Home District ಸಿದ್ದು ಪರ HDK ಬ್ಯಾಟಿಂಗ್..!? ಸಿದ್ದರಾಮಯ್ಯರನ್ನು ಹೊಗಳಿ ಅಟ್ಟಕ್ಕೇರಿಸಿದ ಕುಮಾರಸ್ವಾಮಿ..!!

ಸಿದ್ದು ಪರ HDK ಬ್ಯಾಟಿಂಗ್..!? ಸಿದ್ದರಾಮಯ್ಯರನ್ನು ಹೊಗಳಿ ಅಟ್ಟಕ್ಕೇರಿಸಿದ ಕುಮಾರಸ್ವಾಮಿ..!!

1136
0
SHARE

ಧರ್ಮಸ್ಥಳದಲ್ಲಿಂದ್ದುಕೊಂಡೇ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದ ಸಿದ್ದರಾಮಯ್ಯ ಪರ ಸಿಎಂ ಕುಮಾರಸ್ವಾಮಿ ಬ್ಯಾಟ್ ಬೀಸಿದ್ದಾರೆ. ಸರ್ಕಾರ ಆಯಸ್ಸಿನ ಬಗ್ಗೆ, ಲೋಕಸಭೆ ಚುನಾವಣೆ ಬಳಿಕ ಏನಾಗುತ್ತೆ ನೋಡೋಣ ಅಂದಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನ ಸಿಎಂ ಹೊಗಳಿ ಅಟ್ಟಕ್ಕೇರಿಸಿದ್ದಾರೆ…

ಧರ್ಮಸ್ಥಳದ ಶಾಂತಿವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಐದು ಪೂರೈಸುವುದಿಲ್ಲ ಎಂದು ವಿವಾದ ಸೃಷ್ಟಿಸಿದ್ದ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ಮೌನ ಮುರಿದಿದ್ದಾರೆ. ವಿವಾದಾತ್ಮಕ ಹೇಳಿಕೆ ವಿಡಿಯೋ ಬಿಡುಗಡೆ ಆದ ತಕ್ಷಣ ಯಾವುದೇ ಸ್ಪಷ್ಟೀಕರಣ ನೀಡದ ಸಿದ್ದರಾಮಯ್ಯ ಈಗ ತಮಗೂ ಅದಕ್ಕೂ ಸಂಬಂಧ ಇಲ್ಲ ಅಂತ ಹೇಳೋದ್ರ ಮೂಲಕ ಮಗುವನ್ನೂ ಚಿವುಟಿ ಕೊನೆಗೆ ತೊಟ್ಟಿಲನ್ನೂ ತೂಗಿದ್ದಾರೆ…

ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರದಲ್ಲಿರಬಾರದು ಎಂಬ ಕಾರಣಕ್ಕಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡೀದಿವಿ..ಸರ್ಕಾರ ಸುಭದ್ರವಾಗಿರುತ್ತದೆ..ಅದರಲ್ಲಿ ಯಾವುದೇ ಅನುಮಾನ ಬೇಡ, ಸರ್ಕಾರ ಸ್ಥಿರವಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ…

ಒಂದು ಕಡೆ ಹೈಕಮಾಂಡ್ ನ ಒತ್ತಡ ಇನ್ನೊಂದು ಕಡೆ ಸರ್ಕಾರದಲ್ಲಿರುವ ಪಕ್ಷದವರ ಆಕ್ರೋಶ ತಣಿಸಲು ಸಿದ್ದರಾಮಯ್ಯ ಸದ್ಯಕ್ಕೆ ಸ್ಪಷ್ಟೀಕರಣ ನೀಡಿ ಜಾಣ್ಮೆ ಮೆರೆದಿದ್ದಾರೆ..ಆದ್ರೆ ಅವರ ಮುಂದಿನ ನಡೆ ನಿಗೂಢವಾಗಿದ್ದು ಇನ್ನೂ ಕುತೂಹಲ ಉಳಿಸಿಕೊಂಡಿದ್ದಾರೆ.ಆದರೆ ಈಗ ಸಿ.ಎಂ.ಕುಮಾರಸ್ವಾಮಿ ಮಾಜಿ ಸಿ.ಎಂ.ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ,

ಸರ್ಕಾರ ಮುನ್ನಡೆಸುವಲ್ಲಿ ಅವರು ಸದಾ ನಮ್ಮ ಬೆಂಬಲಕ್ಕಿರುತ್ತಾರೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯವಿಲ್ಲ. ಸ್ನೇಹಿತರೊಂದಿಗೆ ಶಾಂತಿವನದಲ್ಲಿ ಮಾಡಿರುವುದು ರಾಜಕೀಯ ವಿಶ್ಲೇಷಣೆ ಅಂತ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ…

LEAVE A REPLY

Please enter your comment!
Please enter your name here