Home District ಸಿಬ್ಬಂದಿಯ ಸಂಬಳಕ್ಕಾಗಿ 1 ಸಾವಿರ ಕೋಟಿ ಸಾಲ ಮಾಡಿದೆ HAL.!? ನಿರ್ಮಲ ಸೀತರಾಮನ್-ರಾಹುಲ್ ಗಾಂಧಿ ಇಬ್ಬರಲ್ಲಿ...

ಸಿಬ್ಬಂದಿಯ ಸಂಬಳಕ್ಕಾಗಿ 1 ಸಾವಿರ ಕೋಟಿ ಸಾಲ ಮಾಡಿದೆ HAL.!? ನಿರ್ಮಲ ಸೀತರಾಮನ್-ರಾಹುಲ್ ಗಾಂಧಿ ಇಬ್ಬರಲ್ಲಿ ಸುಳ್ಳು ಬುರುಕರ್ಯಾರು.!?

547
0
SHARE

ಹಿಂದೂಸ್ತಾನ್ ಏರೋ ನಾಟಿಕ್ ಲಿಮಿಟೆಡ್ ಅರ್ಥಾತ್ ಎಚ್ ಎ ಎಲ್… ಸದ್ಯ ರಾಜಕೀಯ ರಂಗದಲ್ಲಿ ಪ್ರಮುಖ ದಾಳವಾಗಿ ಹೋಗಿದೆ. ಭಾರತ ಹೆಮ್ಮೆಯ ಪ್ರತೀಕ ಅಂತಾನೇ ಕಳೆದ ಏಳು ದಳಕಗಳಿಂದ ಅಚ್ಚೊತ್ತಿದ್ದ ಎಚ್ ಎಎಲ್ ಇಂದು ರಾಜಕೀಯ ತಿಕ್ಕಾಟಕ್ಕೆ ಸಿಕ್ಕು ಅಳುವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ಇಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ. ಯಾರು ನಿಜ ಹೇಳುತ್ತಿದ್ದಾರೆ. ಯಾರು ಸತ್ಯ ಸಂಧರು ಅಂತಾನೇ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಒಂದು ರೀತಿಯ ಪ್ರಶ್ನೆ ಮಾಡುತ್ತಿದ್ರೆ ಬಿಜೆಪಿ ಮತ್ತೊಂದು ರೀತಿಯಲ್ಲಿ ಢಿಪೆನ್ಸ್ ಮಾಡಿಕೊಳ್ಳುತ್ತಿದೆ.

ಒಟ್ಟಾರೆ ಎರಡು ಪಕ್ಷಗಳು ಎಚ್ ಎ ಎಲ್ ವಿಚಾರದಲ್ಲಿ ರಾಜಕೀಯ ಲಾಭಲವನ್ನೇ ಗಳಿಸಲು ನೋಡುತ್ತಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ, ಕಾಂಗ್ರೆಸ್ ಬಿಜೆಪಿ ಜಗಳದಲ್ಲಿ ಹೆಚ್ ಎಎಲ್ ಬರೀ ಬಡವ ಆಗೋದು ಮಾತ್ರವಲ್ಲ ದಿವಾಳಿ ಹಂತಕ್ಕೆ ಬಂತು ಬಿಟ್ಟಿದೆ.ಎಚ್ ಎಎಲ್ ವಿಚಾರದಲ್ಲಿ ಎರಡು ಪಕ್ಷಗಳು ಮಾಡುತ್ತಿರೋ ಕೆಸರೆರಚಾಟ ನೋಡುತ್ತಾ ಇದ್ರೆ, ಇಬ್ಬಲ್ಲಿ ಯಾರು ಸತ್ಯ ಸಂಧರು ಅಂತಾ ತಿರ್ಮಾನಿಸುವುದೇ ಕಷ್ಟವಾಗುತ್ತಿದೆ. ಇಷ್ಟು ದಿನ ರಫೇಲ್ ರಫೇಲ್ ಅಂತಾ ಜಪ ಮಾಡುತ್ತಿದ್ದ ರಾಹುಲ್ ಗಾಂಧಿ ಇನ್ನು ಸ್ವಲ್ಪ ಮುಂದಕ್ಕೆ ಹೋಗಿ ಎಚ್ ಎಎಲ್ ಅನ್ನು ಹಿಡಿದು ಕೊಂಡಿದ್ದಾರೆ. ರಫೇಲ್ ಒಪ್ಪಂದದಲ್ಲಿ ಎಚ್ ಎ ಎಲ್ ಅನ್ನು ಕಡೆಗಣಿಸಲಾಗಿದ್ದು. ಆ ಸಂಸ್ಥೆಯ ಇಂದಿನ ಶೋಚನೀಯ ಸ್ಥಿತಿಗೆ ಬಿಜೆಪಿಯೇ ಕಾರಣ ಅಂತಾ ಹೇಳುತ್ತಿದೆ.

