Home District ಸಿದ್ದುಗೆ ಸಾ.ರಾ.ಮಹೇಶ್ ಎಚ್ಚರಿಕೆ..! ಮಂಡ್ಯದಲ್ಲಿ ನೀವು ಕೈ ಕೊಟ್ರೆ. ಮೈಸೂರಿನಲ್ಲಿ ನಾವು ಕೈ ಕೊಡ್ತೀವಿ..!

ಸಿದ್ದುಗೆ ಸಾ.ರಾ.ಮಹೇಶ್ ಎಚ್ಚರಿಕೆ..! ಮಂಡ್ಯದಲ್ಲಿ ನೀವು ಕೈ ಕೊಟ್ರೆ. ಮೈಸೂರಿನಲ್ಲಿ ನಾವು ಕೈ ಕೊಡ್ತೀವಿ..!

2048
0
SHARE

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದೆ.. ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಈ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಖಾಡಕ್ಕಿಳಿದಿವೆ.. ಆದರೆ ಎರಡು ಪಕ್ಷಗಳ ನಾಯಕರು ಮಾತ್ರ ಒಗ್ಗಟ್ಟಿನ ಮಂತ್ರ ಜಪಿಸದೆ ಪರಸ್ಪರ ಕಿತ್ತಾಡತೊಡಗಿದ್ದಾರೆ..

ದೋಸ್ತಿಗಳ ಕಚ್ಚಾಟಕ್ಕೆ ಕಾರಣವಾಗಿರೋದೇ ಮಂಡ್ಯ ಕ್ಷೇತ್ರ.ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದೆ ಜೆಡಿಎಸ್ ನಾಯಕರ ಕಣ್ಣು ಕೆಂಪಾಗಿದೆ.. ಸುಲಭವಾಗಿ ಸಿಎಂ ಹೆಚ್ಡಿಕೆ ಪುತ್ರ ನಿಖಿಲ್ ರನ್ನು ಗೆಲ್ಲಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ದಳಪತಿಗಳಿಗೆ ಸುಮಲತಾ ಇದೀಗ ಅಡ್ಡಿಯಾಗಿದ್ದಾರೆ..

ಅದಕ್ಕಿಂತ ಹೆಚ್ಚಾಗಿ ಸುಮಲತಾ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇದಾರೆ ಅನ್ನೋ ಗುಸುಗುಸು ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.. ಮೇಲ್ನೋಟಕ್ಕೆ ಮೈತ್ರಿ ನಾಟಕವಾಡಿ ಒಳಗೆ ಜೆಡಿಎಸ್ ಸೋಲಿಸಲು ಸಿದ್ದು ತಂತ್ರ ರೂಪಿಸುತ್ತಿದ್ದಾರೆ ಎಂಬ ಅನುಮಾನಗಳು ಜೆಡಿಎಸ್ ಮುಖಂಡರಿಗೆ ಕಾಡುತ್ತಿದೆ.ಹೀಗಾಗಿಯೇ ಜೆಡಿಎಸ್ ನಾಯಕರು ಕಾಂಗ್ರೆಸ್ ಮುಖಂಡರನ್ನು ಅನುಮಾನದಿಂದ ನೋಡುವುದರ ಜೊತೆಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಗೆಲುವಿಗೆ ವಿಧಾನಸಭಾ ಚುನಾವಣೆಯಲ್ಲಿ ಸೋತ 7 ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲ ಬೇಕು.. ಒಂದು ವೇಳೆ ಈ ನಾಯಕರು ಸುಮಲತಾ ಪರ ನಿಂತ್ರೆ ನಿಖಿಲ್ ಗೆಲುವು ಸಾಧ್ಯವಿಲ್ಲ.. ಇದನ್ನು ಮನಗಂಡಿರೋ ಜೆಡಿಎಸ್ ನಾಯಕರು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.ಕೆ.ಆರ್ ನಗರದಲ್ಲಿ ನಿನ್ನೆ ಸಚಿವ ಸಾರಾ ಮಹೇಶ್ ಚುನಾವಣಾ ಪ್ರಚಾರದ ವೇಳೆ ಗುಡುಗಿದ್ದು,

ಮಂಡ್ಯದಲ್ಲಿ ನೀವು ಕೈ ಕೊಟ್ರೆ ಮೈಸೂರಿನಲ್ಲಿ ಅದು ಪ್ರತಿಧ್ವನಿಸುತ್ತದೆ ಎಂದು ನೇರವಾಗಿ ಸಿದ್ದರಾಮಯ್ಯನವರಿಗೆ ವಾರ್ನಿಂಗ್ ಮಾಡಿದ್ದಾರೆ..ಇಂದು ಮೈಸೂರಿನಲ್ಲಿ ಮತ್ತೆ ಸಾರಾ ಮಹೇಶ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಮಂಡ್ಯದ ಬೆಳವಣಿಗೆ ಮೈಸೂರಿನ ಮೇಲೆ ಪರಿಣಾಮ ಬೀರುತ್ತದೆ. ಮಂಡ್ಯದಲ್ಲಿ ಬೆಂಬಲ ನೀಡಿದರೆ, ಮೈಸೂರಿನಲ್ಲೂ ಬೆಂಬಲ ನೀಡಬೇಕು. ನೀವು ಕೊಟ್ಟಷ್ಟು ಗೌರವವನ್ನು ನಾವು ಕೊಡುತ್ತೇವೆ.ಮೈತ್ರಿಗೆ ದ್ರೋಹ ಮಾಡಿದ್ರೆ ತಂದೆ ತಾಯಿಗೆ ದ್ರೋಹ ಮಾಡಿದಂತೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಸಚಿವ ಸಾರಾ ಮಹೇಶ್ ವಾರ್ನಿಂಗ್ ಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಅನಗತ್ಯವಾಗಿ ಜೆಡಿಎಸ್ ನಾಯಕರು ಗೊಂದಲ ಸೃಷ್ಟಿಸುತ್ತಿದ್ದಾರೆ.. ಮೈಸೂರು ಮತ್ತು ಮಂಡ್ಯದಲ್ಲಿ ಜೆಡಿಎಸ್ ಗಿಂತ ಕಾಂಗ್ರೆಸ್ ಬಲ ಹೆಚ್ಚಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.ಜೆಡಿಎಸ್ ಗೆ ಪಕ್ಷವನ್ನ ಅಡ ಇಟ್ಟಿಲ್ಲ ಎಂದು ಕೈ ನಾಯಕರು ತಿರುಗೇಟು ನೀಡಿದ್ದಾರೆ.. ಇನ್ನೂ ಕಾಲ ಮಿಂಚಿಲ್ಲ ಅಗತ್ಯಬಿದ್ರೆ ಈ ಎರಡು ಕ್ಷೇತ್ರಗಳಲ್ಲಿ ಫ್ರೆಂಡ್ಲಿ ಫೈಟ್ ಮಾಡಲು ಸಿದ್ದ ಎಂಬ ಭಾವನೆ ಹಲವು ಕಾಂಗ್ರೆಸ್ ನಾಯಕರಲ್ಲಿ ಇದೆ…

LEAVE A REPLY

Please enter your comment!
Please enter your name here