Home District ಸಿದ್ದರಾಮಯ್ಯ ಹೊಸ ಬಾಂಬ್- ಸಂಪುಟದಲ್ಲಿರುವ ಮಂತ್ರಿಗಳ ಅವಧಿ 2ವರ್ಷ ಮಾತ್ರ..ಯಾವುದೇ ಕಾರಣಕ್ಕೂ ಇನೊಂದು ಡಿಸಿಎಂ ಇಲ್ಲ

ಸಿದ್ದರಾಮಯ್ಯ ಹೊಸ ಬಾಂಬ್- ಸಂಪುಟದಲ್ಲಿರುವ ಮಂತ್ರಿಗಳ ಅವಧಿ 2ವರ್ಷ ಮಾತ್ರ..ಯಾವುದೇ ಕಾರಣಕ್ಕೂ ಇನೊಂದು ಡಿಸಿಎಂ ಇಲ್ಲ

1774
0
SHARE

ನಾನು ಅತೃಪ್ತ ಶಾಸಕರಿಗೆ ಸ್ಪಂದಿಸಿಲ್ಲ ಅನ್ನೋದು ಊಹಾಪೋಹ.. ಅಸಮಾಧಾನವಿರುವ ಎಲ್ಲ ಶಾಸಕರೊಂದಿಗೆ ದಿನಕ್ಕೆ ಎರಡರಿಂದ, ಮೂರು ಸಾರಿ ಮಾತನಾಡ್ತಿದ್ದೇನೆ. ಸದ್ಯ ಅವ್ರೆಲ್ಲ ಸಮಾಧಾನ ವಾಗಿದ್ದಾರೆ ಎಂದು ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದ ನೀಲಗುಂದ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ ಶಾಸಕರಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ, ಅತೃಪ್ತಿಯಿಲ್ಲ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಹೈ ಕಮಾಂಡ್ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದೇನೆ‌, ಎಲ್ಲ ಅಸಮಾಧಾನ ಶಮನವಾಗಿದೆ ಆದರೆ ಯಾರಿಗೂ ಯಾವುದೇ ಭರವಸೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಸದ್ಯದ ಸಂಪುಟದಲ್ಲಿ ಮಂತ್ರಿಗಳನ್ನ ಮಾಡಿದ್ದು ಎರಡು ವರ್ಷಕ್ಕೆ ಎಂದ ಸಿದ್ದರಾಮಯ್ಯ,ಮುಂದೆ ಅರ್ಹರಿಗೆ ಮಂತ್ರಿ ಸ್ಥಾನ‌ ನೀಡುತ್ತೇವೆ ಎಂದರು.ಇದೆ ವೇಳೆ ಎಂ.ಬಿ ಪಾಟೀಲ್ ಡಿಸಿಎಂ ಸ್ಥಾನಕ್ಕೆ ಬೇಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಸರಕಾರದಲ್ಲಿ ಇನ್ನೊಂದು ಡಿಸಿಎಂ ಸ್ಥಾನ ಸೃಷ್ಟಿಯಾಗಲ್ಲ ಎಂದು ಎಮ್ ಬಿ ಪಾಟಿಲ್ ಬೇಡಿಕೆಗೆ ತೆರೆ ಎಳೆದರು.

ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿಲ್ಲ ಅದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದ ಮಾಜಿ ಸಿಎಮ್,ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರದ ಬಗ್ಗೆ ರಾಹುಲ್ ‌ಗಾಂಧಿಯವರು ನಿರ್ಧರಿಸುತ್ತಾರೆ. ನಾನು ಯಾರನ್ನು ಶಿಫಾರಸ್ಸು ಮಾಡಲ್ಲ.ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ನನ್ನ ಕರೆದು ಕೇಳ್ತಾರೆ, ಆವಾಗ ಹೇಳ್ತೇನೆ ಎಂದರು.

LEAVE A REPLY

Please enter your comment!
Please enter your name here