Home District ಸಿದ್ದರಾಮಯ್ಯ ಬಾಯಿಂದ ಮತ್ತೊಮ್ಮೆ ರಾಹು,ಕೇತು,ಶನಿಯ ಅಣಿಮುತ್ತು.?! ಗಣಿಧಣಿ ಕೋಟೆ ಕೆಡವಲು ಹೊರಟಿರೋ ಡಿಕೆಶಿಗೆ ಸಿಗುತ್ತಾ ಸಕ್ಸಸ್.!?

ಸಿದ್ದರಾಮಯ್ಯ ಬಾಯಿಂದ ಮತ್ತೊಮ್ಮೆ ರಾಹು,ಕೇತು,ಶನಿಯ ಅಣಿಮುತ್ತು.?! ಗಣಿಧಣಿ ಕೋಟೆ ಕೆಡವಲು ಹೊರಟಿರೋ ಡಿಕೆಶಿಗೆ ಸಿಗುತ್ತಾ ಸಕ್ಸಸ್.!?

3405
0
SHARE

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ವಾಕ್ಸ್ ಸಮರ  ಬಿರುಸುಗೊಂಡಿದೆ. ಕೆಲವು ತಿಂಗಳ ಹಿಂದೆ ಅಷ್ಟೆ, ಏಟಿಗೆ ಎದಿರೇಟು. ಜಿದ್ದಿಗೆ ಜಿದ್ದು, ತಂತ್ರಕ್ಕೆ ಪ್ರತಿತಂತ್ರ ಅಂತಾ ಇದ್ದ ರಾಜ್ಯ ರಾಜಕೀಯ ಅಖಾಡ ಈಗ ಮತ್ತೊಮ್ಮೆ ಮಿನಿ ಸಮರದಲ್ಲಿ ರಂಗೇರಿದೆ. ಕಳೆದ ಬಾರಿಗಿಂತ ಈ ಬಾರಿ ಕೊಂಚ ಬದಲಾವಣೆ ಆಗಿದೆ ಅಷ್ಟೆ. ಅಂದು ಕಾಂಗ್ರೆಸ್ ಜೆಡಿಎಸ್ ಒಬ್ಬರನೊಬ್ಬರು ಬೈದಾಡಿಕೊಂಡರೆ, ಬಿಜೆಪಿ ಅದಕ್ಕೆ ತುಪ್ಪ ಸುರಿಯುತ್ತಿತ್ತು. ಇನ್ನೊಂದೆಡೆ ಕಾಂಗ್ರೆಸ್ , ಬಿಜೆಪಿ ಕಿತ್ತಾಡಿಕೊಂಡ್ರೆ ಜೆಡಿಎಸ್ ತುಪ್ಪ ಸುರಿಯುತ್ತಿತ್ತು.

ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದೆ. ಮತ್ತೊಂದು ಬದಿಯಲ್ಲಿ ಬಿಜೆಪಿ ಇಬ್ಬರನ್ನು ಎದುರಿಸಲು ಸಜ್ಜಾಗಿದೆ. ಅದ್ರ ಪರಿಣಾಮವೇ ಇಂದಿನ ಬೈ ಎಲೆಕ್ಷನ್ ನಲ್ಲಿ ರಾಜಕೀಯ ಎರಡು ಬಣವಾಗಿ ನಿಂತಿದೆ. ಒಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇನ್ನೊಂದೆಡೆ ಸಿಂಗಲ್ ಆಗಿ ಬಿಜೆಪಿ ನಾಯಕರು. ಎರಡು ಬಣಗಳು ಒಂದೊಂದು ಕಡೆಯಲ್ಲಿ ನಿಂತು ಒಬ್ಬರ ಮೇಲೆ ಒಬ್ಬರು ಕೆಂಡ ಕಾರುತ್ತಿದ್ದಾರೆ.ಸಿದ್ದರಾಮಯ್ಯ  ರಾಹು, ಕೇತು ಅಂತಾ ಅಣಿಮುತ್ತುಗಳನ್ನ ಉದುರಿಸುತ್ತಿರೋದಕ್ಕೂ ಕಾರಣವಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿದ್ದು ಕಾಂಗ್ರೆಸ್ ಪಾಲಿಗೆ ದಂಡನಾಯಕ ಆಗಿದ್ರು.

