Home District ಸಾವಿನ ಮನೆಯಂತಿದೆ ಈ ಅಂಗನವಾಡಿ..?! ಮಕ್ಕಳು ಬದುಕಿ ವಾಪಾಸ್ ಆದ್ರೆ ನಿಟ್ಟುಸಿರು ಬಿಡ್ತಾರೆ ಪೋಷಕರು.?!

ಸಾವಿನ ಮನೆಯಂತಿದೆ ಈ ಅಂಗನವಾಡಿ..?! ಮಕ್ಕಳು ಬದುಕಿ ವಾಪಾಸ್ ಆದ್ರೆ ನಿಟ್ಟುಸಿರು ಬಿಡ್ತಾರೆ ಪೋಷಕರು.?!

190
0
SHARE

ಅದು ಹೊರಗಿನಿಂದ ನೊಡಿದ್ರೆ ಅಂಗನವಾಡಿಯಂತೆ ಕಾಣುತ್ತೆ. ಆದ್ರೆ ಒಳಹೊಕ್ಕು ನೋಡಿದ್ರೆ ಇದು ಸಾವಿಗೆ ಹೊಂಚು ಹಾಕಿ ಕುಳಿತಿರುವ ಮನೆಯಂತೆ ಭಾಸವಾಗುತ್ತದೆ. ಇಲ್ಲಿ ಶಾಲೆ ಕಲಿಯುವ ಮಕ್ಕಳು ವಾಪಾಸಾಗಿ ಮನೆಗೆ ಹೊದ್ರೆ ಅಬ್ಬಾ ಇವತ್ತು ನಮ್ಮ ಮಕ್ಕಳ ಬದುಕಿ ವಾಪಸ್ ಬಂದ್ರು ಅಂತಾ ಪಾಲಕರು ನಿಟ್ಟುಸಿರು ಬಿಡುತ್ತಾರೆ…ಕುಸಿದು ಬೀಳುವ ಗೋಡೆ ಒಂದು ಕಡೆಯಾದ್ರೆ ಯಾವಾಗ ಗ್ಯಾಸ್ ಬ್ಲಾಸ್ಟ ಆಗುತ್ತೆ ಅನ್ನೋ ಭಯ ಇನ್ನೊಂದು ಕಡೆ. ಇನ್ನು ಇಲ್ಲಿಯ ಅವ್ಯವಸ್ಥೆ ಕಂಡು ಪಾಲಕರು ಮ್ಕಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ…ಇಲ್ಲಿ ಒಂದೇ ಕಟ್ಟಡದಲ್ಲಿ ಎರಡನ್ನೂ ನಡೆಸಲಾಗುತ್ತಿದೆ. ಅಂದಹಾಗೆ ಇದು ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಹಿರೇಅಂಗ್ರೋಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ದುಸ್ಥಿತಿ. ಹಂದಿಗವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪುಟ್ಟ ಗ್ರಾಮ ಇದು. ಇಲ್ಲಿ ಮೂಲಭೂತ ಸೌಕರ್ಯಗಳ ಕೊರೆತೆ ಒಂದುಕಡೆಯಾದ್ರೆ, ಮಕ್ಕಳ ನಿಶ್ಕಾಳಜಿ ಇನ್ನೊಂದು ಕಡೆ…

ಈ ಅಂಗನವಾಡಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದ್ರೆ ಇದು ತುಂಬಾ ಹಳೆಯ ಕಟ್ಟಡ ಇರುವುದರಿಂದ ಯಾವುದೇ ಕ್ಷಣದಲ್ಲಾದರೂ ಶಾಲೆಯ ಗೋಡೆ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಇನ್ನು ಪಕ್ಕದಲ್ಲಿ ಗ್ಯಾಸ್ ಇದ್ದು ಅಲ್ಲಿಯೇ ಅಡುಗೆ ಮಾಡುತ್ತಾರೆ. ಈ ಸಮಸ್ಯೆಯನ್ನ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ…

LEAVE A REPLY

Please enter your comment!
Please enter your name here