Home Crime ಸಿಎಂ ಕುಮಾರಸ್ವಾಮಿ ತವರು ಕ್ಷೇತ್ರದಲ್ಲೇ ನಡೆಯುತ್ತಿದೆ ಲಂಚಾವತಾರ..!? ರೈತರು ಬೆಳೆ ಸಾಲ ಪಡೀಬೇಕು ಎಂದ್ರೆ ನೀಡಬೇಕು...

ಸಿಎಂ ಕುಮಾರಸ್ವಾಮಿ ತವರು ಕ್ಷೇತ್ರದಲ್ಲೇ ನಡೆಯುತ್ತಿದೆ ಲಂಚಾವತಾರ..!? ರೈತರು ಬೆಳೆ ಸಾಲ ಪಡೀಬೇಕು ಎಂದ್ರೆ ನೀಡಬೇಕು ಕಮೀಷನ್..!?

1330
0
SHARE

ರಾಜ್ಯದಲ್ಲಿನ ರೈತರ ಸಾಲಮನ್ನಾ ಮಾಡಿ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಆದ್ರೆ ಕೆಲವು ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ರೈತರ ಬಳಿಯೇ ಸುಲಿಗೆ ಮಾಡುತ್ತಿದ್ದಾರೆ. ರೈತರು ಸಾಲ ಕೇಳಲು ಹೋದ್ರೆ ಕಮಿಷನ್ ನೀಡಿದ್ರೆ ಮಾತ್ರ ಸಾಲ ಮಂಜೂರು ಮಾಡುತ್ತೇವೆ, ಇಲ್ಲವಾದ್ರೆ ಸಾಲವೇ ನೀಡೊಲ್ಲ ಎಂದು ಅಧಿಕಾರಿಗಳು ಕಮೀಷನ್ ದಂಧೆಗೆ ಇಳಿದಿದ್ದಾರೆ.

ಹೌದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬ್ಯಾಂಕ್ ಅಧ್ಯಕ್ಷನೊಬ್ಬ ರೈತರ ಬೆಳೆ ಸಾಲ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಮೀಷನ್ ನೀಡುವಂತೆ ಗ್ರಾಹಕರ ಬಳಿ ಮಾತನಾಡಿರುವ ಆಡಿಯೋ ಈಗ ಪ್ರಜಾಟಿವಿಗೆ ಲಭ್ಯವಾಗಿದೆ. ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬ್ಯಾಂಕ್ ಅಧ್ಯಕ್ಷ ಹಾಗೂ ಸೆಕ್ರೆಟರಿ ಬಹಿರಂಗವಾಗಿಯೇ ರೈತರ ಬಳಿ ಲಂಚವನ್ನು ಕೇಳಿದ್ದಾರೆ.

ನೀವು ಪಡೆಯುವ ಸಾಲದಲ್ಲಿ ನಮಗೆ ಇಂತಿಷ್ಟು ಹಣವನ್ನು ನೀಡಬೇಕು. ನಾವು ಸಹ ಬ್ಯಾಂಕ್ ಹಣವನ್ನು ತರಬೇಕು ಅಂದ್ರೆ ಹೆಡ್ ಆಫೀಸ್ ಬ್ಯಾಂಕ್ ಅಧಿಕಾರಿಗಳಿಗೆ ಕಮೀಷನ್ ಅನ್ನು ನೀಡಬೇಕು ಅಂತಾ ಕೇಳಿದ್ದಾನೆ. ಅಂದಹಾಗೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಇತ್ತೀಚೆಗೆ ವಿಧಾನಸೌಧದಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ಮಾತನಾಡಿದ್ರು.

ಭ್ರಷ್ಟಾಚಾರ ಅನ್ನೋದು ಎಲ್ಲಡೆ ತಾಂಡವ ಆಡುತ್ತಿದೆ. ಇದನ್ನ ಹೇಗೆ ಸರಿಪಡಿಸಬೇಕೋ ಗೊತ್ತಾಗುತ್ತಿಲ್ಲ ಅಂತಾ ಹೇಳಿಕೊಂಡಿದ್ರು. ಆದ್ರೆ ಸಿಎಂ ಅವರ ತವರೂ ಜಿಲ್ಲೆ, ರಾಜಕೀಯ ಕರ್ಮಭೂಮಿಯಲ್ಲಿಯೇ ಈ ರೀತಿ ರೈತರಿಗೆ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಲಂಚ ಕೇಳಿದ್ದಾರೆ. ಇದು ನಿಜಕ್ಕೂ ವಿಪರ್ಯಾಸ. ಇಂತಹ ಲಂಚಾವತಾರವನ್ನು ತಡೆಯಲು ಸರ್ಕಾರ ಕೂಡ ರೈತರ ಸಾಲದ ಹಣವನ್ನು ಅವರ ಖಾತೆಗೆ ಜಮೆಯಾಗುವಂತೆ ಮಾಡಿದೆ.

ಆದ್ರೆ ಅಧಿಕಾರಿಗಳು ಲಂಚದ ಹಣಕ್ಕಾಗಿ ರೈತರ ಬಳಿ ಚೆಕ್ ಪಡೆದು ಹಣವನ್ನು ನೀಡ್ತಿದ್ದಾರೆ. ಒಟ್ಟಾರೆ ರೈತರ ಸಾಲದ ವಿಚಾರಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷ ಹಾಗೂ ಸೆಕ್ರೇಟರಿ ಕಮೀಷನ್ ದಂಧೆಗೆ ಇಳಿದಿರೋದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮುಜುಗರವನ್ನುಂಟು ಮಾಡಿದೆ.

LEAVE A REPLY

Please enter your comment!
Please enter your name here