Home District ಸಿದ್ದುಗೆ ಸಂಪುಟ ಸ್ಥಾನಮಾನವೂ ಇಲ್ಲ, ಸರ್ಕಾರಿ ಮನೆಯೂ ಇಲ್ಲ..!? ಸಿದ್ದುಗೆ ಕ್ಯಾಬಿನೆಟ್ ಸ್ಥಾನ ಮಾನ ಕಲ್ಪಿಸುವ...

ಸಿದ್ದುಗೆ ಸಂಪುಟ ಸ್ಥಾನಮಾನವೂ ಇಲ್ಲ, ಸರ್ಕಾರಿ ಮನೆಯೂ ಇಲ್ಲ..!? ಸಿದ್ದುಗೆ ಕ್ಯಾಬಿನೆಟ್ ಸ್ಥಾನ ಮಾನ ಕಲ್ಪಿಸುವ ಲಕ್ಷಣ ಸದ್ಯಕ್ಕಿಲ್ಲ..! ಸರ್ಕಾರಿ ನಿವಾಸ ಕಾವೇರಿ ತೆರವುಗೊಳಿಸುವ ಅನವಾರ್ಯತೆ.!!?

1878
0
SHARE

ಸಿದ್ದುಗೆ ಸಂಪುಟ ಸ್ಥಾನಮಾನವೂ ಇಲ್ಲ, ಸರ್ಕಾರಿ ಮನೆಯೂ ಇಲ್ಲ.ಕ್ಯಾಬಿನೆಟ್ ಸ್ಥಾನ ಮಾನವನ್ನ ಸದ್ಯಕ್ಕೆ ಕೊಡುವ ಲಕ್ಷಣವಂತೂ ಇಲ್ಲ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನಿವಾಸವನ್ನು ಬಿಡಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ..ಹೀಗಾಗಿ ಸರ್ಕಾರಿ ಮನೆ ಖಾಲಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ…

ಬೆಂಗಳೂರಿನ ಕಾವೇರಿ ನಿವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೂ ಅವರಿಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಸ್ಥಾನ ಮಾನ ಇಲ್ಲದಿರವುದರಿಂದ ಮನೆ ಖಾಲಿ ಮಾಡಬೇಕಿದೆ…

ಅವರಿಗೆ ಕ್ಯಾಬಿನೆಟ್ ಸ್ಥಾನ ಮಾನ ನೀಡಬೇಕೆಂಬ ವಿಚಾರ ಚರ್ಚೆಯಾಗುತ್ತಿದ್ದರೂ ಅದು ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.ಇನ್ನು ಲಾಭದಾಯಕ ಹುದ್ದೆ ನೀಡುವ ವಿಚಾರದಲ್ಲಿ ನ್ಯಾಯಾಲಯದ ತೀರ್ಪುಗಳಿಂದ ಸಂಪುಟ ದರ್ಜೆ ಸ್ಥಾನ ಮಾನ ನೀಡಲು ಸರ್ಕಾರ, ಇನ್ನೂ ಸಮಾಲೋಚನೆ ನಡೆಸುತ್ತಿದೆ…

ಹೀಗಾಗಿ ಸದ್ಯಕ್ಕಂತೂ ಅವರಿಗೆ ಕ್ಯಾಬಿನೆಟ್ ಸ್ಥಾನ ಮಾನ ಸಿಗದಿರುವುದರಿಂದ ಈಗಿರುವ ಕಾವೇರಿ ನಿವಾಸವನ್ನು ಖಾಲಿ ಮಾಡಬೇಕಿದೆ..ಮುಖ್ಯಮಂತ್ರಿಯಾದಾಗಿನಿಂದ ಕಳೆದ 5 ವರ್ಷಗಳಿಂದ ಬೆಂಗಳೂರಿನ ಕಾವೇರಿ ನಿವಾಸದಲ್ಲಿರುವ ಸಿದ್ದು, ಈಗ ವಿಜಯನಗರದಲ್ಲಿರುವ ತಮ್ಮ ಸ್ವಂತ ನಿವಾಸಕ್ಕೆ ತೆರಳುತ್ತಾರೆ ಎಂದು ತಿಳಿದುಬಂದಿದೆ…

LEAVE A REPLY

Please enter your comment!
Please enter your name here