Home District ಸಿದ್ದರಾಮಯ್ಯ ಭೇಟಿ ನಂತರವೂ MTB ನಾಗರಾಜ್ ಅಸಮಾಧಾನ..?! “ಸರ್ಕಾರದಲ್ಲಿ ಪಾರದರ್ಶಕತೆ ಇಲ್ಲ, ತಾರತಮ್ಯ”…

ಸಿದ್ದರಾಮಯ್ಯ ಭೇಟಿ ನಂತರವೂ MTB ನಾಗರಾಜ್ ಅಸಮಾಧಾನ..?! “ಸರ್ಕಾರದಲ್ಲಿ ಪಾರದರ್ಶಕತೆ ಇಲ್ಲ, ತಾರತಮ್ಯ”…

1460
0
SHARE

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಜೊತೆ ಮಾನಸಿಕವಾಗಿ ದೂರವಾಗಿದ್ದ ಎಂ ಟಿ ಬಿ ನಾಗರಾಜ್ ಸಿದ್ದರಾಮಯ್ಯ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಎಂ ಟಿ ಬಿ ನಾಗರಾಜ್‌ಗೆ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚೆ ನಡೆಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ರು. ಈ ಹಿನ್ನೆಲೆ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ಭೇಟಿ ಬಳಿಕವೂ ಕೂಡ ಎಂಟಿಬಿ ನಾಗರಾಜ್ ಅಸಮಾಧಾನ ಹೊರಹಾಕಿದ್ದು ಸಚಿವ ಸ್ಥಾನದ ಬಗ್ಗೆ ಸಿದ್ದರಾಮಯ್ಯ ನನಗೆ ಯಾವ ಭರವಸೆಯನ್ನೂ ನೀಡಿಲ್ಲ. ಹೈಕಮಾಂಡ್ ಇದೆ ಮಾತನಾಡೋಣ ಎಂದು ಹೇಳಿದ್ದಾರೆ.

ನನಗೆ ಅಸಮಾಧಾನ ಇರುವುದು ಸತ್ಯ. ಈ ಸರ್ಕಾರದಲ್ಲಿ ಪಾರದರ್ಶಕತೆ ಇಲ್ಲ. ತಾರತಮ್ಯ ಮಾಡುತ್ತಾರೆ. ಸದ್ಯಕ್ಕೆ ನಾನೆಲ್ಲೂ ಹೋಗಲ್ಲ. ಕಾದು ನೋಡೋಣ ಎಂದು ಬೇಸರದಿಂದಲೇ ಸಿದ್ದರಾಮಯ್ಯ ನಿವಾಸದಿಂದ ಹೋಗಿದ್ದಾರೆ.

LEAVE A REPLY

Please enter your comment!
Please enter your name here