Home Crime ಸಿಲಿಕಾನ್ ಸಿಟಿಗೆ ಕಾಲಿಟ್ಟಿದೆ ಬೆಡ್ ಶೀಟ್ ಗ್ಯಾಂಗ್..! ಗ್ರಾಹಕರ ಸೋಗಿನಲ್ಲಿ ಅಂಗಡಿಗಳಿಗೆ ಮಾಡ್ತಾರೆ ವಿಸಿಟ್..!

ಸಿಲಿಕಾನ್ ಸಿಟಿಗೆ ಕಾಲಿಟ್ಟಿದೆ ಬೆಡ್ ಶೀಟ್ ಗ್ಯಾಂಗ್..! ಗ್ರಾಹಕರ ಸೋಗಿನಲ್ಲಿ ಅಂಗಡಿಗಳಿಗೆ ಮಾಡ್ತಾರೆ ವಿಸಿಟ್..!

1639
0
SHARE

ಅವ್ರು ಖತರ್ನಾಖ್ ರಾಬರಿಗ್ಯಾಂಗ್, ರಾತ್ರಿ ವೇಳೆ ಸಾರ್ವಜನಿಕರೆಲ್ಲರೂ ಚಿರ ನಿದ್ರೆಗೆ ಜಾರಿದ್ರೆ ಈ ಗ್ಯಾಂಗ್ ಆಕ್ಟೀವ್ ಆಗಿರತ್ತೆ. ಸ್ಕೆಚ್ ಹಾಕಿ ಬೆಡ್ ಶಿಟ್ ತಂದ್ರೆ ಬೆಳಗ್ಗೆ ನೋಡುವಷ್ಟರಲ್ಲಿ ಆ ಶಾಪ್ ಖಾಲಿ ಖಾಲಿ..

ಸಿಲಿಕಾನ್ ಸಿಟಿಯಲ್ಲಿ ಕಷ್ಟಪಟ್ಟು ಬ್ಯಸಿನೆಸ್ ಮಾಡೊ ಮಾಲೀಕರಿಗೆ ಕಂಟಕವಾಗಿದ್ದಾರೆ ಈ ಬೆಡ್ ಶೀಟ್ ಗ್ಯಾಂಗ್.ಈ ಟೈಟಾನ್ ವಾಚ್ ಶಾಪ್ ನೊಮ್ಮೆ ನೋಡಿ. ಲಕ್ಷ ಲಕ್ಷ ಬಂಡವಾಳ ಹೂಡಿ ತುಂಬಿ ತುಳುಕ್ಕತ್ತಿದ್ದ ಈ ವಾಚ್ ಶಾಪ್ ನಿನ್ನೆ ರಾತ್ರಿಯಿಂದ ಹೇಗೆ ಖಾಲಿ ಖಾಲಿ ಹೊಡಿಯುತ್ತಿದೆ ಅಂತಾ.. ಎಲ್ಲಿಂದ ಎಲ್ಲಿಗೆ ನೋಡಿದರೂ ಖಾಲಿ ಡಬ್ಬ ಪೌಚ್ ಗಳೆ ಬಿದ್ದಿದೆ. ಹೀಗೆ ನೊವಿನಿಂದ ನಿಂತಿರುವ ಈಕೆಯ ಹೆಸರು ಪಾವನಿ.

ಈಟೈಟಾನ್ ವಾಚ್ ಮಾಲೀಕಳು. ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಬರೋ ಈ ಟೈ ಟಾನ್ ಶಾಪ್ ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ವಾಚ್ ಗಳಿದ್ವು. ಅದು ಪ್ರತಿಷ್ಟಿತ ಕಂಪನಿಯ ರಾಡಾ, ಟೈಟಾನ್ ಕಂಪನಿಯ ಹೆಸರಿನವು.. ಆದ್ರೆ ಈಗ ಅದೆಲ್ಲಾ ಕಳ್ಳತನವಾಗಿದ್ದು ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಬೆಲೆ ಬಾಳೋ ವಾಚ್ ಗಳಾಗಿವೆ. ಅದು ಈ ಡೆಡ್ಲಿ ರಾಬರಿ ಬೆಡ್ ಶೀಟ್ ಗ್ಯಾಂಗ್ ನಿಂದ.

