Home Crime ಸುಂದರಿಗೆ ಕಂಟಕವಾಗಿದ್ದ ತನ್ನ ಗಂಡ..! ಮುದ್ದಾದ ಚೆಲುವೆಯ ಮುಖಕ್ಕೆ ಪತಿಯಿಂದಲೇ ಆ್ಯಸಿಡ್ ದಾಳಿ..!

ಸುಂದರಿಗೆ ಕಂಟಕವಾಗಿದ್ದ ತನ್ನ ಗಂಡ..! ಮುದ್ದಾದ ಚೆಲುವೆಯ ಮುಖಕ್ಕೆ ಪತಿಯಿಂದಲೇ ಆ್ಯಸಿಡ್ ದಾಳಿ..!

814
0
SHARE

ಆಕೆ ಮುದ್ದು ಮುದ್ದಾದ ಹುಡುಗಿ ಗಂಡನನ್ನ ನಂಬಿ ಕೆಲಸ ಹರಸಿ ಬೆಂಗಳೂರಿಗೆ ಬಂದಿದ್ರು. ಆದ್ರೆ ಆಕೆಯ ಗಂಡನಿಗೆ ಅದೇನಾಯ್ತೋ ಗೊತ್ತಿಲ್ಲ ಇತ್ತಿಚೆಗೆ ಆಕೆಯನ್ನ ಪ್ರತಿ ನಿತ್ಯ ಕಾಡತೊಡಗಿದ್ದ.

ಇದು ತಾರಕಕ್ಕೇರಿದ್ದು ನಿನ್ನೆ ಆ ಮುದ್ದಾದ ಚೆಲುವೆಯ ಮುಖಕ್ಕೆ ಆ್ಯಸಿಡ್ ಹಾಕಿ ಪತಿಯೇ ಕಂಟಕವಾಗಿದ್ದಾನೆ.ಈ ಚಂದುಳ್ಳಿ ಚೆಲುವೆಯ ಹೆಸರು ತಪಸ್ವಿ, ಮೂಲತಃ ಕಲ್ಕತ್ತಾದವಳು. ತಪಸ್ವಿ ಚಿರಂಜೀವಿ ಎಂಬುವವನನ್ನ ಪ್ರೀತಿಸಿ ಮದುವೆಯಾಗಿದ್ದಳು. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈ ದಂಪತಿಗಳು. ನಾಗರಭಾವಿಯಲ್ಲಿ ವಾಸವಾಗಿದ್ರು. ಆದ್ರೆ ತಪಸ್ವಿಯನ್ನ ಈ ಗತಿಗೆ ತಂದಿದ್ದು ಆಕೆಯ ಗಂಡ ಚಿರಂಜೀವಿ. ಈತ ಇತ್ತೀಚೆಗೆ ಕೆಲಸಕ್ಕೆ ಹೋಗದೆ ಮನೆಯಲ್ಲೆ ಇರ್ತಿದ್ದ.. ಇದ್ರಿಂದ ತಪಸ್ವಿ ಬೇರೆಯವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದಳು.

ಕಂಠಪೂರ್ತಿ ಕುಡಿದು ಮನೆಯಲ್ಲಿ ಜಗಳ ಮಾಡಿ ಹೆಂಡತಿ ಮೇಲೆ ಹಲ್ಲೆ ಮಾಡಿದ್ದ. ನಿನ್ನೆ 10 ಸಾವಿರ ಹಣ ಕೊಡು ಅಂತಾ ಚಿರಂಜೀವಿ ತಪಸ್ವಿಯನ್ನ ಕೇಳಿದ್ದಾನೆ. ಆಕೆ ನನ್ನ ಬಳಿ ಇಲ್ಲ ಅಂತಾ ಹೇಳಿದ್ದಳು ಇದ್ರಿಂದ ಕೋಪಗೊಂಡ ಪಾಪಿ ಪತಿ ಆಕೆಯ ಮುಖಕ್ಕೆ ಆ್ಯಸಿಡ್ ಹಾಕಿಬಿಟ್ಟಿದ್ದಾನೆ.ಯಾವಾಗ ಚಿರಂಜೀವಿ ತಪಸ್ವಿ ಮೇಲೆ ಆ್ಯಸಿಡ್ ಹಾಕುತ್ತಿದ್ದಂತೆ ಮೈಯೆಲ್ಲಾ ಸುಟ್ಟುಹೋಗಿದೆ. ಈ ನೋವಿನಿಂದ ಆಕೆ ಚೀರಾಡ ತೋಡಗಿದ್ದಾಳೆ. ಕೂಡಲೇ ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ಬರುತ್ತಿದ್ದಂತೆ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ..

ಸ್ಥಳೀಯರು ಮತ್ತು ತಪಸ್ವಿಯ ಸ್ನೇಹಿತರು ಆ್ಯಸಿಡ್ ನಿಂದ ಬೆಂದಿದ್ದ ತಪಸ್ವಿಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾರೆ, ನಂತರ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ವಿವರಿಸಿ ದೂರು ನೀಡಿದ್ದಾರೆ.ಪಾಪಿ ಪತಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೆಶ್ವರಿ ನಗರ ಪೊಲೀಸರು ಆರೋಪಿಗೆ ಬಲೆ ಬಿಸಿದ್ದಾರೆ. ಆದ್ರೆ ಆ ದುಷ್ಟ ಗಂಡ ತನ್ನ ಅರ್ಧಾಂಗಿಯ ಮೇಲೆ ಆ್ಯಸಿಡ್ ಹಾಕುವಂತಹ ಕಠೋರ ಕಲ್ಲುಹೃದಯದ ಕ್ರೂರಿಯಾಗಿದಂತು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here