ಆದ್ರೆ ಬಿಜೆಪಿ ಮಾತ್ರ ಯಾವುದೇ ಕಾರಣಕ್ಕೂ ಎಚ್ ಎ ಎಲ್ ಅನ್ನು ಕಡೆಗಣಿಸಿಲ್ಲ ಅದಕ್ಕೆ ಒಂದು ಲಕ್ಷ ಕೋಟಿಯಷ್ಟು ಆರ್ಡರ್ ಕೊಟ್ಟಿದ್ದೇವೆ ಅಂತಾ ಸಮರ್ಥನೆ ಮಾಡಿಕೊಳ್ಳುತ್ತಿದೆ. ಈ ವಾದ ವಿವಾದ , ಪ್ರಶ್ನೆ, ಸಮರ್ಥನೆಗೆ ಇಡೀ ದೇಶದಲ್ಲೇ ಸುಳ್ಳು ಬುರುಕರು ಯಾರು ಅನ್ನೋ ಯಕ್ಷ ಪ್ರಶ್ನೆಯೊಂದು ತಲೆ ಎತ್ತಿ ನಿಂತಿದೆ.ಅಧಿವೇಶನದಲ್ಲಿ ಎಚ್‌ಎಎಲ್ ವಿವಾದ ಬಿಗಿಲೆದ್ದಿತ್ತು. ರಫೇಲ್ ಒಪ್ಪಂದವನ್ನು ಎಚ್‌ಎಎಲ್ ಬದಲಿಗೆ ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿಗೆ ನೀಡಿದ್ದರ ಪರಿಣಾಮ ಇಂದು ಎಚ್‌ಎಎಲ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಕನಿಷ್ಟ ಉದ್ಯೋಗಿಗಳಿಗೆ ಸಂಬಳ ನೀಡಲು ಸಂಸ್ಥೆಯ ಬಳಿ ಹಣವಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.  ಪ್ರತಿಪಕ್ಷಗಳ ಟೀಕೆಗೆ ಸದನದಲ್ಲಿ ಉತ್ತರಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ 2014 ರಿಂದ 2018 ಅವಧಿಯಲ್ಲಿ ಕೇಂದ್ರ ಸರಕಾರ ಎಚ್‌ಎಎಲ್ ಜೊತೆಗೆ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳ ತಯಾರಿಕಾ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು.

