Home Crime ಸಾಲಗಾರರ ಕಾಟಕ್ಕೆ ಮಾಡಿದ್ದ ಮಾಸ್ಟರ್ ಪ್ಲ್ಯಾನ್..! ಕಿಡ್ನ್ಯಾಪ್ ನಾಟಕವಾಡಿದವ ಕೊನೆಗೂ ಅಂದರ್..!

ಸಾಲಗಾರರ ಕಾಟಕ್ಕೆ ಮಾಡಿದ್ದ ಮಾಸ್ಟರ್ ಪ್ಲ್ಯಾನ್..! ಕಿಡ್ನ್ಯಾಪ್ ನಾಟಕವಾಡಿದವ ಕೊನೆಗೂ ಅಂದರ್..!

1092
0
SHARE

ಸಾಲ ತೀರಿಸಲಾಗದೆ ಸುಸೈಡ್ ಮಾಡ್ಕೊಂಡಿರೋರ ಕತೆ ಕೇಳಿರ್ತೀರ…ಹಾಗೇ ಊರು ಬಿಟ್ಟು ಹೋಡಿ ಹೋದವರ ಬಗ್ಗೆಯೂ ನೀವು ಕೇಳಿರ್ತೀರ…ಆದ್ರೆ ಇಲ್ಲೊಬ್ಬ ಭೂಪ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಪೋಲೀಸ್ ಕಂಟ್ರೋಲ್ ರೂಮ್ ಗೆ ಕರೆ ಯಾರೋ ಕಿಡ್ನಾಪ್ ಮಾಡಿರೊದಾಗಿ ಕತೆ ಕಟ್ಟಿ ಕೊನೆಗೆ ಪೋಲೀಸ್ರ ಬಲೆಗೆ ಬಿದ್ದಿದ್ದಾನೆ. ಈತನ ಹೆಸರು ಪ್ರತಾಪ್. ವೃತ್ತಿಯಲ್ಲಿ ಪೋಟೋಗ್ರಾಫರ್ ಆಗಿರುವ ಈತ ಸಣ್ಣದೊಂದು ಪೋಟೋ ಸ್ಟುಡಿಯೋ ನಡೆಸುತ್ತಿದ್ದ.

ತಾನು ಮಾಡಿದ್ದ ಸಾಲ ತೀರಿಸಲು ಮಾಡಿದ್ದ ಪ್ಲಾನ್ ನಿಂದಾಗಿ ಪೋಲಿಸ್ರ ಅತಿಥಿಯಾಗಿದ್ದಾನೆ. ಹೌದು ಪ್ರದೀಪ್ ಕಳೆದ ನಾಲ್ಕು ದಿನಗಳ ಹಿಂದೆ ತಲಘಟ್ಟಪುರ ಪೋಲೀಸ್ ಇನ್ಸ್ ಪೆಕ್ಟರ್ ಗೆ ಕರೆ ಮಾಡಿದ್ದು, ನನ್ನನ್ನ ಯಾರೋ ನಾಲ್ಕು ಜನ ಇನ್ನೋವಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಕೆಂಗೇರಿ ಬಳಿ ಕಾರ್ ನಿಲ್ಲಿಸಿರುವುದಾಗಿ ಹೇಳಿದ್ದ. ನಂತರ ಮತ್ತೆ ಕರೆ ಮಾಡಿ ಮೈಸೂರಿನಲ್ಲಿಟ್ಟಿದ್ದಾರೆ ಅಲ್ಲಿಂದ ಮಡಿಕೇರಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿ ಪೋನ್ ಸ್ವಿಚ್ ಮಾಡಿದ್ದ.

ಇತ್ತ ತಲೆ ಕೆಡಿಸಿಕೊಂಡಿದ್ದ ಪೋಲೀಸ್ರು ಊರೂರು ಸುತ್ತಿದ್ರು.ನಾಲ್ಕು ದಿನ ಕಳೆದ ನಂತರ ಮತ್ತೆ ಪ್ರತ್ಯಕ್ಷನಾಗಿದ್ದ ಪ್ರತಾಪ್, ನೈಸ್ ರಸ್ತೆಯಿಂದ ಕಂಟ್ರೋಲ್ ರೂಂಗೆ ಕರೆ ಮಾಡಿ ಅದೇ ಕಿಡ್ನಾಪ್ ಕಥೆ ಕಟ್ಟಿದ್ದ. ಕೂಡಲೇ ಸ್ಥಳಕ್ಕೆ ಬಂದ ಕೊಣನಕುಂಟೆ ಪೊಲೀಸ್ರು ಪ್ರತಾಪ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪ್ರತಾಪ್ ಅಸಲಿ ಸತ್ಯ ಬಾಯಿ ಬಿಟ್ಟಿದ್ದು, ತಾನೂ 40 ಸಾವಿರ ಸಾಲ ಮಾಡಿದ್ದು ಸಾಲಗಾರರ ಕಾಟಕ್ಕೆ‌ಈ ರೀತಿ ಮಾಡಿದ್ದಾಗಿ ಪೋಲೀಸ್ರ ಎದುರು ಕಣ್ಣೀರು ಹಾಕಿದ್ದಾನೆ.

ಕಿಡ್ನಾಪ್ ಕಥೆ ಕಟ್ಟಿ ಸ್ನೇಹಿತರ ಬಳಿ ಹಣ ವಸೂಲಿ ಮಾಡುವ ಮಾಸ್ಟರ್ ಪ್ಲಾನ್ ಮಾಡಿ ಪೋಲಿಸ್ರ ಅತಿಥಿಯಾಗಿದ್ದಾನೆ.ಇನ್ನ ಪೋಲೀಸ್ರಿಗೆ ಸುಳ್ಳು ಮಾಹಿತಿ ನೀಡಿ ಅವರ ಸಮಯ ವ್ಯರ್ಥ ಮಾಡಿದಕ್ಕಾಗಿ, ಪೋಲೀಸ್ರು ಪ್ರದೀಪ್ ನನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಅದೇನೆ ಇರ್ಲಿ ಸಾಲ ತೀರಿಸಲು ಮಾಡಿದ್ದ ಮಾಸ್ಟರ್ ಪ್ಲಾನ್ ಪ್ಲಾಪ್ ಪ್ರದೀಪ್ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾನೆ.

LEAVE A REPLY

Please enter your comment!
Please enter your name here