ಈ ಡೆಡ್ಲಿ ಗ್ಯಾಂಗ್ ಇದೇ ತಿಂಗಳು 1 ನೇ ರಾರಿಖೀನಂದು ಬೆಳಿಗ್ಗೆ ವಾಚ್ ತೆಗೆದು ಕೊಳ್ಳುವ ನೆಪದಲ್ಲಿ ಬಂದು ವಾಚ್ ಮಾಡಿ ಸ್ಕೆಚ್ ಹಾಕಿದ್ರು. ಆಗಲೇ ಪಾವನಿಗೆ ಅನುಮಾನ ಬಂದಿತ್ತು. ಆದ್ರೆ ಪಾವನಿ ಬರಿ ಕಸ್ಟಮರ್ಸ್ ಅಲ್ವಾ ಅಂತಾ ಸುಮ್ಮನಾಗಿದ್ದಾರೆ. ಆದ್ರೆ ಖತರ್ನಾಖ್ ಕಳ್ಳರು ಅದೇ ರಾತ್ರಿ ಕಳ್ಳತನ ಮಾಡಿದ್ದಾರೆ.ಒಂದು ಕಡೆ ಪಾವಿನಯ ಕಥೆಯಾದ್ರೆ ಮತ್ತೊಂದು ಕಡೆ ಮೊಬೈಲ್ ಹಂಟ್ ಶಾಪ್ ನಲ್ಲಿಯೂ ಕೂಡಾ ಇದೇ ರೀತಿ ಕಳ್ಳತನ ಮಾಡಿದ್ದಾರೆ.

ಶಾಪ್ ಶೆಟರ್ ಬೆಂಡ್ ಮಾಡಿ ಒಳನುಗ್ಗಿ ಮೊಬೈಲ್ ಕದ್ದಿದ್ದಾರೆ. ಸೇಮ್ ಗ್ಯಾಂಗ್ ಸೇಮ್ ಬೆಡ್ ಶೀಟ್. ಸೇಮ್ ಸ್ಠೈಲ್ ನಲ್ಲಿ, ಅಷ್ಟಕ್ಕೂ ಇದರ ಮಾಲೀಕ ಹೇಳುವ ಪ್ರಕಾರ 87 ಮೊಬೈಲ್ ಕಳ್ಳತನ ವಾಗಿದ್ದು 10 ರಿಂದ 12 ಲಕ್ಷ ಮೌಲ್ಯದ ಮೊಬೈಲ್ ಗಳು ಕಳ್ಳತನ ಮಾಡಿದ್ದಾರೆ. ಆದ್ರೆ ಈ ಖತರ್ನಾಖ್ ಕಳ್ಳರೂ ಮೊಬೈಲ್ ಬಾಕ್ಸ್ ಸಂಪೂರ್ಣವಾಗಿ ಹರಿದು ಬರೀ ಮೊಬೈಲ್ ಮಾತ್ರ ಕದ್ದಿದ್ದಾರೆ.

ಒಟ್ನಲ್ಲಿ ಈ ಬೆಡ್ ಶೀಟ್ ಗ್ಯಾಂಗ್ ನಿಂದ ಸಾಲ ಸೋಲ ಮಾಡಿ ಹಣಹೂಡುವ ಮಾಲಿಕರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.. ಆದ್ರೆ ದಕ್ಷಿಣ ವಿಭಾಗದಲ್ಲೇ ಹೆಚ್ಚು ಆಕ್ಟೀವ್ ಆಗಿರೋ ಈ ಬೆಡ್ ಶಿಟ್ ಗ್ಯಾಂಗ್ ಗೆ ಅಣ್ಣಾ ಮಲೈ ತಂಡ ಆದಷ್ಟು ಬೇಗ ಎಡೆಮುರಿ ಕಟ್ಟಬೇಕಿದೆ.

LEAVE A REPLY

Please enter your comment!
Please enter your name here