1 ಲಕ್ಷ ಕೋಟಿ ರುಪಾಯಿ ಮೌಲ್ಯದ ಆರ್ಡರ್ ಗಳನ್ನು ನೀಡಿರುವುದರ  ಬಗ್ಗೆ ಸಂಸತ್ ಮುಂದೆ ದಾಖಲೆ ಇಡಬೇಕು. ಇಲ್ಲದಿದ್ದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು, ನೀವು ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚುವ ಸಲುವಾಗಿ ಹೆಚ್ಚು ಸುಳ್ಳುಗಳನ್ನು ಹೇಳುತ್ತಾ ಹೋಗಬೇಕಾಗುತ್ತದೆ. ಪ್ರಧಾನಿ ಮೋದಿ ಅವರ ರಫೇಲ್ ಸುಳ್ಳು ಮುಚ್ಚುವ ಪ್ರಯತ್ನದಲ್ಲಿ ರಕ್ಷಣಾ ಸಚಿವೆ ಸಂಸತ್ ಗೆ ಸುಳ್ಳು ಹೇಳಿದ್ದಾರೆ.ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಿಬ್ಬಂದಿಗಳ ಸಂಬಳಕ್ಕಾಗಿ ಸರಕಾರಿ ಸಂಸ್ಥೆ, ಬೆಂಗಳೂರು ಮೂಲದ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌   ಸಾಲ ಪಡೆಯುವ ಹಂತಕ್ಕೆ ಬಂದು ಮುಟ್ಟಿದೆ. ಒಂದು ಕಾಲದಲ್ಲಿ ಶ್ರೀಮಂತ ಸಂಸ್ಥೆಯಾಗಿದ್ದ ಎಚ್‌ಎಎಲ್‌ನಲ್ಲಿ ಅಕ್ಟೋಬರ್‌ನಲ್ಲೇ ನಗದು ಖಾಲಿಯಾಗುವ ಸೂಚನೆ ಸಿಕ್ಕಿತ್ತು. ಎಚ್‌ಎಎಲ್‌ ಬಳಿ ಕೇವಲ ಮೂರು ತಿಂಗಳ ಸಂಬಳ ನೀಡುವಷ್ಟು ಮಾತ್ರ ಹಣವಿದೆ ಎಂದು ವರದಿಯಾಗಿತ್ತು. ಇದೀಗ ಮೂರು ತಿಂಗಳ ನಂತರ ಕೈಯಲ್ಲಿರುವ ನಗದೆಲ್ಲಾ ಬರಿದಾಗಿದ್ದು ಸಂಸ್ಥೆಯ 29,000 ಸಿಬ್ಬಂದಿಗಳ ಸಂಬಳಕ್ಕಾಗಿ ಸಾಲ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಎಚ್‌ಎಎಲ್‌ 1,950 ಕೋಟಿ ರೂಪಾಯಿಗಳ ಸಾಲದ ಹೊರೆ ಹೊತ್ತಿದ್ದು, ಇದರ ಮೇಲೆ ಇದೀಗ ಮತ್ತೆ 1,000 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ವಾಯುಸೇನೆಯಿಂದ ಎಚ್‌ಎಎಲ್‌ಗೆ ಬರಬೇಕಾಗಿರುವ ಹಣ. 2017ರ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಏರ್‌ಫೋರ್ಸ್‌ ಎಚ್‌ಎಎಲ್‌ಗೆ ಯಾವುದೇ ಪಾವತಿಗಳನ್ನು ಮಾಡಿಲ್ಲ. ಅಕ್ಟೋಬರ್‌ ಅಂತ್ಯಕ್ಕೆ ವಾಯುಸೇನೆ ಎಚ್‌ಎಎಲ್‌ಗೆ 10,000 ಕೋಟಿ ರೂಪಾಯಿಗೂ ಹೆಚ್ಚಿನ ಹಣ ನೀಡಬೇಕಾಗಿತ್ತು. ಈ ಪ್ರಮಾಣ ಡಿಸೆಂಬರ್‌ 31ಕ್ಕೆ 15,700 ಕೊಟಿ ರೂಪಾಯಿಗೆ ಏರಿಕೆಯಾಗಿದೆ. ಮಾರ್ಚ್‌ 31ರ ಅಂತ್ಯಕ್ಕೆ ಇದು 20,000 ಕೋಟಿ ರೂಪಾಯಿಗಳನ್ನು ದಾಟಲಿದೆ ಕೇಂದ್ರ ರಕ್ಷಣಾ ಇಲಾಖೆ 2017-18ರಲ್ಲಿ ಎಚ್‌ಎಎಲ್‌ಗೆ 13,700 ಕೋಟಿ ರೂಪಾಯಿಗಳ ಬಜೆಟ್‌ಗೆ ಅನುಮೋದನೆ ನೀಡಿತ್ತು. 2018-19ರಲ್ಲಿ ಹಳೆ ಬಾಕಿಯನ್ನೂ ಸೇರಿಸಿ 33,715 ಕೋಟಿ ರೂಪಾಯಿಗಳ ಬಜೆಟ್‌ಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ 20,287 ಕೋಟಿ ರೂಪಾಯಿಗಳು ಮಾತ್ರ ಸಂಸ್ಥೆಯ ಕೈಗೆ ಬಂದಿವೆ. ಇನ್ನೂ 16,420 ಕೋಟಿ ರೂಪಾಯಿಗಳು ಬಾಕಿ ಇತ್ತು. ಇವತ್ತಿಗೆ 15,700 ಕೋಟಿ ರೂಪಾಯಿಗಳ ಪಾವತಿ ಬಾಕಿ ಇದೆ.

