Home Cinema ಸಿದ್ಲಿಂಗು ನಂತರ ಮತ್ತೆ ಸೋಲೋ ಪಾತ್ರದಲ್ಲಿ ಯೋಗಿ…! ರಿಲೀಸ್ ಆಯ್ತು ಲಂಬೋದರ ಟ್ರೈಲರ್…..!

ಸಿದ್ಲಿಂಗು ನಂತರ ಮತ್ತೆ ಸೋಲೋ ಪಾತ್ರದಲ್ಲಿ ಯೋಗಿ…! ರಿಲೀಸ್ ಆಯ್ತು ಲಂಬೋದರ ಟ್ರೈಲರ್…..!

424
0
SHARE

ಆಂಕರ್: ಸ್ಯಾಂಡಲ್‌ವುಡ್ ನಟರಲ್ಲಿ ಪಡ್ಡೆ ಹೈಕಳಿಗೆ ಸಖತ್ ಇಷ್ಟ ಆಗೋ ವ್ಯಕ್ತಿ ಅಂದ್ರೆ ಅದು ಲೂಸ್ ಮಾದ ಯೋಗಿ. ಸದ್ಯ ಲೂಸ್ ಮಾದ ಯೋಗಿ ಅಂತಾನೇ ಪಾಪ್ಯುಲರ್ ಆಗಿರುವ ಯೋಗಿ ಅಭಿನಯದ ಲಂಬೋದರ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಸಖತ್ ಕಿಕ್ ಕೂಡ ಕೊಟ್ಟಿದೆ.ದುನಿಯಾ ಸಿನಿಮಾದ ಮೂಲಕ ಸ್ಯಾ,ಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿ ಹೆಸರು ಮಾಡಿದವರು.

ಸದ್ಯ ಲಂಬೋದರ ಚಿತ್ರದಲ್ಲಿ ಯೋಗಿ ಅಭಿನಯಿಸಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಕಮಾಲ್ ಮಾಡುತ್ತಿದೆ. ಜೊತೆಗೆ ಪಡ್ಡೆ ಹೈಕಳಿಗೆ ಕಿಕ್ ಕೊಟ್ಟಿದ್ದು, ಸಖತ್ ಕ್ರೇಜ್ ಹುಟ್ಟುಹಾಕಿದೆ. ಟ್ರೈಲರ್ ನೋಡುತ್ತಿದ್ದಾ ಹಾಗೇ ಅಪ್ಪ-ಅಮ್ಮನ ಕೈಲಿ ಬೈಸಿಕೊಳ್ಳುತ್ತಾ, ಸಿಕ್ಕಾಪಟ್ಟೆ ತರ್ಲೆ ಮಾಡುತ್ತಾ ಓಡಾಡಿಕೊಂಡು ಇರ್ತಾನೆ. ಒಂದ್ ಕಡೆ ನೋಡಿದ್ರೆ ಥೇಟ್ ಸಿದ್ಲಿಂಗು ಯೋಗಿ ತರ ಕಾಣ್ತಾನೆ ಈ ಲಂಬೋದರ.ಸದ್ಯ ಲಂಬೋದರ ಟ್ರೈಲರ್ ನೋಡಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟಟೈನ್ಮೆಂಟ್ ಮ್ಯೂವಿ ಆಗಿದ್ದು, ಟೈಲರ್‌ನಲ್ಲಿ ಸಾಕಷ್ಟು ಕಾಮಿಡಿ, ಡ್ಯಾನ್ಸ್ ಎಲ್ಲ ಇದೆ.

ಟ್ರೈಲರ್ ನೋಡಿದ ಅಭಿಮಾನಿಗಳ ಕಡೆಯಿಂದ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಸದ್ಯ ಯೂಟ್ಯೂಬ್‌ ನಲ್ಲಿ ಸೆವೆಂತ್ ಟ್ರೆಂಡಿಂಗ್‌ನಲ್ಲಿರುವ ಈ ಟ್ರೈಲರ್‌ಗೆ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ.ಲಂಬೋದರ ಸಿನಿಮಾ ಮುಂದಿನ ವಾರ ತೆರೆಮೇಲೆ ಬರುತ್ತಿದ್ದು, ವರ್ಷಗಳ ನಂತ್ರ ಮತ್ತೆ ವಿಭಿನ್ನ ಪಾತ್ರದಲ್ಲಿ ಲಂಬೋದರನಾಗಿ ಪ್ರೇಕ್ಷಕರ ಎದುರು ಬರ‍್ತಿದ್ದಾರೆ. ಲಂಬೋದರ ಒಂದು ರೋಮ್ಯಾಂಟಿಕ್ ಮ್ಯೂವಿಯಾಗಿದ್ದು, ಈಗಾಗಲೇ ಚಿತ್ರದ ಮೇಕಿಂಗ್ ನೋಡಿ ಎಲ್ರೂ ಫುಲ್ ಫಿದಾ ಆಗಿದ್ದಾರೆ. ಚಿತ್ರದಲ್ಲಿ ಲಂಬೋದರನಿಗೆ ಜೋಡಿಯಾಗಿ ಆರ್ ಎಕ್ಸ್ ಸೂರಿ ಚಿತ್ರದ ನಾಯಕಿ ಆಕ್ಷಾಂಕ್ಷ ಗಾಂಧಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಬಸವನಗುಡಿ ಅಡಿಬರವಿದ್ದು, ಬಸವನಗುಡಿ ಸುತ್ತಮುತ್ತಲಿನ ಕಥೆ ಚಿತ್ರದಲ್ಲಿ ಇದೆಯಂತೆ.ಇನ್ನು ಚಿತ್ರಕ್ಕೆ ಕೆ.ಕೃಷ್ಣರಾಜ್ ಆಕ್ಷನ್ ಕಟ್ ಹೇಳಿದ್ದು, ವಿಶ್ವೇಶ್ವರ್ ಹಾಗೂ ರಾಘವೇಂದ್ರ ಭಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್‌ನಿಂದಲ್ಲೇ ಗಮನ ಸೆಳೆದಿರುವ ಲಂಬೋದರ ಚಿತ್ರದಲ್ಲಿ ಯೋಗಿ ಬಿಂದಾಸ್ ಪಾತ್ರದಲ್ಲಿ ಗಮನಸೆಳೆದಿದ್ದಾರೆ.

ಒಬ್ಬ ಬಿಂದಾಸ್ ಹುಡುಗನ ಲೈಫ್‌ನಲ್ಲಿ ಹುಡುಗಿಯೊಬ್ಬಳು ಎಂಟ್ರಿ ಕೊಟ್ರೆ ಏನಾಗಬಹುದು ಎಂಬುದೇ ಚಿತ್ರದ ಕಥೆಯಂತೆ.ಬ್ಯಾಕ್ ಟು ಬ್ಯಾಕ್ ಯೋಗಿ ಸಿನಿಮಾಗಳು ಸೋಲಿನಿಂದ ಕಂಗೆಟ್ಟಿದ್ದು, ಸಿದ್ಲಿಂಗು ಸಿನಿಮಾ ನಂತ್ರ ಸಾಕಷ್ಟು ಗ್ಯಾಪ್ ಪಡೆದು ಸೋಲೋ ಹೀರೋ ಆಗಿ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಲಂಬೋದರ ಚಿತ್ರ ಕೈಹಿಡಿಯುತ್ತಾ ಕಾದು ನೋಡಬೇಕು.

LEAVE A REPLY

Please enter your comment!
Please enter your name here