Home District ಸಿದ್ದರಾಮಯ್ಯ ಸೋಲಿಸಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯ..! ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ..!

ಸಿದ್ದರಾಮಯ್ಯ ಸೋಲಿಸಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯ..! ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ..!

443
0
SHARE

ಎದೆ ಸೀಳಿದ್ರೆ ನನ್ನ ಎದೆಯಲ್ಲಿ ಮಾಜಿ ಸಿಎಂ ಸಿದ್ದರಾಮಣ್ಣನವರೇ ಇರುತ್ತಾರೆ ಎಂದು ಹೇಳಿ ಪೇಚಿಗೆ ಸಿಲುಕ್ಕಿದ್ದರು ಶಾಸಕರು, ಹಾಗೇಯೆ, ಶಾಸಕರು ಹೊಗಳಿ, ಕ್ಷಮೆ ಕೇಳಿದ್ದು ಮಾಸುವ ಮುನ್ನವೇ, ಇದೀಗ ಕಾವಿ ತೊಟ್ಟ ಸ್ವಾಮೀಜಿ ತಮ್ಮ ಸರಧಿಯನ್ನ ಎತ್ತಿ ತೋರಿಸಿದ್ದಾರೆ.

ಶಾಸಕರ ಸರಧಿ ನಂತರ ಸ್ವಾಮೀಜಿಗಳು ಈಗ ಮಾಜಿ ಸಿಎಂ ಸಿದ್ದರಾಮಯ್ಯನವರ ಪರ ಬ್ಯಾಟಂಗ್ ಮಾಡಿ ಪೇಚಿಗೆ ಸಿಲುಕಿದ್ದಾರೆ… ಮೈಸೂರಿನಲ್ಲಿ ನಡೆದ ಕನಕ ಭವನ ಉದ್ಘಾಟನ ಸಮಾರಂಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳುವ ಭರದಲ್ಲಿ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ… ನಿನ್ನೆ ಮೈಸೂರಿನಲ್ಲಿ ಕನಕ ಭವನ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಕಾಗಿನೆಲೆ ಶ್ರೀಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..

ರಾಜ್ಯದ ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಕ್ಕೇ ಕೊಡಗಿನಲ್ಲಿ ಭೂಮಿ ನಡುಗಿತು ಎಂಬ ಅರ್ಥದಲ್ಲಿ ಶ್ರೀಗಳು ಹೇಳಿದ್ದಾರೆ… ಸಿದ್ದರಾಮಯ್ಯ ಹಾಲುಮತ ಜನಾಂಗದಲ್ಲಿ ಹುಟ್ಟಿದವರು, ನೀರು ಕೇಳಿದವರಿಗೆ ಹಾಲು ಕೊಡುವ ಜನಾಂಗ ನಮ್ಮದು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲಪ್ರಳಯ ಆಗುವಂತಾಗಿದೆ. ಈ ಹಿಂದೆ ಉಡುಪಿಯಲ್ಲಿಯೂ ಕನಕದಾಸರಿಗೆ ಶ್ರೀಕೃಷ್ಣನ ದರ್ಶನ ಮಾಡಲು ಬಿಡದಿದ್ದಾಗ, ಅಂದು ಭೂಕಂಪನವಾಗಿತ್ತು.

ಹಾಲುಮತದವರನ್ನು ಸೋಲಿಸಿದರೆ ಪ್ರಕೃತಿ ಕೂಡಾ ಸಹಿಸಲ್ಲ ಎಂದು ಕಾಗಿನೆಲೆಶ್ರೀಗಳು ವಾಗ್ದಾಳಿ ನಡೆಸಿದ್ದಾರೆ.ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಆಡಿಯೋ ಬಗ್ಗೆಯೂ ಶ್ರೀಗಳು ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ… ನೀವು ರಾಜ್ಯದ ಮಾಜಿ ಮುಖ್ಯಮಂತ್ರಿ, ಒಂದು ಸಮುದಾಯದ ಗಣ್ಯ ವ್ಯಕ್ತಿ. ನಿಮ್ಮ ಬಗ್ಗೆ ಗೌರವವಿದೆ. ಆದರೆ, ನನ್ನ ಸಮುದಾಯದ ರಾಜಕೀಯ ವ್ಯಕ್ತಿಗಳ ಬಗ್ಗೆ ಕೀಳಾಗಿ ಮಾತನಾಡುವ ನಿಮ್ಮ ನಾಲಿಗೆಗೆ ಲಗಾಮನ್ನು ಕೊಡಿ ಹೇಳಲು ಇಷ್ಟಪಡುತ್ತೇನೆ ಎಂದು ಯಡಿಯೂರಪ್ಪ ವಿರುದ್ಧ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ರು.

ನಮ್ಮ ಸಮುದಾಯದ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಗನಕಗುರುಪೀಠ ಸಹಿಸುವುದಿಲ್ಲ ಎಂದು ಮಾನ್ಯ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡುತ್ತೇನೆ ಎಂದಿದ್ದಾರೆ.ಇನ್ನೂ ಪರೊಕ್ಷವಾಗಿ ಒಕ್ಕಲಿಗ ಸಮುದಾಯವನ್ನ ಶ್ರೀಗಳು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ರು.. ಒಂದು ಕೋಮಿನ ಸಮುದಾಯ ಸಿದ್ದರಾಮಯ್ಯ ಅವರಿಗೆ ಮಾಡಿದ ಅನ್ಯಾಯವನ್ನು ನೆನೆಸಿಕೊಂಡರೆ,

ಸಿದ್ದರಾಮಯ್ಯ ಅವರು ಈ ಸರ್ಕಾರವನ್ನು ಯಾವಾಗ ಬೇಕಾದರೂ ಹಿಚುಕಿ ಹಾಕಬಹುದಾಗಿತ್ತು. ಆದರೆ, ಸಿದ್ದರಾಮಯ್ಯನವರು ಹಾಲುಮತ ಸಮಾಜದಲ್ಲಿ ಹುಟ್ಟಿರುವಂಥದ್ದು. ಹೀಗಾಗಿ ಅವರ ದೊಡ್ಡ ಗುಣದಿಂದಲೇ ಸಮ್ಮಿಶ್ರ ಸರ್ಕಾರ ಇಂದಿಗೂ ಜೀವಂತವಾಗಿದೆ ಎನ್ನುವುದು ಬಹಳ ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯನವರನ್ನ ಸಮರ್ಥಿಸಿಕೊಂಡರು.

LEAVE A REPLY

Please enter your comment!
Please enter your name here