Home KARNATAKA ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೊಲೀಸ್ ಪೇದೆ ಮಗಳು ಬಲಿ..! ಕ್ಯಾರೆ ಎನ್ನದ ಪೊಲೀಸ್ ಇಲಾಖೆ ಹಾಗೂ ಕ್ವಾಟ್ರಸ್...

ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೊಲೀಸ್ ಪೇದೆ ಮಗಳು ಬಲಿ..! ಕ್ಯಾರೆ ಎನ್ನದ ಪೊಲೀಸ್ ಇಲಾಖೆ ಹಾಗೂ ಕ್ವಾಟ್ರಸ್ ಸಿಬ್ಬಂದಿ..!

1233
0
SHARE

ನಗರದ ಪೊಲೀಸ್ ಕ್ವಾಟರ್ಸ್ ಅವ್ಯಸ್ಥೆಗೆ ಏನೂ ಅರಿಯದ ಕಂದಮ್ಮವೊಂದು ಸಾವನ್ನಪ್ಪಿದ ಅಮಾನವೀಯ ಘಟನೆ ನಗರದಲ್ಲಿ ಜರುಗಿದೆ, ಮನೆಯಂಗಳದಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗು ಏಕಾಏಕಿ ಬೆಂಕಿ ಕೆನ್ನಾಲಿಗೆಗೆ ಬಿದ್ದು ಕಮರಿ ಹೋಗಿದೆ.

ಇದು ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೊಲೀಸ್ ಕ್ವಾಟ್ರಸ್. ಇಲ್ಲಿ ನಡೆಯಬಾರದ ದುರಂತವೊಂದು ನಡೆದು ಹೋಗಿದೆ. ಮನೆ ಪಕ್ಕದಲ್ಲಿ ಕಸ ಜಾಸ್ತಿ ಇದೆ ಅಂತ ಅದ್ಯಾವನೋ ಕಸಕ್ಕೆ ಬೆಂಕಿ ಹಚ್ಚಿದ್ದ. ಆ ಬೆಂಕಿಗೆ ಮುಗ್ಧ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ನಾಲ್ಕು ವರ್ಷದ ಹರ್ಷಾಲಿ ಮೃತ ಬಾಲಕಿ. ಮನೆಯೊಳಗೆ ಆಟವಾಡುತಿದ್ದ ಮಗು ತಾಯಿ ಕಣ್ಣು ತಪ್ಪಿಸಿ ಹೊರಗೆ ಹೋಗಿತ್ತು. ಆ ವೇಳೆ ಕಸಕ್ಕೆ ಹಾಕಿದ್ದ ಬೆಂಕಿಗೆ ಮಗು ಬಿದ್ದಿತ್ತು.

ತಕ್ಷಣ ಮಗುವನ್ನ ಅಲ್ಲಿದ್ದ ಸಾರ್ವಜನಿಕರು ರಕ್ಷಿಸಿದರೂ ಚಿಕಿತ್ಸೆ ಫಲ ನೀಡದೆ ಕೊನೆಯುಸಿ ರೆಳೆದಿದ್ದಾಳೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯ ಪೇದೆಯಾಗಿರುವ ಲೋಕೇಶಪ್ಪ ಎಂಬುವವರ ಮಗಳೇ ಈ ಹರ್ಷಾಲಿ. ಕಳೆದ ಎರಡು ದಿನದ ಹಿಂದೆ ಮನೆಯ ಪಕ್ಕದಲ್ಲಿ ಒಣಗಿದ ಮರಕ್ಕೆ ಮತ್ತು ಅಲ್ಲಿದ್ದ ಕಸಕ್ಕೆ ಬೆಂಕಿ ಇಟ್ಟಿದ್ದರು.

ಬೆಂಕಿಯ ಪರಿವೇ ಇಲ್ಲದ ಬಾಲಕಿ ಹರ್ಷಾಲಿ ಮತ್ತು ಗೌತಮ್ ಎಂಬ ಬಾಲಕ ಅಲ್ಲೇ ಪಕ್ಕದಲ್ಲೇ ಆಟವಾಡುತ್ತಿದ್ರು.. ಈ ವೇಳೆ ಬಾಲಕ ಗೌತಮ್ ಜೊತೆ ಬಾಲಕಿ ಹರ್ಷಾಲಿ ಜಗಳವಾಡಿದ್ಲು… ಜಗಳ ಆಡ್ತಿದ್ದಂತೆ ಬಾಲಕ ಗೌತಮ್ ಹರ್ಷಾಲಿನ ತಳ್ಳಿದ್ದ ಎನ್ನಲಾಗಿದೆ..ಆ ವೇಳೆ ಅಲ್ಲೇ ಇದ್ದ ಬೆಂಕಿಯ ಕೆನ್ನಾಲಿಗೆ ಹರ್ಷಾಲಿ ಬಿದ್ದಿದ್ದಾಳೆ.

ಇನ್ನು ಬಾಲಕಿ ಹರ್ಷಾಲಿ ಸುಮಾರು 40 ‌ಪರ್ಸೆಂಟ್ ಸುಟ್ಟ ಕಾರಣ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ …ಸದ್ಯ ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..ಸದ್ಯ ಕಸಕ್ಕೆ ಬೆಂಕಿ ಹಾಕಿದವರು ಯಾರೂ ಎಂಬುದರ ಬಗ್ಗೆ ತನಿಖೆ ನಡೆಸಲಾಗ್ತಿದೆ… ಒಟ್ನಲ್ಲಿ ಯಾರ್ದೂ ತಪ್ಪಿಗೆ ಮಗುವೊಂದು ಬಲಿಯಾಗಿರೋದು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here