15,700 ಕೋಟಿ ರೂಪಾಯಿ ಬಾಕಿ ಹಣದಲ್ಲಿ 14,500 ಕೋಟಿ ರೂಪಾಯಿ ವಾಯು ಸೇನೆಯಿಂದ ಬರಬೇಕಾಗಿದ್ದರೆ, ಉಳಿದ ಹಣವನ್ನು ಭೂ ಸೇನೆ, ಜಲ ಸೇನೆ ಮತ್ತು ಕೋಸ್ಟ್‌ ಗಾರ್ಡ್‌ನಿಂದ ಬರಬೇಕಿದೆ. ಈ ಹಿಂದೆ ಐಎಎಫ್‌ ಸೆಪ್ಟೆಂಬರ್‌ 2017ರಲ್ಲಿ ಕೊನೆಯ ಬಾರಿಗೆ 2,000 ಕೋಟಿ ರೂಪಾಯಿಗಳನ್ನು ನೀಡಿತ್ತು. ಅಲ್ಲಿಂದ ನಂತರ ಯಾವುದೇ ಹಣ ನೀಡಿಲ್ಲ. ಎಚ್‌ಎಎಲ್‌ನ ಹೆಚ್ಚಿನ ಉದ್ಯಮಗಳು ರಕ್ಷಣಾ ಇಲಾಖೆಯನ್ನು ಅವಲಂಬಿಸಿರುತ್ತವೆ. ರಕ್ಷಣಾ ಇಲಾಖೆ ಸೇನೆಗೆ ಬಜೆಟ್‌ ಮೀಸಲಿಡಬೇಕು. ಅವರುಗಳು ಅಲ್ಲಿಂದ ಹಣ ಪಡೆದುಕೊಂಡು ಅದನ್ನು ಎಚ್‌ಎಎಲ್‌ಗೆ ನೀಡಬೇಕಾಗುತ್ತದೆ. ಆದ್ರೆ ಆ ಯಾವ ಕಾರ್ಯವೂ ನಡೆಯುತ್ತಿಲ್ಲ. ಆ ಕಾರಣಕ್ಕೆ ಎಚ್ ಎಎಲ್ ಇಂದು ಸಾಲದ ಕೂಪಕ್ಕೆ ಬಿದ್ದಿದೆ ಅಂತಾ ಹೇಳಲಾಗುತ್ತಿದೆ.2003-04 ರಿಂದ 2017-18ರವರೆ ಎಚ್‌ಎಎಲ್‌ ಯಾವತ್ತೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣದ ಕೊರತೆ ಅನುಭವಿಸಿದ್ದಿಲ್ಲ. ಈ ಹಿಂದೆ 2003-04ರಲ್ಲಿ ಎಚ್‌ಎಎಲ್‌ ಬಳಿಯಲ್ಲಿ 4,851 ಕೋಟಿ ರೂಪಾಯಿ ಮೊತ್ತವಿತ್ತು.

ಇದೇ ಕನಿಷ್ಠ. ಅದಕ್ಕಿಂತ ಕಡಿಮೆ ಹಣ ಎಂದೂ ಎಚ್‌ಎಎಲ್‌ ಬಳಿ ಇರಲಿಲ್ಲ. ಕಳೆದ ಮಾರ್ಚ್‌, 31ಕ್ಕೆ ಸೇನೆಯಿಂದ ಬರಬೇಕಾದ ಬಾಕಿ ಮೊತ್ತವನ್ನು ಬಿಟ್ಟು ಎಚ್‌ಎಎಲ್‌ ಬಳಿ 6,524 ಕೋಟಿ ರೂಪಾಯಿ ಇತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಈ ಪ್ರಮಾಣ 1,000 ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು. ಇದೀಗ ಖಜಾನೆ ಪೂರ್ತಿ ಬರಿದಾಗಿದ್ದು ಡಿಸೆಂಬರ್‌ ಹೊತ್ತಿಗೆ ಸಂಬಳಕ್ಕೂ ಹಣವಿಲ್ಲದಾಗಿದೆ.ಈ ತಿಂಗಳ ಆರಂಭದಲ್ಲಿ ಎಚ್‌ಎಎಲ್‌ ಸಂಬಳ ಮತ್ತು ಕೆಲವು ವಸ್ತುಗಳ ಖರೀದಿಗಾಗಿ 1,300ರಿಂದ 1400 ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದೆ. ಇದರಲ್ಲಿ ಸಂಬಳಕ್ಕಾಗಿಯೇ 358 ಕೋಟಿ ರೂಪಾಯಿಗಳು ವಿನಿಯೋಗವಾಗಿವೆ. ಹೀಗೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ದೇಶದ ಶ್ರೀಮಂತ, ಹೆಮ್ಮೆಯ ಸಂಸ್ಥೆಯೊಂದು ಸಾಲದ ಮನೆಯ ಬಾಗಿಲಲ್ಲಿ ಬಂದು ನಿಂತಿದೆ.