ಕಳೆದ ಬಾರಿ ಉತ್ತಮ ಆಡಳಿತವನ್ನ ಕೊಟ್ಟಿದ್ದೇವೆ. ಮುಂದಿನ ಬಾರಿಯೂ ನಮ್ಮದೆ ಸರ್ಕಾರ ಅನ್ನೋ ಓವರ್ ಕಾನ್ಫಿಡೆನ್ಸ್ ಸಿದ್ದು ಅಂಡ್ ಟೀಂಗಿತ್ತು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದುಗಿದ್ದ ಆತ್ಮ ವಿಶ್ವಾಸ ಕಡಿಮೆಯಾಗ ತೊಡಗಿತು, ಚಾಮುಂಡೇಶ್ವರಿಯಲ್ಲಿ ನಿಂತ್ರು ಸಿದ್ದರಾಮಯ್ಯ ಗೆಲ್ಲಲ್ಲ ಅನ್ನೋ ಮಾತುಗಳು ಅಂದೇ ಕೇಳಿ ಬಂದ್ವು, ಸೇಫರ್ ಸೈಡ್ ಗೆ ಇರ್ಲಿ ಅಂತಾ ಮೈಸೂರು ಬಿಟ್ಟು ದೂರದ ಬಾಗಲಕೋಟೆಯ ಬದಾಮಿಗೆ ಹೋಗಿ ಸ್ಪರ್ಧೆ ಮಾಡುವ ತೀರ್ಮಾನ ಮಾಡಿದ್ರು. ಫಲಿತಾಂಶದ ವೇಳೆಗೆ ಸಿದ್ದರಾಮಯ್ಯಗೆ ಬಂದ ಮಾಹಿತಿ ದೃಡವಾಯ್ತು.

ಚಾಮುಂಡೇಶ್ವರಿಯಲ್ಲಿ ಸಿದ್ದು ಹೀನಾಯವಾಗಿ ಸೋತ್ರು, ರಾಜಕೀಯವಾಗಿ ಪುನರ್ಜನ್ಮ ಕೊಟ್ಟಿದ್ದ ಚಾಮುಂಡೇಶ್ವರಿ ಮತದಾರರು. ಸಿಎಂ ಅನ್ನೋದನ್ನು ನೋಡದೇ ಹೀನಾಯವಾಗಿ ಸೋಲಿಸಿ ಬಿಟ್ಟಿದ್ರು. ಸಿದ್ದು ಕೈ ಹಿಡಿಯುತ್ತಾರೆ ಅಂತಾ ಭಾವಿಸಿದ್ದ ಮತದಾರ ನಡು ನೀರಿನಲ್ಲೇ ಕೈ ಬಿಟ್ಟು ಹೋಗಿದ್ದ. ಅಲ್ಲಿಗೆ ಪುನರ್ಜನ್ಮ ಕೊಟ್ಟ ಕ್ಷೇತ್ರವೇ ರಾಜಕೀಯ ಜೀವನ ಮುಗಿಸುವ ಸೂಚನೆಯನ್ನು ನೀಡಿತ್ತು. ಒಂದು ವೇಳೆ ಬದಾಮಿಯಲ್ಲಿ ಸಿದ್ದು ಗೆಲ್ಲದೆ ಹೋಗಿದ್ರೆ ಇಂದು ಸಿದ್ದು ಸ್ಥಿತಿ ಯೋಚಿಸಲು ಆಗದೊಷ್ಟು ಶೋಚನಿಯವಾಗಿರುತ್ತಿತ್ತು.

