Home KARNATAKA ಸಿಲಿಕಾನ್ ಸಿಟಿ ಯೂತ್ಸ್ ಈಗ ಅಭಿನಂದನ್ ಫಾಲೋವರ್ಸ್..! ರಿಯಲ್ ಹೀರೋ ಹೇರ್‌ ಸ್ಟೈಲ್, ಮೀಸೆ ಬಿಟ್ಟ...

ಸಿಲಿಕಾನ್ ಸಿಟಿ ಯೂತ್ಸ್ ಈಗ ಅಭಿನಂದನ್ ಫಾಲೋವರ್ಸ್..! ರಿಯಲ್ ಹೀರೋ ಹೇರ್‌ ಸ್ಟೈಲ್, ಮೀಸೆ ಬಿಟ್ಟ ಯುವಕರು..!

1714
0
SHARE

ಇಷ್ಟು ದಿನ ಸಿನಿಮಾ ಹೀರೋಗಳನ್ನ ಫಾಲೋ ಮಾಡ್ತಿದ್ದ ನಮ್ಮ ಯುವಕರು, ಇದೀಗ ರಿಯಲ್ ಹೀರೋನ ಅನುಯಾಯಿಗಳಾಗಿದ್ದಾರೆ.. ಅವರದ್ದೇ ಹೇರ್ ಸ್ಟೈಲ್, ಅವರದ್ದೇ ಲುಕ್, ಅವರದ್ದೇ ಮೀಸೆ ಬಿಡೋಕೆ ಶುರವಾಗಿದ್ದಾರೆ..

ಈ ರಿಯಲ್ ಹೀರೋನ ಫಾಲೋ ಮಾಡಲು ಸಿಲಿಕಾನ್ ಸಿಟಿಯ ಯುವಕರು ಕ್ಯೂ ನಿಂತಿದ್ರು.. ಹೌದು.. ಈಗ ಎಲ್ಲಿ ನೋಡಿದ್ರೂ ವಿಂಗ್ ಕಮಾಂಡರ್ ಅಭಿನಂದನ್‌ರದ್ದೇ ಹವಾ.. ಪಾಕಿಸ್ತಾನದ ಯುದ್ಧ ವಿಮಾನವನ್ನ ಹೊಡೆದುರುಳಿಸಿ, ಅವರ ಕಪಿಮುಷ್ಠಿಯಿಂದ ಹೊರ ಬಂದ ರಿಯಲ್ ಹೀರೋ ಅಭಿನಂದ್‌ಗೆ ಈಗ ಎಲ್ಲಿಲ್ಲದ ಫಾಲೋವರ್ಸ್‌ಗಳು ಹುಟ್ಟಿಕೊಂಡಿದ್ದಾರೆ. ಇಷ್ಟು ದಿನ ಹೆಬ್ಬುಲಿ, ವಿಲನ್, ಧೋನಿ ಹೇರ್ ಸ್ಟೈಲ್ ಅಂತ ಸಿನಿಮಾ ನಾಯಕರು, ಖಳನಾಯಕರ ಹೇರ್ ಸ್ಟೇಲ್ ಮಾಡ್ತಿದ್ದ, ನಮ್ಮ ಟ್ರೆಂಡಿ ಯುವಕರು..

ಇದೀಗ ರಿಯಲ್ ಹೀರೋ ಅಭಿನಂದನ್ ವರ್ತಮಾನ್ ಅವರ ಹೇರ್‌ಸ್ಟೈಲ್ ಮಾಡಲು ಶುರುವಾಗಿದ್ದಾರೆ.. ಜೊತೆಯಲ್ಲಿ ಅವರ ಮಾದರಿಯ ಮೀಸೆ ಬಿಡಲು ಮುಂದಾಗಿದ್ದಾರೆ.. ಇಷ್ಟಕ್ಕೆಲ್ಲಾ ಕಾರಣ ಕೋರಮಂಗಲದಲ್ಲಿರೋ ನಾನೇಶ್ ಅನ್ನೋ ಸಲೂನಿಂದ, ಉಚಿತವಾಗಿ ಹೇರ್ ಕಟ್ ಆಯೋಜನೆ ಮಾಡಲಾಗಿತ್ತು..ಫೇಸ್ ಬುಕ್, ಟ್ವೀಟರ್, ಇನ್ಸ್‌ಟಾಗ್ರಾಮ್‌ನೆಲ್ಲೆಡೆ ಅಭಿನಂದನ್ ಫೋಟೋಗಳನ್ನ ಹಾಕಿಕೊಂಡಿರೋ ಫ್ಯಾನ್ಸ್‌ಗಳು..

ಇದೀಗ ಅವರ ಫಾಲೋ ಮಾಡಲು ಆರಂಭಿಸಿದ್ದಾರೆ.. ಅಭಿನಂದನ್ ಮಾದರಿಯ ಹೇರ್ ಸ್ಟೈಲ್ ಹಾಗೂ ಮೀಸೆ ಮಾದರಿಯಲ್ಲಿ, ಉಚಿತವಾಗಿ ಹೇರ್ ಕಟ್ ಮಾಡಲು ನಾನೇಶ್ ಸಲೂನ್ ತಂಡ ಮುಂದಾಗಿದ್ದು.. ಹೇರ್ ಕಟ್ ಮಾಡಿಸಿಕೊಳ್ಳಲು ಯುವಕರು, ಬೆಳಗ್ಗೆಯಿಂದ ಸಂಜೆವರೆಗೂ ಅಂಗಡಿ ಮುಂದೆ ಕ್ಯೂ ನಿಂತಿದ್ರು.. ಬಳಿಕ ಎಲ್ಲರೂ ಒಮ್ಮೆ ಪೋಸ್ ಕೊಟ್ಟು, ಭಾರತಾಂಬೆಗೆ ಜಯ ಘೋಷಣೆ ಹಾಕಿದ್ರು..ಇಡೀ ದಿನ ಉಚಿತ ಹೇರ್ ಕಟ್ ಮಡಾಲಾಗ್ತಿದ್ದು, ಜನರನ್ನ ಆಕರ್ಶಿಸಲು ಬ್ಯಾಂಡ್ ಸೆಟ್ ಅರೇಂಜ್ ಮಾಡಲಾಗಿತ್ತು.. ಸಲೂನ್‌ಗೆ ಹೇರ್ ಕಟ್ ಮಾಡಿಸಿಕೊಳ್ಳಲು ಬಂದವರು, ಸಕತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ರು..

LEAVE A REPLY

Please enter your comment!
Please enter your name here