Home District ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ 2 ನಿಮಿಷದಲ್ಲಿ ಸರ್ಕಾರ ಬೀಳುತ್ತೆ,ಅವರು ಇಲ್ಲದಿದ್ದೆ ಸಮ್ಮಿಶ್ರ ಸರ್ಕಾರ ಇರೋದಿಲ್ಲ. ಕಾಂಗ್ರೆಸ್...

ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ 2 ನಿಮಿಷದಲ್ಲಿ ಸರ್ಕಾರ ಬೀಳುತ್ತೆ,ಅವರು ಇಲ್ಲದಿದ್ದೆ ಸಮ್ಮಿಶ್ರ ಸರ್ಕಾರ ಇರೋದಿಲ್ಲ. ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದ ಕೈ ಶಾಸಕ

1879
0
SHARE

ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ಅಸಮಾಧಾನ ಶಮನ ಮಾಡಲು ಹೈಕಮಾಂಡ್ ಗೆ ಕೂಡ ತಕ್ಷಣಕ್ಕೆ ಸಾಧ್ಯವಾಗಿಲ್ಲ..ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ದೆಹಲಿಗೆ ಕರೆಸಿ ಮಾತನಾಡಿದರೂ ಎಂ.ಬಿ.ಪಾಟೀಲ್ ಮತ್ತು ಟೀಂ ನ ಅಸಮಾಧಾನ ದೂರವಾಗಿಲ್ಲ..ಮತ್ತೆ ಬೆಂಗಳೂರಿನಲ್ಲಿ ಸಭೆ ನಡೆಸಿ ಎಲ್ಲಾ ಶಾಸಕರು ಚರ್ಚಿಸಿ ಮುಂದಿನ ನಿರ್ಧಾರ ಮಾಡ್ತೀವಿ ಅಂತ ದೆಹಲಿಯಲ್ಲಿ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ…

ಎರಡನೇ ಹಂತದಲ್ಲಿ ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದ್ದಾರೆ..ಮಂತ್ರಿಯಾದರೆ ಮೊದಲನೇ ಹಂತದಲ್ಲೇ ಆಗಬೇಕಿತ್ತು..ಇನ್ನೇನಿದ್ರೂ ಬೇರೆಯವರ ಪರವಾಗಿ ನಿಂತು ಹೋರಾಟ ಮಾಡುತ್ತೇವೆ ಎಂದು ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ…

ಇನ್ನೂ ಶಿಡ್ಲಘಟ್ಟ ಶಾಸಕ ಮುನಿಯಪ್ಪ ಬೆಂಬಲಿಗರು ಇಂದು ಸಚಿವ ಡಿಕೆ ಶಿವಕುಮಾರ್ ನಿವಾಸದ ಮುಂದೆ ಪ್ರತಿಭಟನೆ ಮಾಡಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ರು.ಮತ್ತೊಂದೆಡೆ ಐವಾನ್ ಡಿಸೋಜಾ ಬೆಂಬಲಿಗರು ಡಿಸಿಎಂ ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಿ ತಮ್ಮ ನಾಯಕನಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ರು…

ಬೀದರ್‌ನಲ್ಲಿ ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದ ಕೈ ಶಾಸಕಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ. ಸತ್ಯನಾರಾಯಣ ಹೊಸ ಬಾಂದ್ ಸಿಡಿಸಿದ್ದಾರೆ. ಬೀದರ್‌ನಲ್ಲಿ ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದ ಕೈ ಶಾಸಕ..?ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಎರಡೇ ನಿಮಿಷದಲ್ಲಿ ಸರ್ಕಾರ ಬೀಳುತ್ತೆ, ಸರ್ಕಾರ ನಿಂತಿರೋದೇ ಸಿದ್ದರಾಮಯ್ಯ ನಿರ್ಧಾರದ ಮೇಲೆ ಅಂತ ಗುಡುಗಿದ್ದಾರೆ…

ಬೀದರ್‌ನಲ್ಲಿ ಹೇಳಿಕೆ ಕೊಟ್ಟ ಶಾಸಕ ಬಿ. ನಾರಾಯಣ ರಾವ್. ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಕಸರತ್ತಿನ ಜೊತೆ ಜೊತೆಯಲ್ಲೇ ಮೈತ್ರಿ ಸರ್ಕಾರಕ್ಕೆ ಎಂದುರಾಗುವ ಕಂಟಕದ ಸುಳಿವು ನೀಡಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯರನ್ನು ಎದುರಾಕಿಕೊಂಡ್ರೆ ಪರಮೇಶ್ವರ್‌ಗೆ ಗಂಡಾಂತರ ತಪ್ಪಿದ್ದಲ್ಲ, ಎನ್ನುವ ಮೂಲಕ ಸ್ವಪಕ್ಷದ ವಿರುದ್ಧವೇ ಗುಡುಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ…

LEAVE A REPLY

Please enter your comment!
Please enter your name here