ಸಿದ್ದರಾಮಯ್ಯ ರಾಹು, ಶನಿಯ ಮಾತನ್ನು ಹೇಳುತ್ತಿದ್ದಂತೆ ಬಿಜೆಪಿ ಪಕ್ಷದಲ್ಲಿ ಕಾಲೆಳೆಯೋ ಆಟ ಬಹು ಜೋರಾಗಿದೆ. ಅಷ್ಟೆ ಅಲ್ಲ ಸಿದ್ದು ಪಾಲಿನ ಆ ರಾಹು ಯಾರು, ಕೇತು ಯಾರು ಅನ್ನೋದಕ್ಕೂ ವ್ಯಾಖ್ಯಾನವನ್ನ ನೀಡುತ್ತಿದ್ದಾರೆ. ಅವರ ಪಿತೂರಿಯಿಂದಲೇ ಸಿದ್ದು ಸೋತಿದ್ದು. ಈಗ ಅವರೊಂದಿಗೆ ಕೈ ಜೋಡಿಸಿದ್ದಾರೆ ಅಂತಾ ಬಿಜೆಪಿ ನಾಯಕರು ಲೇವಡಿ ಮಾಡುತ್ತಿದ್ದಾರೆ. ಹಾಗಿದ್ರೆ ಆ ರಾಹು, ಕೇತುಗಳು ಯಾರು ಗೊತ್ತಾ? ಕೇಳಿದ್ರಲ್ಲ ಬಿಜೆಪಿ ಮುಖಂಡ ಈಶ್ವರಪ್ಪ ಹೇಳುತ್ತಿರೋ ಮಾತನ್ನ ಸಿದ್ದು ಪಾಲಿಗೆ ರಾಹು, ಕೇತು ಶನಿ ಜೆಡಿಎಸ್ ಪಕ್ಷದಲ್ಲೇ ಇದ್ದಾರಂತೆ. ಸಿದ್ದರಾಮಯ್ಯಗೆ ಜಿ.ಪರಮೇಶ್ವರ್ ಅವರೇ ರಾಹು, ಜಿ.ಟಿ.ದೇವೇಗೌಡ, ರೇವಣ್ಣ ಕೇತು ಹಾಗೂ ಜೆಡಿಎಸ್ ಶನಿ ಇದ್ದ ಹಾಗೆ. ಜನತಾದಳದ ಶನಿಗಳನ್ನು ಕಟ್ಟಿಕೊಂಡು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾವಣ ಅಲ್ಲಲ್ಲ ರೇವಣ್ಣ ಅನ್ನೋದ್ರ ಮೂಲಕ ರೇವಣ್ಣರ ಮೇಲೆ ಲೇವಡಿ ಮಾಡಿದ್ದಾರೆ. ಇನ್ನು,ಸಿದ್ದರಾಮಯ್ಯನವರು ಜಿ.ಟಿ. ದೇವೇಗೌಡರ ಬೆನ್ನಿಗೆ ಚಾಕು ಹಿಡಿದು ನಿಂತಿದ್ದಾರೆ.

ಸಿದ್ದರಾಮಯ್ಯ  ಬೆನ್ನಿಗೆ ಕುಮಾರಸ್ವಾಮಿ ಚಾಕು ಹಿಡಿದು ನಿಂತಿದ್ದಾರೆ. ಯಾವಾಗ ಇವರು ಸಾಯುತ್ತಾರೊ ಗೊತ್ತಿಲ್ಲ ಎಂದು ಕುಹಕವಾಡಿದ್ದಾರೆ. ಸಮ್ಮಿಶ್ರ ಸರಕಾರ ಮುಳುಗುತ್ತಿರುವ ಹಡಗು.ಕಾಂಗ್ರೆಸ್ ಜೆಡಿಎಸ್ ನವರು ಈಜು ಬಾರದವರು.ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ.  ಚುನಾವಣೆ ಮುಗಿಯುತ್ತಿದ್ದಂತೆ ಮುಳುಗಿ ಹೋಗುತ್ತಾರೆ ಅಂತಾ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಬಗ್ಗೆ ಟಾಂಗ್ ಕೊಟ್ಟಿದ್ದಾರೆ.ಈ ಎಲೆಕ್ಷನ್ ಇಷ್ಟೊಂದು ರಂಗೇರಲು ಇನ್ನೊಂದು ಕಾರಣವಿದೆ, ಆ ಕಾರಣ ಏನು ಗೊತ್ತಾ? ಒಂದು ವೇಳೆ ಈ ಎಲೆಕ್ಷನ್ ನಲ್ಲಿ ಸೋತ್ರೆ ದೋಸ್ತಿ ಸರ್ಕಾರಕ್ಕೆ ಕಂಟಕ ಬರೋದಂತು ನಿಶ್ಚಿತ. ಹೌದು ವೀಕ್ಷಕರೇ ರಾಮನಗರ ಮತ್ತು ಮಂಡ್ಯದಲ್ಲಿ ಜೆಡಿಎಸ್ ಗೆದ್ದೆ ಗೆಲ್ಲುತ್ತೆ ಅನ್ನೋ ಬೇರೆ ಹೇಳಬೇಕಿಲ್ಲ. ಆದ್ರೆ ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ಮಾತ್ರ ಟಫ್ ಪೈಟ್ ಇದೆ. ಇಲ್ಲಿ ಗೆದ್ದರೆ ಮಾತ್ರ.ಅಷ್ಟೆ ಅಲ್ಲ ದೋಸ್ತಿ ಸರ್ಕಾರವನ್ನ ಬಿಜೆಪಿ ನಾಯಕರು ಅಪವಿತ್ರ ಮೈತ್ರಿ ಅಂತಾ ಹೇಳುತ್ತಲೇ ಇರುತ್ತಾರೆ.

