Home District “ಸಿದ್ದು ಡಬಲ್ ಗೇಮ್”..!? ಸೈಲೆಂಟಾಗೇ ಸರ್ಕಾರದ ಬುಡಕ್ಕೆ ಕೊಳ್ಳಿ ಹಿಡ್ತಿದ್ದಾರಾ ಸಿದ್ದರಾಮಯ್ಯ.?! ಸಿದ್ದು ಆಪ್ತರೆಲ್ಲ ಒಂದುಗೂಡಿ...

“ಸಿದ್ದು ಡಬಲ್ ಗೇಮ್”..!? ಸೈಲೆಂಟಾಗೇ ಸರ್ಕಾರದ ಬುಡಕ್ಕೆ ಕೊಳ್ಳಿ ಹಿಡ್ತಿದ್ದಾರಾ ಸಿದ್ದರಾಮಯ್ಯ.?! ಸಿದ್ದು ಆಪ್ತರೆಲ್ಲ ಒಂದುಗೂಡಿ ಸರ್ಕಾರಕ್ಕೆ ಕೊಡುತ್ತಿದ್ದಾರೆ ಪತನದ ಪೆಟ್ಟು.!?

1310
0
SHARE

ರಾಜನಾಗಿ ಮೆರೆದ ವ್ಯಕ್ತಿ ಇದ್ದಕ್ಕಿದ್ದಂತೆ ಮೂಲೆಗುಂಪಾದ್ರೆ ಆತನ ಪರಿಸ್ಥಿತಿ ಏನಾಗಿರುತ್ತೆ ಅನ್ನೋದಕ್ಕೆ ಸದ್ಯಕ್ಕೆ ಬೆಸ್ಟ್ ಎಕ್ಸಾಂಪಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.. 5 ವರ್ಷಗಳ ಕಾಲ ಸಿಂಹದಂತೆ ಬಾಳಿದ ಸಿದ್ದು ಇಂದು ಅಕ್ಷರಶಃ ಮೂಲೆಗುಂಪಾಗಿದ್ದಾರೆ, ಆ ಸೇಡನ್ನು ಹೇಗಾದ್ರು ಮಾಡಿ ತೀರಿಸಿಕೊಳ್ಳಬೇಕು ಅನ್ನೋ ಪಣ ತೊಟ್ಟಂತೆ ಕಾಣುತ್ತಿದೆ. ಆ ಕಾರಣಕ್ಕೋ ಏನೋ ತನ್ನ ಬೆಂಬಲಿಗರನ್ನ ಮೈತ್ರಿ ಸರ್ಕಾರದ ಮೇಲೆ ಛೂ ಬಿಟ್ಟಿದ್ದಾರೆ. ಸಧ್ಯ ಪರಿಸ್ಥಿತಿ ನೋಡಿದ್ರೆ ಎಲ್ಲವು ಸಿದ್ದು ಗೆಳೆಯರ ಬಳಗದ ಹಿಡಿತದಲ್ಲಿ ಇದೆ…

ಸಿದ್ದು ತನ್ನ ಬೆರಳ ಇಷಾರೆಯಿಂದ ಒಂದೇ ಒಂದು ಸೂಚನೆ ನೀಡಿದ್ರು ಸಾಕು ಮೈತ್ರಿ ಸರ್ಕಾರದ ಸಾಂಧರ್ಬಿಕ ಶಿಶು ಆರಂಭದಲ್ಲೇ ಅನಾರೋಗ್ಯ ಬಂದು ಮರಣ ಅಪ್ಪಲಿದೆ.ಎಂಬಿ ಪಾಟೀಲ್ ಮೊದಲಿನಿಂದಲೂ ಸಿದ್ದುಗೆ ಪರಮಾಪ್ತ, ಅಲ್ಲದೆ ನಿಷ್ಟಾವಂತ ನಂಬಿಕಸ್ತ, ಲಿಂಗಾಯತ ಪ್ರತ್ಯೇಕ ಹೋರಾಟದಲ್ಲಿ ಮುಂಚೂಣಿ ವಹಿಸಿದ ನಾಯಕ, ಇಲ್ಲಿಯೂ ಸಿದ್ದು ಹೇಳಿದಂತೆ ನಿಷ್ಠೆಯಿಂದಲೇ ತಮ್ಮ ಕಾರ್ಯವನ್ನ ಮಾಡಿದ್ದವರು, ಆದ್ರೆ ಲಿಂಗಾಯತ ಹೋರಾಟ ಯಾವಾಗ ಕಾಂಗ್ರೆಸ್ ಗೆ ಕೈ ಕೊಡ್ತೋ ಅಲ್ಲಿಗೆ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿತ್ತು, ಧರ್ಮದ ಹೊಡೆತಕ್ಕೆ ಸಿಕ್ಕು, ಧರ್ಮವನ್ನ ಹೊಡೆಯಲು ಹೋದವರು ಮತ್ತು ಈ ದುಷ್ಕಾರ್ಯಕ್ಕೆ ಕುಮ್ಮಕ್ಕು ಕೊಟ್ಟವರು ಇಬ್ಬರ ಭವಿಷ್ಯ ಅತಂತ್ರವಾಗಿ ಹೋಯ್ತು…