ರಿಪೇರಿ ಮತ್ತು ಪರಿಕ್ಷಾರ್ಥ ಹಾರಾಟ ಮೊದಲಾದ ಉದ್ಯಮದಿಂದಲೇ ಎಚ್‌ಎಎಲ್‌ ಪ್ರತಿ ವರ್ಷ 6,000 ಕೊಟಿ ರೂಪಾಯಿಗಳ ಆದಾಯ ಗಳಿಸುತ್ತಿದೆ. ಅವುಗಳಲ್ಲಿ ಐಎಎಫ್‌ನ ಪಾಲೇ ದೊಡ್ಡದು. ಒಂದೊಮ್ಮೆ ಎಚ್‌ಎಎಲ್‌ ಕೈಯಲ್ಲಿ ಹಣವಿಲ್ಲದಿದ್ದರೆ ಅದು ಉಳಿದವರ ಮೇಲೆ ಪರಿಣಾಮ ಬೀರುತ್ತದೆ. ಇದೊಂದು ದೊಡ್ಡ ಸಮಸ್ಯೆ. ಎಚ್ ಎಎಲ್ ಮೇಲೆ ಅವಲಂಬಿತರಾದ 2,000 ಕ್ಕೂ ಹೆಚ್ಚು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿವೆ. ಹಣದ ಕೊರತೆಯಿದ್ದರೂ ಇಲ್ಲಿಯವರೆಗೆ ಹೇಗೋ ನೀಡುತ್ತಾ ಬಂದಿದೆ. ಇನ್ನು ಮುಂದೆ ಇವರ ಹಣವನ್ನು ಬಾಕಿ ಉಳಿಸಿಕೊಳ್ಳಬೇಕಾಗುತ್ತದೆ,ಸಧ್ಯ ಎಚ್ ಎ ಎಲ್ ಸಾಲದ ಸುಳಿಯಲ್ಲಿ ಬಿದ್ದಿದೆ. ಅದು ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಅದೇ ಪರಿಸ್ಥಿತಿ, ಬಿಜೆಪಿ ಬಂದಾಗಲು ಅದೇ ಪರಿಸ್ಥಿತಿ. ಸಧ್ಯ ರಫೇಲ್ ಸಮರ್ಥನೆಗೆ ಇಳಿದ ನಿರ್ಮಲ ಸೀತರಾಮನ್ ಒಂದು ಲಕ್ಷ ಕೋಟಿಯಷ್ಟು ಆರ್ಡರ್ ಕೊಟ್ಟಿದ್ದೇವೆ ಅಂತಾ ಸಮರ್ಥಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಆ ಯಾವ ಆರ್ಡರ್ ಕೊಟ್ಟಿಲ್ಲ ಅಂತಾ ಹೇಳುತ್ತಿದ್ದಾರೆ. ಅವರ ತಿಕ್ಕಾಟ ಏನೇ ಇರ್ಲಿ, ಇಬ್ಬರ ನಡುವೆ ಸಿಕ್ಕು ಬಡವಾಗುತ್ತಿರೋದು ಮಾತ್ರ ನಮ್ಮ ಹೆಮ್ಮೆಯ ಪ್ರತೀಕ ಎಚ್ ಎ ಎಲ್…

LEAVE A REPLY

Please enter your comment!
Please enter your name here