ಆ ಮಾತಿಗೆ ಈ ಚುನಾವಣೆ ಕೆಲವು ಸಾಕ್ಷ್ಯವನ್ನು ಸಹ ನೀಡಲಿದೆ. ಆಢಳಿತ ರೂಢ ದೋಸ್ತಿ ಸರ್ಕಾರ ಇಲ್ಲಿ ಗೆದ್ರೆ ಅವರ ಮೈತ್ರಿ ಪಾಸ್, ಒಂದು ವೇಳೆ ಬಿಜೆಪಿ ಗೆದ್ದಿದ್ದೇ ಆದಲ್ಲಿ ಅದು ಮೈತ್ರಿ ಸರ್ಕಾರಕ್ಕೆ ಆಗೋ ದೊಡ್ಡ ಲಾಸ್, ಅಲ್ಲಿಗೆ ಮೈತ್ರಿ ಸರ್ಕಾರಕ್ಕೆ ಜನರಿಗೆ ನಂಬಿಕೆ ಇಲ್ಲ ಅನ್ನೋ ಸಂದೇಶ ದೇಶದಾದ್ಯಂತ ರವಾನೆಯಾಗಲಿದೆ. ಯಾಕೆಂದ್ರೆ ಕಾಂಗ್ರೆಸ್ ಕನಸಿನ ಮಹಾ ಮೈತ್ರಿಗೆ ನೀರು ಎರೆದಿದ್ದೆ ಕರ್ನಾಟಕ. ಹೀಗಿದ್ದ ಮೇಲೆ ಕರ್ನಾಟಕದ ಉಪ ಚುನಾವಣೆಯಲ್ಲಿ ದೋಸ್ತಿ ಸರ್ಕಾರ ಸೋತ್ರೆ ಅಲ್ಲಿಗೆ ಲೋಕ ಸಭೆಯ ಮುಂದಿನ ಚಿತ್ರಣ ಏನು ಅನ್ನೋ ಮಾತ್ರ ಸ್ಪಷ್ಟ.ಈ ಉಪ ಚುನಾವಣೆಯ ಅಂಕಿ ಸಂಖ್ಯೆಗಳ ಫ‌ಲಿತಾಂಶ ಕೇಂದ್ರ ಸರಕಾರದ ಮೇಲಾಗಲಿ; ರಾಜ್ಯ ಸರಕಾರದ ಮೇಲಾಗಲಿ ನೇರವಾಗಿ ಯಾವ ಪರಿಣಾಮವೂ ಬೀರದು. ಆದರೂ ಇಂದಿನ-ಮುಂದಿನ ಭವಿಷ್ಯದ ದೃಷ್ಟಿಯಿಂದ ಪಕ್ಷಗಳು ಮಿನಿ ಸಮರ ಎಂದು ಭಾವಿಸಿಕೊಂಡು ಕಣಕ್ಕೆ ಇಳಿದಿವೆ.

