Home District “ಸಿ.ಎಂ ಬಜೆಟ್‌ನಿಂದ ರೈತರಿಗೆ ಅನ್ಯಾಯವಾಗಿದೆ”… C.M.ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಗಣಿನಾಡಿನ ರೈತರು..?!

“ಸಿ.ಎಂ ಬಜೆಟ್‌ನಿಂದ ರೈತರಿಗೆ ಅನ್ಯಾಯವಾಗಿದೆ”… C.M.ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಗಣಿನಾಡಿನ ರೈತರು..?!

587
0
SHARE

ಸಮಿಶ್ರ ಸರ್ಕಾರದ ಸಾಲ ಮನ್ನಾ ನೀತಿಯನ್ನ ವಿರೋದಿಸಿ ಗಣಿನಾಡಿನ ರೈತರು ಸರ್ಕಾರಕ್ಕೆ ಸೆಡ್ಡು ಹೊಡೆಯಲು ಸಿದ್ದರಾಗಿದ್ದಾರೆ, ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿಯವರು ಮೊನ್ನೆ ಮಂಡಿಸಿದ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಘೋಷಣೆಮಾಡಿದ್ರು, ಆದ್ರೆ ಅವರುಮಾಡಿದ ಸಾಲ ಮನ್ನಾದಿಂದ ಪ್ರಾಮಾಣಿಕ ರೈತನಿಗೆ ಯಾವುದೇ ಅನುಕೂಲ ಇಲ್ಲದಂತಾಗಿದೆ…

ಈ ಸಂಭಂದ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ನೂರಾರು ರೈತರು ಒಟ್ಟಿಗೆ ಸೇರಿ ಸಾಲ ಮನ್ನಾ ನೀತಿಯ ವಿರುದ್ದ ಕೋರ್ಟ ಮೆಟ್ಟಿಲು ಏರಲು ರೆಡಿಯಾಗಿದ್ದಾರೆ, ಹತ್ತು ಹಲುವು ಷರತ್ತುಗಳನ್ನ ವಿದಿಸಿ ಸಾಲ ಮನ್ನಾ ಗೋಷಣೆಮಾಡಲಾಗಿದೆ ಅದರಲ್ಲೂ ಸುಸ್ತಿದಾರ ಸಾಲಗಾರನಿಗೆ ಮಾತ್ರ ಈ ಯೋಜನೆ ಅನ್ವಯವಾಗುವುದು ನಮಗೆ ತುಂಬಾ ನೋವು ತಂದಿದೆ…

ಯಾಕೆಂದ್ರೆ ಈ ಹಿಂದೆ ನಾವು ಬ್ಯಾಂಕ್ ಗಳಲ್ಲಿ ಸಾಲಾಮಾಡಿದ್ರೆ ಮನೆಯಲ್ಲಿ ತಿನ್ನುವುದಕ್ಕೆ ಅನ್ನ ಇಲ್ಲದಿದ್ರು ಸಾಲ ಮರುಪಾವತಿಮಾಡಿ ಋಣ ಮುಕ್ತರಾಗಲು ಪ್ರಯತ್ನಿಸುತ್ತಿದ್ವಿ, ಆದ್ರೆ ಸರ್ಕಾರ ನೀವು ಬ್ಯಾಂಕ್ ಗಳಲ್ಲಿ ಪಡೆದ ಸಾಲವನ್ನ ಮರುಪಾವತಿಮಾಡಬೇಡಿ ಎಂದು ಹೇಳಿಕೊಟ್ಟಂತಿದೆ ಈ ಸಾಲ ಮನ್ನಾ ಎಂದು ತಮ್ಮ ಆಕ್ರೋಶ ವ್ಯೆಕ್ತಪಡಿಸಿದ್ರು…

ಚುನಾವಣೆ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಘೋಶಿಸಿದ್ದ ಯಾವೊಂದು ಯೋಜನೆಗಳು ಅನುಷ್ಟಾನ ಮಾಡದೆ ರಾಜ್ಯದ ಜನ ಸಾಮಾನ್ಯರಿಗೆ ಕುಮಾರ ಸ್ವಾಮಿಯವರು ಅನ್ಯಾಯ ಮಾಡುತ್ತಿದ್ದಾರೆ, ಸಾಲ ಮನ್ನಾ ನೀತಿಯನ್ನ ಇನ್ನೆರಡು ದಿನಗಳಲ್ಲಿ ಬದಲಿಸದಿದ್ರೆ ಮಾನ್ಯ ಮುಖ್ಯ ಮಂತ್ರಿಗಳು ಕೋರ್ಟ ಕಟ ಕಟೆಯಲ್ಲಿ ಬಂದು ನಿಲ್ಲ ಬೇಕಾಗುತ್ತೆ ಎಂದು ಕೂಡ ಎಚ್ಚರಿಸಿದ್ರು…

LEAVE A REPLY

Please enter your comment!
Please enter your name here