Home District ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಕಿರುಕುಳ ನೀಡಿದ್ದಾರೆ.ನನ್ನ ಗೆಲುವಿನ ಅಂತರದಿಂದ ಪ್ರಧಾನಿ ಮೋದಿ ಅವರೇ ಬೆಚ್ಚಿಬಿದ್ದಿದ್ದಾರೆ..!?-GTD

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಕಿರುಕುಳ ನೀಡಿದ್ದಾರೆ.ನನ್ನ ಗೆಲುವಿನ ಅಂತರದಿಂದ ಪ್ರಧಾನಿ ಮೋದಿ ಅವರೇ ಬೆಚ್ಚಿಬಿದ್ದಿದ್ದಾರೆ..!?-GTD

853
0
SHARE

ಅತ್ತ ಪತ್ರದ ಮೇಲೆ ಪತ್ರ ಬರೆದು ಸಮ್ಮಿಶ್ರ ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ರೆ, ಇತ್ತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲಿಸಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ಮುಂದುವರೆಸಿದ್ದಾರೆ. ಕ್ಷೇತ್ರದ ಮತದಾರರಿಗೆ ಭರ್ಜರಿ ಬಾಡೂಟ ಹಾಕಿ ಕೃತಜ್ಞತೆ ಸಲ್ಲಿಸಿ ಸಚಿವ ಜಿಟಿಡಿ.

ನಿಮ್ಮ ಪಾದದ ದೂಳನ್ನು ತಲೆಮೇಲೆ ಇಟ್ಟುಕೊಳ್ಳುತ್ತೇನೆ ಎನ್ನುವ ಮೂಲಕ ರಣರಂಗದಲ್ಲಿ ಹೋರಾಡಿದ ಗೆಲುವು ತಂದುಕೊಟ್ಟ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.ಕಳೆದ ಚುನಾವಣೆಯಲ್ಲಿ ದೇಶವೇ ಎದುರು ನೋಡುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೀನಾಯವಾಗಿ ಸೋಲಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕ್ಷೇತ್ರದ ಮತದಾರರಿಗೆ ಅಭೂತಪೂರ್ವ ಕೃತಜ್ಞತೆ ಸಲ್ಲಿಸಿದ್ದಾರೆ.

ಚುನಾವಣಾ ಅಖಾಡಕ್ಕೆ ರಣಕಹಳೆ ಮೊಳಗಿಸಿದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರಕೊಪ್ಪಲು ಸಮೀದ ಮೈದಾನದಲ್ಲಿ ಬೃಹತ್ ಸಮಾರಂಭ ನಡೆಸಿ ಜಿಟಿಡಿ, ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ರು. ಸುಮಾರು 25 ಸಾವಿರ ಮಂದಿಗೆ 7500 ಕೆ.ಜಿ ಮಟನ್ ಹಾಗೂ 10 ಸಾವಿರ ಕೆ.ಜಿ ಚಿಕನ್‌ನ ಭರ್ಜರಿ ಬಾಡೂಟ ಹಾಕಿಸಿದ್ರು.

ಇನ್ನೂ ಸಮಾರಂಭದಲ್ಲಿ ಸಚಿವ ಜಿ.ಟಿ.ದೇವೇಗೌಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾವುದೇ ಗುರುತರವಾದ ಕೊಡುಗೆ ನೀಡಲಿಲ್ಲ. ಬದಲಾಗಿ ಸುಳ್ಳು ಸುಳ್ಳು ಕೇಸು ಹಾಕಿಸಿ ಕಿರುಕುಳ ನೀಡಿದ್ರು. ನನಗೂ ನನ್ನ ಮತದಾರರಿಗೂ ಸಾಕಷ್ಟು ತೊಂದರೆ ನೀಡಿದ್ರು. ಹೀನಾಯವಾಗಿ ಸಿದ್ದರಾಮಯ್ಯ ಸೋತಿದ್ದನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ ಅವರೇ ಬೆಚ್ಚಿಬಿದ್ದಿದ್ರು ಎಂದರು.

ಸಮಾರಂಭದಲ್ಲಿ ಆವೇಶಭರಿತರಾಗಿಯೇ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ನೇಮಿಸಿದ ಅಧಿಕಾರಿಗಳು ಆಡಿದ್ದೇ ಆರ್ಭಟ ನಡೆಸಿದ್ದಾರೆ. ಜನ ಸಾಮಾನ್ಯರು ಕಚೇರಿಗೆ ಬಂದಾಗ ಕುರ್ಚಿ ಹಾಕಿ ಕೂರಿಸಿ ಸಮಸ್ಯೆ ಆಲಿಸದಿದ್ದರೆ ತಕ್ಕ ಪಾಠ ಕಲಿಸುವ ಖಡಕ್ ಎಚ್ಚರಿಕೆ ನೀಡಿದ್ರು. ಅಲ್ಲದೆ ಭ್ರಷ್ಟ ಪಿಡಿಓಗಳನ್ನು ಅವಾಚ್ಯಶಬ್ದದಿಂದಲೇ ನಿಂದಿಸಿ ಎಚ್ಚರಿಕೆ ನೀಡಿದ್ರು.

ಸಮಾರಂಭದಲ್ಲಿ ಕ್ಷೇತ್ರದ ಮತದಾರರು ಹಾಗೂ ಅಭಿಮಾನಿಗಳು ಸೇಬಿನ ಹಾರ, ಬೆಳ್ಳಿಗದೆ, ಹೂವಿನ ಹಾರವನ್ನು ಹಾಕುವ ಮೂಲಕ ಸಚಿವ ಜಿ.ಟಿ.ದೇವೇಗೌಡರನ್ನು ಅಭಿನಂದಿಸಿದ್ರು. ಇದೇ ವೇಳೆ 8ನೇ ತರಗತಿ ಓದಿರುವವನು ಹೇಗೆ ಉನ್ನತ ಶಿಕ್ಷಣ ಇಲಾಖೆಯನ್ನು ನಿಭಾಯಿಸಬಲ್ಲನು ಎಂಬ ಟೀಕೆಗಳನ್ನು ಜಿ.ಟಿ.ದೇವೇಗೌಡರು ಸವಾಲಾಗಿ ಸ್ವೀಕರುವ ಮೂಲಕ ಇಲಾಖೆಯಲ್ಲಿ ದೇಶವೇ ಮೆಚ್ಚುವ ಹಾಗೆ ಯಶಸ್ಸು ಸಾಧಿಸುತ್ತೇನೆ ಎಂದು ಶಪತ ಮಾಡಿದ್ರು.

LEAVE A REPLY

Please enter your comment!
Please enter your name here