ಕರ್ನಾಟಕವನ್ನೇ ಸೀಮಿತವಾಗಿಟ್ಟುಕೊಂಡು ಹೇಳುವುದಾದರೆ; ಈ ಉಪ ಚುನಾವಣೆಯ ಫ‌ಲಿತಾಂಶ ಆಡಳಿತರೂಢ  ಮೈತ್ರಿ ಸರಕಾರದ ಪವಿತ್ರ ಅಥವಾ ಅಪವಿತ್ರ ಮೈತ್ರಿಯ ಅಗ್ನಿ ಪರೀಕ್ಷೆಯಂತೆ ಆಗಿದೆ. ಅದೇ ರೀತಿ ಕೇಂದ್ರದ ಮೋದಿ ಸರಕಾರ 2019ರಲ್ಲಿ ಮಹಾ ಚುನಾವಣೆ ಎದುರಿಸಬೇಕಾದ ಹೊಸ್ತಿಲಲ್ಲಿರುವ ಕಾರಣ ಈ ಉಪಚುನಾವಣೆಯ ಫ‌ಲಿತಾಂಶ ಮುಂದೆ ಕರ್ನಾಟಕ ಹಾಗೂ ರಾಷ್ಟ್ರ ವ್ಯಾಪಿಯಾಗಿ ಯಾವ ರೀತಿಯಲ್ಲಿ ತಂತ್ರಗಾರಿಕೆಯನ್ನು ಹೆಣೆಯಬೇಕಾಗುತ್ತದೆ ಅನ್ನುವುದಕ್ಕೆ ಮೊದಲ ಪಾಠವೂ ಆಗಬಹುದು, ಮಾತ್ರವಲ್ಲ ನೈತಿಕ ಸ್ಥೈರ್ಯ-ಧೈರ್ಯ ಹೆಚ್ಚಿಸಬಲ್ಲ ಅರ್ಥಾತ್‌ ಕುಂದಿಸಬಲ್ಲ ಸೋಲು ಗೆಲುವಿನ ಲೆಕ್ಕಚಾರವೂ ಆಗುವುದರಲ್ಲಿ ಸಂದೇಹವಿಲ್ಲ.ಸಧ್ಯ ಈ ಉಪ ಚುನಾವಣೆಯಲ್ಲಿ ಎಲ್ಲರ ಚಿತ್ತ ನೆಟ್ಟಿರೋದು ಬಳ್ಳಾರಿಯತ್ತ. ಬಳ್ಳಾರಿಯಲ್ಲಿ ಘಟಾನುಘಟಿ ನಾಯಕರು ಎದುರು ಬದುರಾಗಿ ಮಾತಿನಲ್ಲೇ ಬಡಿದಾಡಿ ಕೊಳ್ಳುತ್ತಿದ್ದಾರೆ. ಅವರಿಗಿಂತ ನಾವೇನ್ ಕಮ್ಮಿ , ನಮಗಿಂತ ಅವರೇನು ಕಮ್ಮಿ ಅನ್ನೋ ರೀತಿಯಲ್ಲಿ ಇಬ್ಬರ ನಡುವೆ ವಾಗ್ಯೂದ್ಧ ಜೋರಾಗಿದೆ.

