Home District ಸಿದ್ದು ನೇತೃತ್ವದಲ್ಲಿ ಕಬ್ಬಿಣ ಕಡಲೆಯಂತಾಗಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಅಂತಿಮ.!?

ಸಿದ್ದು ನೇತೃತ್ವದಲ್ಲಿ ಕಬ್ಬಿಣ ಕಡಲೆಯಂತಾಗಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಅಂತಿಮ.!?

2190
0
SHARE

ಬಳ್ಳಾರಿ ಲೋಕಸಭೆ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ನೇತೃತ್ವದಲ್ಲಿ ಬಳ್ಳಾರಿ ಮುಖಂಡರ ಸಭೆ ನಡೆಸಿದ್ರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್…

ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಹಲವು ಬಳ್ಳಾರಿ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ರು, ಈ ವೇಳೆ ಸಭೆಯಲ್ಲಿ ಎಲ್ಲಾ ಶಾಸಕರನ್ನು ನೋಡಿದ ಸಿದ್ದರಾಮಯ್ಯ ಎಲ್ರೂ ಒಗ್ಗಟ್ಟಾಗಿದ್ದೀರಲ್ಲ, ನೋಡ್ರಿ, ಕಲ್ಲು ಬಂಡೆ ತರ ಎಲ್ಲ ಜೊತೆಯಾಗಿದ್ದಾರೆ ಅಂತ ಹೇಳಿದ್ರು,

ಇನ್ನೂ ಸಭೆಯಲ್ಲಿ ಚರ್ಚಿಸಿ ಬಳ್ಳಾರಿ ಕ್ಷೇತ್ರಕ್ಕೆ ಎರಡು ಹೆಸರುಗಳನ್ನು ಫೈನಲ್ ಮಾಡಲಾಗಿದೆ,. ವೆಂಕಟೇಶ್ ಪ್ರಸಾದ್ ಹಾಗೂ ದೇವೇಂದ್ರಪ್ಪ ಹೆಸರು ಅಂತಿಮಗೊಳಿಸಿದ್ದಾರೆ, ಇದರಲ್ಲಿ ವೆಂಕಟೇಶ್ ಪ್ರಸಾದ್‌ ಕಡೆ ಹೆಚ್ಚಿನ ಒಲವು ಇರುವುದರಿಂದ ಅವರೇ ಬಳ್ಳಾರಿ ಅಭ್ಯರ್ಥಿಯಾಗೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಇನ್ನೂ ಸಭೆ ಬಳಿಕ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್ ಅಭ್ಯರ್ಥಿ ಆಯ್ಕೆ ಮಾಡುವ ಬಗ್ಗೆ ಯಾವುದೇ ಗೊಂದಲ ಇಲ್ಲ, ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ರು,.

LEAVE A REPLY

Please enter your comment!
Please enter your name here