Home District ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಶ್ರೀರಾಮುಲು..!? ಶ್ರೀರಾಮುಲು ಸವಾಲ್ ಸ್ವೀಕರಿಸಿದ D.K.ಶಿವಕುಮಾರ್…

ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಶ್ರೀರಾಮುಲು..!? ಶ್ರೀರಾಮುಲು ಸವಾಲ್ ಸ್ವೀಕರಿಸಿದ D.K.ಶಿವಕುಮಾರ್…

1381
0
SHARE

ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪರಸ್ಪರ ಆರೋಪ ಪ್ರತ್ಯಾರೋಪದ ಭರಾಟೆಯಲ್ಲಿ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ನಾವೇ ಮಾಡಿದ್ದು ಎಂದು ಸವಾಲ್ ಹಾಕಿ ಹೇಳುವೆ ಎಂದು ಶ್ರೀ ರಾಮುಲು ಎಂದರೆ, ಚರ್ಚೆಗೆ ದಿನಾಂಕ , ಸಮಯ ನಿಗದಿ ಮಾಡಿ ನಾವು ತಯಾರ್ ಎಂದು ಡಿಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಗಣಿನಾಡು ಬಳ್ಳಾರಿಯ ಲೋಕಸಭೆ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸುತ್ತಿವೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ನಡುವೆ ವಾಕ್ಸಮರ ನಡೆಯುತ್ತಿದೆ.. ಚುನಾವಣಾ ಪ್ರಚಾರದ ವೇಳೆ ಶ್ರೀರಾಮುಲುರ ಕಾಲು ಎಳೆದು ವ್ಯಂಗ್ಯ ಮಾಡಿದ್ದ ಸಿದ್ದರಾಮಯ್ಯ, ಮಾಜಿ ಸಂಸದರಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲ..

ಅವರಿಗೆ ಕೇವಲ ಐಪಿಸಿ ಸೆಕ್ಷನ್ 420 ಮಾತ್ರ ಗೊತ್ತು ಎಂದು ಕಿಡಿಕಾರಿದ್ದರು.. ಇಂದು ಶ್ರೀರಾಮುಲು ತಿರುಗೇಟು ನೀಡಿ ಸಿದ್ದರಾಮಯ್ಯ ಬಳಸಿದ 420 ಪದ ಅವರಿಗೆ ಸಲ್ಲುತದೆ ಎಂದಿದ್ದಾರೆ.ಇನ್ನೂ ಬಳ್ಳಾರಿ ಜಿಲ್ಲೆಗೆ ಶ್ರೀ ರಾಮುಲು ಅವರ ಕೊಡುಗೆ ಏನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಪ್ರಶ್ನೆಗೆ ಶ್ರೀರಾಮುಲು ಉತ್ತರ ನೀಡಿ ಸವಾಲು ಹಾಕಿದ್ದಾರೆ.

ನಾವು ತಂದ ಅನುದಾನಕ್ಕಿಂತ ಒಂದೇ, ಒಂದು ರೂಪಾಯಿ ಹೆಚ್ಚಳ ಕೊಟ್ಟಿದ್ರೆ ಕೈ ನಾಯಕರು ಶ್ವೇತ ಪತ್ರ ಹೊರಡಿಸಲಿ. ನಾನು ಈಗಲೇ ನಮ್ಮ ಅಭ್ಯರ್ಥಿ ಜೆ.ಶಾಂತ ಅವರನ್ನು ಚುನಾವಣೆಯಿಂದಲೇ ಹಿಂದೆ ಸರಿಸುತ್ತೇವೆ ಎಂದು ಶ್ರೀರಾಮುಲು ಓಪನ್‌ ಆಗಿ ಸವಾಲ್ ಹಾಕಿದ್ದಾರೆ

ಶಾಸಕ ಶ್ರೀರಾಮುಲು ಸವಾಲ್ ಸ್ವೀಕರಿಸಿದ ಡಿಕೆಶಿ:ಶಾಸಕ ಶ್ರೀ ರಾಮುಲು ಸವಾಲ್‌ನ್ನು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸ್ವೀಕಾರ ಮಾಡಿದ್ದಾರೆ. ಶ್ರೀ ರಾಮುಲು ಅಣ್ಣನವರು ಈ ಬಗ್ಗೆ ಚರ್ಚೆ ಮಾಡಲು ಸಮಯ, ದಿನಾಂಕ, ನಿಗದಿ ಮಾಡಿ ಹೇಳಲಿ, ನಾವು ಚರ್ಚೆಗೆ ರೆಡಿಯಾಗಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ..

ಇನ್ನೂ ಎರಡೂ ಪಕ್ಷದ ನಾಯಕರು ಪ್ರಚಾರಕ್ಕೆ ಹೋಗುವ ಮುನ್ನ ವಾಲ್ಮೀಕಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಇತ್ತ ಕಾಂಗ್ರೆಸ್ ನಾಯಕರು ಸಭೆ ನಡೆಸಿ ರಣತಂತ್ರ ರೂಪಿಸಿದರೇ, ಶ್ರೀ ರಾಮುಲು ಮತ್ತು ತಂಡ ಬಳ್ಳಾರಿ ನಗರದಲ್ಲಿ ಪ್ರಚಾರ ನಡೆಸಿದ್ದಾರೆ.

LEAVE A REPLY

Please enter your comment!
Please enter your name here