Home District ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡ ಪರಮೇಶ್ವರ್..?! ತುಮಕೂರು ಉಳಿಸಿಕೊಳ್ಳಲು ಪರಮೇಶ್ವರ್ ಏಕಾಂಗಿ ಹೋರಾಟ..! ಸಿದ್ದರಾಮಯ್ಯ ನಡೆಗೆ ಪರಮೇಶ್ವರ್...

ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡ ಪರಮೇಶ್ವರ್..?! ತುಮಕೂರು ಉಳಿಸಿಕೊಳ್ಳಲು ಪರಮೇಶ್ವರ್ ಏಕಾಂಗಿ ಹೋರಾಟ..! ಸಿದ್ದರಾಮಯ್ಯ ನಡೆಗೆ ಪರಮೇಶ್ವರ್ ತೀವ್ರ ಆಕ್ರೋಶ..!

294
0
SHARE

ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುರುವುದಕ್ಕೆ ಡಿಸಿಎಂ ಅಸಮಾಧಾನಗೊಂಡು ಆಕ್ಷೇಪ ವ್ಯಕ್ತಪಡಿಸಿದ್ರು.. ಕೈ ತಪ್ಪಿದ ತುಮಕೂರು ‌ಕ್ಷೇತ್ರ ಪಡೆಯಲು ಪರಂ ಶತ ಪ್ರಯತ್ನ ಮಾಡುತ್ತಿದ್ದಾರೆ.

ನಿನ್ನೆ ರಾತ್ರಿ ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾದ ಡಿಸಿಎಂ ಜಿ ಪರಮೇಶ್ವರ್ ತುಮಕೂರು ಕ್ಷೇತ್ರ ಕೊಡುವಂತೆ ಮನವಿ ಮಾಡಿದ್ದಾರೆ.. ಈಗಾಗಲೇ ಅಲ್ಲಿ ನಮ್ಮ ಪಕ್ಷದ ಹಾಲಿ ಸಂಸದರು ಇದ್ದಾರೆ.

ಇದೀಗ ಈ ಕ್ಷೇತ್ರ ನಿಮಗೆ ಬಿಟ್ಟಿರೋದಕ್ಕೆ ಅವರ ಭವಿಷ್ಯ ಹಾಳಾಗುತ್ತೆ ಹೀಗಾಗಿ ತುಮಕೂರು ಕ್ಷೇತ್ರ ಬಿಟ್ಟು ಕೊಡಿ ಎಂದು ಕೇಳಿಕೊಂಡಿದ್ದಾರೆ.. ತುಮಕೂರು ತಪ್ಪಿದ್ದಕ್ಕೆ ಹೇಗಾದ್ರು ಮಾಡಿ ಆ ಕ್ಷೇತ್ರ ತಮಗೆ ಕೊಡಿಸುವಂತೆ ಡಿಸಿಎಂ ಬಳಿ ಮುದ್ದೇಹನುಮೇಗೌಡ ಮನವಿ ಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯ ಮತ್ತು ಮಲ್ಲಿಕಾಜ್ಞಜಿನ ಖರ್ಗೆ ಸೇರಿ ಕಾಂಗ್ರೆಸ್ ಹಿರಿಯ ನಾಯಕರು ಕೊನೆಯ ಕ್ಷಣದವರೆಗೂ ತುಮಕೂರು ಕ್ಷೇತ್ರ ಕಾಂಗ್ರೆಸ್‌ಗೆ ಕೊಡುವಂತೆ ಪ್ರಯತ್ನಿಸುತ್ತೇವೆ.. ಈ ಬಗ್ಗೆ ಹೈಕಮಾಂಡ್‌ನಲ್ಲೂ ಚರ್ಚಿಸುತ್ತೇವೆ ಎಂದಿದ್ದಾರೆ.

ಡಿಸಿಎಂ ಜಿ ಪರಮೇಶ್ವರ್ ಬಳಿ ಅಳಲು ತೋಡಿಕೊಂಡಿದ್ದ ಮುದ್ದೆಹನುಮೇಗೌಡ. ಮುದ್ದೆಹನುಮೇ ಗೌಡರಿಂದ ಒತ್ತಡ ನಂತರ ಇದೀಗ ದೇವೇಗೌಡರನ್ನು ಭೇಟಿಯಾಗಿರುವ ಪರಂ.ತುಮಕೂರು ಕ್ಷೇತ್ರ ತಮಗೆ ಬಿಟ್ಟು ಕೊಡುವಂತೆ ದೇವೇಗೌಡರ ಬಳಿ ಪರಮೇಶ್ವರ್ ಮನವಿ…

LEAVE A REPLY

Please enter your comment!
Please enter your name here