Home Crime ಸಿಂಗಂ ಸ್ಟೈಲ್‌ನಲ್ಲಿ ಮೇಲಧಿಕಾರಿಗಳಿಗೆ ಚಳಿ ಬಿಡಿಸಿದ ಪಿಎಸ್‌ಐ..!! ಖಡಕ್ ಅಧಿಕಾರಿಯ ಕ್ಲಾಸ್‌ಗೆ ರಾಜಕೀಯ ಮುಖಂಡರು ಗಪ್‌ಚುಪ್…

ಸಿಂಗಂ ಸ್ಟೈಲ್‌ನಲ್ಲಿ ಮೇಲಧಿಕಾರಿಗಳಿಗೆ ಚಳಿ ಬಿಡಿಸಿದ ಪಿಎಸ್‌ಐ..!! ಖಡಕ್ ಅಧಿಕಾರಿಯ ಕ್ಲಾಸ್‌ಗೆ ರಾಜಕೀಯ ಮುಖಂಡರು ಗಪ್‌ಚುಪ್…

1991
0
SHARE

ಕಾನೂನು ಬಾಹಿರವಾಗಿ ಅಕ್ರಮಗಳನ್ನ ಮಾಡೋ ಖದೀಮರ ಹೆಡೆಮುರಿಕಟ್ಟಿ ಅವರನ್ನ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ತಿದ್ದೋಕ್ಕೆ ಅಂತ ಪೆೊಲೀಸ್ ಇಲಾಖೆ ಇದೆ. ಆದ್ರೆ ಅದೇ ಪೆೊಲೀಸ್ ಇಲಾಖೆ ಅಕ್ರಮದ ಪರವಾಗಿ ನಿಂತು ಕೆಲಸ ಮಾಡು ಅಂದ್ರೆ.ಅಕ್ರಮದ ಪರ ನಿಂತ ಸಿಪಿಐಗೆ ಪೋನಿನಲ್ಲೇ ಪಿಎಸ್‍ಐ ಕ್ಲಾಸ್.

ಖಡಕ್ ಅಧಿಕಾರಿಯ ಕ್ಲಾಸ್‌ಗೆ ರಾಜಕೀಯ ಮುಖಂಡರು ಗಪ್‌ಚುಪ್.ಎಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ರಾಮನಾಥಪುರ ಗ್ರಾಮದ ಜೆಡಿಎಸ್ ಮುಖಂಡ ಕೃಷ್ಣಮೂರ್ತಿ ಬೆಂಬಲಿಗರು ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದರು. ಈ ವಿಷಯ ವಿಶ್ವನಾಥಪುರ ಪೊಲೀಸರಿಗೆ ಸಿಕ್ಕಿದ್ದು, ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಕೃಷ್ಣಮೂರ್ತಿ ಬೆಂಬಲಿಗರು ಪೊಲೀಸ್ ಸಿಬ್ಬಂದಿಗೇ ಅವಾಜ್ ಹಾಕಿ ಕೆಲಸಕ್ಕೆ ಅಡ್ಡಿಪಡಿಸಿ ಮೇಲಾಧಿಕಾರಿ ಸಿಪಿಐ ಮಂಜುನಾಥ್‌ಗೆ ಕರೆ ಮಾಡಿಕೊಟ್ಟಿದ್ರಂತೆ. ಈ ವೇಳೆ ಮಾತನಾಡಿದ ಮಂಜುನಾಥ್ ದಂಧೆಕೋರರ ಪರವಾಗಿ ಮಾತನಾಡಿ ಲಾರಿಗಳನ್ನ ಬಿಟ್ಟು ಬರುವಂತೆ ಸೂಚಿಸಿದ್ದಾರೆ.

ಮೇಲಾಧೀಕಾರಿಯ ಮಾತು ಕೇಳಿ ಕೆಂಡಾಮಂಡಲವಾದ ಪಿಎಸ್‍ಐ ಶ್ರೀನಿವಾಸ್ ಫೋನಿನಲ್ಲೆ ಸಿಂಗಂ ಸ್ಟೈಲಿನಲ್ಲಿ ಮೇಲಾಧಿಕಾರಿಗೆ ಅವಾಜ್ ಹಾಕಿ ಚಳಿ ಬಿಡಿಸಿದ್ದಾರೆ.ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಿಎಸ್‍ಐ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಕುರಿತು ಮಾತನಾಡಿದ ಮಾಜಿ ಜೆಡಿಎಸ್ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಬೆಂಬಲಿಗರು ನಾವು ದೇವಸ್ಥಾನಕ್ಕೆ ನೀಡಲು ಗ್ರಾನೈಟ್ ತಂದಿದ್ದು, ಎಷ್ಟೇ ಹೇಳಿದ್ರು ಕೇಳದೆ ಪಿಎಸ್‍ಐ ಶ್ರೀನಿವಾಸ್ ನಮಗೆ ಮತ್ತು ಸಿಪಿಐ ಮಂಜುನಾಥ್‌ರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತ ಆರೋಪಿಸಿದ್ದಾರೆ.ಒಟ್ಟಾರೆ ಅಕ್ರಮ ತಡೆಯಲು ಮುಂದಾದ ಪೋಲೀಸರ ಕಾರ್ಯಕ್ಕೆ ಅಡ್ಡಿಪಡಿಸಿದ ರಾಜಕೀಯ ಮುಖಂಡರು ಮತ್ತು ಮೇಲಾಧಿಕಾರಿಗೆ ಪಿಎಸ್‍ಐ ಶ್ರೀನಿವಾಸ್ ಸರಿಯಾಗೆ ಬುದ್ದಿ ಕಲಿಸಿದ್ದಾರೆ…

LEAVE A REPLY

Please enter your comment!
Please enter your name here