Home District ಸಿದ್ದು ಜಾರಕಿಹೊಳಿ ಸಹೋದರರಿಗೆ ತಾಳ್ಮೆ ಪಾಠ..?! ವಿದೇಶದಿಂದಲೇ ಕರೆ ಮಾಡಿ ಕಿವಿಮಾತು ಹೇಳಿದ ಮಾಜಿ CM…

ಸಿದ್ದು ಜಾರಕಿಹೊಳಿ ಸಹೋದರರಿಗೆ ತಾಳ್ಮೆ ಪಾಠ..?! ವಿದೇಶದಿಂದಲೇ ಕರೆ ಮಾಡಿ ಕಿವಿಮಾತು ಹೇಳಿದ ಮಾಜಿ CM…

1042
0
SHARE

ಕರ್ನಾಟಕದಲ್ಲಿ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದೇಶದಿಂದಲೇ ಜಾರಕಿಹೊಳಿ ಸಹೋದರರಿಗೆ ತಾಳ್ಮೆಯ ಪಾಠ ಮಾಡಿದ್ದಾರೆ.

ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರ ಬಳಿ ಖುದ್ದು ಫೋನಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ‘ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ’ ಎಂದಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರಾದ ಜಾರಕಿಹೊಳಿ ಬ್ರದರ್ಸ್ ಗೆ ವಿದೇಶದಿಂದಲೇ ತಾಳ್ಮೆಯ ಪಾಠ ಮಾಡಿರುವ ಸಿದ್ದರಾಮಯ್ಯ, ‘ವಿದೇಶದಿಂದ ಈ ಬಗ್ಗೆ ಮಾತನಾಡುತ್ತೇನೆ…

ಅಲ್ಲಿಯವರೆಗೂ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರವಾಗುವಂಥ ಯಾವುದೇ ನಡೆ ಇಡಬೇಡಿ’ ಎಂದು ಸಲಹೆ ನೀಡಿದ್ದಾರೆ. ತಾವು ವಿದೇಶದಲ್ಲಿ ಇರುವಾಗ ನೀವು ಈ ರೀತಿ ವರ್ತಿಸಿದ್ರೆ ನನ್ನ ಮೇಲೆ ಅಪನಂಬಿಕೆ ಮೂಡುತ್ತದೆ.. ಹೀಗಾಗಿ ಸ್ವಲ್ಪ ಕಾಯಿರಿ.

ನಾನು ಹಿಂತಿರುಗಿದ ಮೇಲೆ ಕೂತು ಸಮಾಲೋಚನೆ ನಡೆಸುವ ಎಂದು ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ ಕಿವಿ ಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ… ಸೆ.16 ರಂದು ವಿದೇಶದಿಂದ ಸಿದ್ದರಾಮಯ್ಯ ವಾಪಸ್ ಆಗಲಿದ್ದು, ಅಷ್ಟರಲ್ಲಿ ರಾಜ್ಯ ರಾಜಕಾರಣದಲ್ಲಿ ಏನೆಲ್ಲ ಬದಲಾವಣೆಯಾಗುತ್ತದೋ, ಕಾದು ನೋಡಬೇಕು!

LEAVE A REPLY

Please enter your comment!
Please enter your name here