ಆ ಧರ್ಮ ಕಳಂಕದ ಕಾರಣಕ್ಕೋ ಏನೋ ಮೈತ್ರಿ ಸಂಪುಟದಲ್ಲಿ ಎಂಬಿ ಪಾಟೀಲ್ ಗೆ ಸ್ಥಾನವೇ ಇಲ್ಲದಂತೆ ಆಗಿ ಹೋಯ್ತು. ಅತ್ತ ಸಿದ್ದುಗೂ ಬೆಲೆಯಿಲ್ಲ, ಇತ್ತ ಪಾಟೀಲ್ ಗೂ ನೆಲೆ ಇಲ್ಲ ಈ ಎಲ್ಲವನ್ನು ಅರಿತ ಸಿದ್ದು ಎಂಬಿ ಪಾಟೀಲ್ ರನ್ನು ಸರ್ಕಾರದ ಮೇಲೆ ಛೂ ಬಿಟ್ಟಿದ್ದಾರೆ ಅಂತಾನೇ ಹೇಳಲಾಗುತ್ತಿದೆ.ಸಂಪುಟದಲ್ಲಿ ಉತ್ತರ ಕರ್ನಾಟಕ ಹಾಗೂ ಲಿಂಗಾಯತರ ಕಡೆಗಣನೆ ಎಂದು ದನಿ ಎತ್ತಿ ಉಪಮುಖ್ಯಮಂತ್ರಿ ಸ್ಥಾನ ಪಡೆದುಕೊಳ್ಳುವುದು, ಕೆಪಿಸಿಸಿಗೆ ಸತೀಶ್ ಜಾರಕಿಹೊಳಿಯವರನ್ನು ತರುವುದು ಸಿದ್ದರಾಮಯ್ಯ ಲೆಕ್ಕಾಚಾರ. ಈ ಎರಡು ಅಂಶಗಳನ್ನು ದೊಡ್ಡದು ಮಾಡಿದರೆ ಹೈ ಕಮಾಂಡ್ ಸಹಜವಾಗಿ ಒಪ್ಪುತ್ತದೆ…

ಒಂದು ವೇಳೆ ಸತೀಶ್ ಜಾರಕಿಹೊಳಿಗೆ ಸಂಪುಟದಲ್ಲಿ ಸೇರಿಸಿ ಪ್ರಮುಖ ಖಾತೆ ನೀಡಿ, ಎಂ.ಬಿ.ಪಾಟೀಲ್​ಗೆ ಪಕ್ಷದ ಅಧ್ಯಕ್ಷ ಸ್ಥಾನ ಸಿಕ್ಕರೂ ಸರಿಯೇ ಎಂಬ ಲೆಕ್ಕಾಚಾರ ನಡೆದಿದೆ ಎನ್ನಲಾಗುತ್ತಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆತ್ಮೀಯ ಬಳಗದವರನ್ನು ತರುವ ಮೂಲಕ ಪಕ್ಷ ಹಾಗೂ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಸಿದ್ದರಾಮಯ್ಯ ಬಯಸಿದ್ದಾರೆ ಅನ್ನೋ ಲೆಕ್ಕಾಚಾರಗಳು ಇವೆ.ಎರಡು ಪಕ್ಷಗಳ ನಡುವೆ ಖಾತೆ ಹಂಚಿಕೆ ಹಾಗೂ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆ ನಡೆದಾಗ ಮುಂದಾಗುವ ಬೆಳವಣಿಗೆ ಕುರಿತೂ ಅವಲೋಕನ ಮಾಡಲಾಗಿತ್ತು. ಸಚಿವ ಸ್ಥಾನ ಹಂಚಿಕೆ ನಂತರ ನಡೆಯುವ ಬೆಳವಣಿಗೆಯಲ್ಲಿ ಸಹಜವಾಗಿ ಬಂಡಾಯ ಖಚಿತ..

