Home Crime ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದಾರೆ ಖತರ್ನಾಕ್ ಕಳ್ಳಿಯರು..! ಬೆಡ್ ಶೀಟ್ ಹೊದ್ದುಕೊಂಡು ಅಂಗಡಿಗೆ ನುಗ್ಗುತ್ತಾರೆ ಚೋರಿಯರು..!

ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದಾರೆ ಖತರ್ನಾಕ್ ಕಳ್ಳಿಯರು..! ಬೆಡ್ ಶೀಟ್ ಹೊದ್ದುಕೊಂಡು ಅಂಗಡಿಗೆ ನುಗ್ಗುತ್ತಾರೆ ಚೋರಿಯರು..!

398
0
SHARE

ಬೆಳಿಗ್ಗೆ ಆದ್ರೆ ಸಾಕು ಮೈ ಕೈ ನಡುಗುತ್ತೆ, ನಡುಗುವ ಚಳಿಯಲ್ಲಿ ಕೈ ಚಳಕ ತೋರಿಸುವ ದಂಡು ಬೆಡ್ ಶೀಟ್ ಗ್ಯಾಂಗ್ ಒಂದು, ಇಗ ನಗರದಲ್ಲಿ ಕಾಣಿಸಿಕೊಂಡಿದೆ. ಖತರ್ನಾಕ ಲೇಡಿ ಗ್ಯಾಂಗ್ ಹೇಗೆ ಹಾವಳಿ ಇಡ್ತಾ ಇದ್ದಾರೆ.ಈ ಸಿಸಿಟಿವಿ ದೃಶ್ಯಗಳನ್ನ ಒಮ್ಮೆ ಗಮನಿಸಿ ವೀಕ್ಷಕರೆ ಬರೋಬ್ಬರಿ ಆರು ಜನರು ಇರುವ ಗ್ಯಾಂಗ್ ಇದು.

ಒಬ್ಬ ಬಾಲಕ ಬಿಟ್ರೆ ಎಲ್ಲರೂ ಮಹಿಳೆಯರೇ. ಸದ್ಯದ ದಂಡು ಪಾಳ್ಯ ಗ್ಯಾಂಗ್ ಇದು, ನಗರದ ಸೆಂಟರ್ ಪಾಯಿಂಟ್ ಸಿಟಿ ಮಾರ್ಕೆಟ್ ನಲ್ಲಿ ಕೈ ಚಳಕ ತೋರಿಸಿದ್ದಾರೆ, ಹೌದು ಪ್ರತಿಷ್ಠಿತ ಬಟ್ಟೆ ಮಳಿಗೆ ಅಂಗಡಿ ಭೈರಪ್ಪ ಆಂಡ್ ಸನ್ಸ್ ಅಂಗಡಿಯಲ್ಲಿ ನುಗ್ಗಿ , ಹಣ ದೋಚಿ ಪರಾರಿಯಾಗಿದ್ದಾರೆ….
ಇವರ ಹಾವಭಾವ ಒಮ್ಮೆ ನೋಡಿದ್ರೆ ಇವರು ಯಾವ ಪುರಷರಿಗಿಂತ ಕಡಿಮೆ ಇಲ್ಲಾ ಅಂತ ಅನಿಸುತ್ತೆ.

ಸಿಟಿ ಮಾರ್ಕೆಟ್ ಗೆ ಬೆಳಗಿನ ಜಾವ ಎಂಟ್ರಿ ಕೊಟ್ಟ ಈ ಲೇಡಿ ಗ್ಯಾಂಗ್, ಮೈ ಮೇಲೆ ಬೆಡ್ ಶೀಟ್ ಹಾಕೊಂಡು, ಅಂಗಡಿ ಮುಂದೆ ಕುಳಿತು ವಾಚ್ ಮಾಡಿದೆ, ಸಣ್ಣ ಗ್ಯಾಪ್ ನಲ್ಲಿ ಶೇಟರ್ಸ್ ಕೆಳಗೆ ನುಗ್ಗಿದ ಒಬ್ಬಳೇ,ಪಕ್ಕಾ ಪ್ರೊಫೆಷನಲ್ ಆಗಿ ಲಾಕರ್ ಮುರಿದು ಬರೋಬ್ಬರಿ 4 ಲಕ್ಷವನ್ನ ಎಗರಿಸಿ ,ಐದೇ ನಿಮಿಷದಲ್ಲಿ ಮಾರ್ಕೆಟ್ ನಿಂದ ಕಾಲ್ಕಿತ್ತಿದ್ದಾರೆ..

ಸದ್ಯ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಬಲೆ ಬಿಸಲಾಗಿದೆ, ಏನೇ ಆಗಲಿ ಈ ಲೇಡಿ ಗ್ಯಾಂಗ್ ಮಾತ್ರ ತುಂಬಾನೇ ಡೇಂಜರಸ್ ಆಗಿದೆ.

LEAVE A REPLY

Please enter your comment!
Please enter your name here