Home District ಸಿದ್ದರಾಮಯ್ಯ “ಶ್ರೀರಾಮುಲು 420” ಎಂಬ ಹೇಳಿಕೆಗೆ BSY ಟಾಂಗ್..!? “ಈ ತರಹದ ಮಾತುಗಳು ಅವರ ಘನತೆಗೆ...

ಸಿದ್ದರಾಮಯ್ಯ “ಶ್ರೀರಾಮುಲು 420” ಎಂಬ ಹೇಳಿಕೆಗೆ BSY ಟಾಂಗ್..!? “ಈ ತರಹದ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ”

674
0
SHARE

ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀರಾಮುಲು 420 ಎಂಬ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಪ್ರಚಾರದ ಭರಾಟೆಯಲ್ಲಿ ನಾಲಿಗೆ ಹರಿ ಬಿಟ್ಟಿದ್ದಾರೆ.ಈ ತರಹದ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಶ್ರೀರಾಮಲು ಅವರ ಜೊತೆಗೆ ವಾಲ್ಮೀಕಿ ಸಮಯದಾಯವನ್ನೂ ಸಿದ್ದರಾಮಯ್ಯ ಅವಮಾನಿಸಿದ್ದಾರೆ.

ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಕಿಡಿಕಾರಿದ್ದಾರೆ. ಇನ್ನೂ ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಬಿಎಸ್‌ವೈ ನಾವು ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಈಗಾಗಲೇ ಗೆದ್ದಿದ್ದೇವೆ.

ಹೆಚ್ಚು ಅಂತರದ ಗೆಲುವಿಗೆ ಪ್ರಯತ್ನ ನಡೆದಿದೆ. ಆರೋಪ, ಪ್ರತ್ಯಾರೋಪಗಳಿಗೆ ಜನ ಮುಂದಿನ ತಿಂಗಳು 5 ರಂದು ಉತ್ತರಿಸಲಿದ್ದಾರೆ.ಮಂಡ್ಯ ಪ್ರಚಾರದ ವೇಳೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಚುನಾವಣೆಯ ಅಂತಿಮ ತೀರ್ಪು ಮತದಾರನದ್ದು ಎಂದಿದ್ದಾರೆ. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕುಮಾರಸ್ವಾಮಿ ಅವರನ್ನ ಪ್ರಶ್ನಿಸಿದ ಬಿ.ಎಸ್.ವೈ. ನಿಮ್ಮವ್ವಿ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಗೊಂದಲ ಇದೆ.

ಕೆಲವರು ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಂದುಕೊಂಡ್ರೆ ಇನ್ನೂ ಕೆಲವರು ಚಿದಂಬರಂ ಹೆಸರು ಹೇಳ್ತಿದ್ದಾರೆ. ಎಲ್ಲ ಸರ್ವೆದಲ್ಲೂ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಿ ಆಳ್ವಿಕೆ ನಡೆಸುತ್ತಾರೆ ಎಂಬ ವರದಿ ಬಂದಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here