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮನ ವೊಲಿಕೆ ಕಾರ್ಯ ಮಾಡಬೇಕೆಂಬುದು ಪಕ್ಷದ ಆಶಯವಾಗಿತ್ತು. ಆದರೆ ಸಂಪುಟ ರಚನೆಯಾಗುತ್ತಿದ್ದಂತೆ ಸಿದ್ದರಾಮಯ್ಯ ಬಾದಾಮಿಗೆ ಹಾರಿದ್ದರೆ. ಉದ್ದೇಶಪೂರ್ವಕವಾಗಿಯೇ ಈ ಬೆಳವಣಿಗೆಯಿಂದ ಅವರು ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಸಿದ್ದರಾಮಯ್ಯ ಆಪ್ತರಿಬ್ಬರು ಅಸಮಾಧಾನಿತ ಶಾಸಕರನ್ನು ಒಂದೆಡೆ ಸೇರಿಸಿ ಉರುಳಿಸುತ್ತಿರುವ ದಾಳ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸವಾಲಾಗಿ ಪರಿಣಮಿಸಿರೋದು ಮಾತ್ರ ಸುಳ್ಳಲ್ಲ.ಸಿದ್ದರಾಮಯ್ಯ ಈಗ ರಾಜ ಕಳೆದುಕೊಂಡ ರಾಜ…

ಆದ್ರೆ ತನ್ನ ದ್ವೇಷವನ್ನ ಮಾತ್ರ ಬಿಟ್ಟಿಲ್ಲ. ಆ ಕಾರಣಕ್ಕೆ ತನ್ನ ಬೆಂಬಲಿಗರನ್ನ ಛೂ ಬಿಟ್ಟು ಹೈ ಕಮಾಂಡ್ ಗೆ ತಲೆನೋವು ತರುತ್ತಿದ್ದಾರೆ. ಸಿದ್ದು ದೋಸ್ತಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯರಾಗಿದ್ರೂ ಎರಡು ಪಕ್ಷಗಳ ನಡುವೆ  ಯಾವುದೇ ಸಮನ್ವಯ ಮಾಡುತ್ತಿಲ್ಲ. ತನ್ನ ಆಪ್ತರೇ ದಂಗೆ ಎದ್ದರು ಅವರತ್ತ ಮುಖ ಮಾಡಿಲ್ಲ. ತನಗೆ ಮುಖ್ಯಮಂತ್ರಿ ಸ್ಥಾನವನ್ನ ಕೊಟ್ಟ ಕಾಂಗ್ರೆಸ್ ಪಕ್ಷದ ಸರ್ಕಾರವನ್ನೇ ಮುಗಿಸಲು ಹೊರಟಿದ್ದಾರೆ. ಈ ಮಾತನ್ನ ಈಗ ಹೊಸದಾಗಿ ಯಾರೋ ಹೇಳುತ್ತಿರೋದಲ್ಲ…

ಫಲಿತಾಂಶ ಬಂದ ದಿನವೇ ಮಾಜಿ ಸ್ಪೀಕರ್ ಕೊಳಿವಾಡ ಹೇಳಿದ್ದ ಮಾತು ಇದು..ಜೆಡಿಎಸ್ ನ ಕಥೆ ಇಷ್ಟಾದ್ರೆ ಮತ್ತೊಂದು ಕಡೆ ಡಿಸಿಎಂ ಪಟ್ಟದಲ್ಲಿ ಪರಮೇಶ್ವರ್ ಬಂದು ಕೂತಿದ್ದಾರೆ. ಈಗ ಕಾಂಗ್ರೆಸ್ ನಲ್ಲಿ ಪರಂ ಹೇಳಿದ್ದೇ ವೇದ ವಾಕ್ಯ, ಇದನ್ನು ಕೂಡ ಸಿದ್ದುಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕೆ ಸರ್ಕಾರದ ಬುಡಕ್ಕೆ ಕೈ ಹಾಕಿ ಅಲ್ಲಾಡಿಸುತ್ತಿದ್ದಾರೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎನ್ನುವ ಎರಡು ಹಕ್ಕಿಯನ್ನು ಒಡೆಯಲು ಪ್ಲಾನ್ ಮಾಡಿದ್ದಾರೆ….

 

 

LEAVE A REPLY

Please enter your comment!
Please enter your name here