿಜಕ್ಕೂ ಅಮೂಲ್ಯರನ್ನ ಚಕಿತಗೊಳಿಸಿದ್ದು ಸುಳ್ಳಲ್ಲ. ಅದೇನೆ ಇರ‍್ಲಿ, ಸದ್ಯ.. ಯಜಮಾನ ಬರಲು ಸಿದ್ಧವಾಗಿದ್ದಾನೆ. ಟ್ರೇಲರ್ ನೋಡುವ ಕಾಲ ಸನ್ನಿಹಿತವಾಗಿದೆ. ಇನ್ನೇನ್ ಇದ್ರೂ.. ಯಜಮಾನನನ್ನ ಕಣ್ತುಂಬಿಕೊಳ್ಳಬೇಕು. ಟ್ರೇಲರ್ ನೋಡಿ ಸಂಭ್ರಮಿಸಬೇಕು. ಚಿತ್ರ ನೋಡುವ ಆತುರತೆ ಹಾಗೂ ಕಾತುರತೆಯನ್ನ ಹೆಚ್ಚಿಸಿಕೊಳ್ಳಬೇಕಷ್ಟೇ…

LEAVE A REPLY

Please enter your comment!
Please enter your name here