ಇಷ್ಟು ದಿನಗಳ ಕಾಲ ಶ್ರೀ ರಾಮುಲು ಡಿಕೆ ಶಿವಕುಮಾರ್ ವಿರುದ್ಧ ಮಾತಿನ ಪ್ರಹಾರ ಮಾಡ್ತಾ ಇದ್ರು. ಆ ಮಾತಿಗೆ ಡಿಕೆಶಿ ಸಕ್ಕಾತ್ ಆಗಿಯೇ ಎದಿರೇಟು ಕೊಡ್ತಾ ಇದ್ರು. ಆದ್ರೀಗ ಶ್ರೀ ರಾಮುಲು ಮಾತಿಗೆ ಜೀವದ ಗೆಳೆಯ ರೆಡ್ಡಿ ಕೂಡ ಧ್ವನಿ ಗೂಡಿಸಿದ್ದಾರೆ, ಆ ಮೂಲಕ ಇಬ್ಬರು ಸೇರಿ ಶಿವಕುಮಾರ್ ಮೇಲೆ ಮುಗಿ ಬಿದ್ದಿದ್ದಾರೆ. ಮಾತಿಗೆ ಬಗ್ಗದ ಏಟಿಗೆ ನಡುಗದ ಕನಕ ಪುರ ಬಂಡೆ ಇಬ್ಬರ ಪ್ರವಾಹದೆದುರು ಗಟ್ಟಿಯಾಗಿ ನಿಂತಿದ್ದಾರೆ.ಜನಾರ್ಧನ್ ರೆಡ್ಡಿ ಈ ರೀತಿ ಸವಾಲು ಹಾಕ್ತಾ ಇದ್ರೀ ಟ್ರಬಲ್ ಶೂಟರ್ ಸುಮ್ಮನೆ ಇರ್ತಾರೆಯೇ, ಮೊದಲೇ ಈ ಸಮ್ಮಿಶ್ರ ಸರ್ಕಾರವನ್ನ ಕಾಪಾಡಿದ ಆಪತ್ಭಾಂದವ, ಗಣಿದಣಿ ರೆಡ್ಡಿ ಸವಾಲಿಗೆ ಪ್ರತಿ ಸವಾಲನ್ನು ಹಾಕಿದ್ದಾರೆ.

ಸಧ್ಯಕ್ಕಿರೋ ಪ್ರಶ್ನೆ ಅಂದ್ರೆ ನವೆಂಬರ್ 1 ನೇ ತಾರೀಖು ಡಿಕೆಶಿವಕುಮಾರ್ ಯಾವ ದಾಖಲೆ ಬಿಡುಗಡೆ ಮಾಡುತ್ತಾರೆ. ಅಂದು ಬೇರೆ ಏನಾದ್ರು ಸ್ಕೆಚ್ ಹಾಕಿಕೊಂಡಿದ್ದಾರ ಅನ್ನೋದು. ಅದಕ್ಕೆಲ್ಲ ಇನ್ನು 2 ದಿನದಲ್ಲಿ ಉತ್ತರ ಸಿಗುತ್ತೆ.ಎಸ್ ಸಧ್ಯ ಬಳ್ಳಾರಿ ಬ್ಯಾಟ್ ಕಂಪ್ಲೀಟ್ ಆಗಿ ಡಿಕೆ ಶಿವಕುಮಾರ್ … ಜನಾರ್ಧನ್ ರೆಡ್ಡಿ,.. ಶ್ರೀರಾಮುಲು ಯುದ್ಧವಂತೆ ಮಾರ್ಪಾಡಾಗಿದೆ. ಇಲ್ಲಿ ಗೆಲ್ಲಲೇ ಬೇಕು ಅಂತಾ ರೆಡ್ಡಿ ಗ್ಯಾಂಗ್ ಪಣ ತೊಟ್ಟಿದ್ರೆ. ಬೆಂಗಳೂರಿನಿಂದ ಬಳ್ಳಾರಿಗೆ ಹೋಗಿ ಗೆದ್ದೇ ಗೆಲ್ತೀನಿ ಅಂತಾ ಟ್ರಬಲ್ ಶೂಟರ್ ತಂತ್ರ ರೂಪಿಸುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಯಾರು ಗೆಲ್ತಾರೆ. ಯಾರು ಯಾರಿಗೆ ಖೆಡ್ಡಾ ತೋಡುತ್ತಾರೆ. ಆ ಎಲ್ಲದಕ್ಕೂ ಉಪ ಚುನಾವಣೆಯ ಫಲಿತಾಂಶವೇ ಫೈನಲ್ ಆನ್ಸರ್, ಆ ಉತ್ತರ ಬರೋವರ್ಗು ಜೆಡ್ ವಾಚ್ ಈ ಬೈ ಲೆಕ್ಷನ್ ಬಡಿದಾಟ..

LEAVE A REPLY

Please enter your comment!
Please enter your name here