Home Cinema ಸುದೀಪ್-ದರ್ಶನ್ ನಡುವೆ “ಮದಕರಿ ನಾಯಕ” ಕಾಳಗ..?! ಬಿಗ್ ಫೈಟ್‌ಗೆ ಮುನ್ನುಡಿ | ಯಾರಾಗ್ತಾರೆ 1st ಮದಕರಿ...

ಸುದೀಪ್-ದರ್ಶನ್ ನಡುವೆ “ಮದಕರಿ ನಾಯಕ” ಕಾಳಗ..?! ಬಿಗ್ ಫೈಟ್‌ಗೆ ಮುನ್ನುಡಿ | ಯಾರಾಗ್ತಾರೆ 1st ಮದಕರಿ ನಾಯಕ.?

504
0
SHARE

ಮದಕರಿನಾಯಕ. ಕರ್ನಾಟಕದ ವೀರಪುತ್ರ.. ಇದೇ ವೀರಪುತ್ರನಿಗಾಗಿ ಇದೀಗ ಕನ್ನಡ ಚಿತ್ರರಂಗದ ಎರಡು ಆರಡಿ ಕಟೌಟ್ ಸ್ಟಾರ‍್ಸ್, ರಣಕಹಳೆ ಊದಿದ್ದಾರೆ. ಮದಕರಿನಾಯಕ ನಾನೇ ಅನ್ನುತ್ತಿದ್ದಾರೆ
ಯಸ್, ನಿನ್ನೆ ಪ್ರಜಾಟಿವಿಯಲ್ಲಿ ಮದಕರಿ ನಾಯಕ ಸಿನಿಮಾವನ್ನ, ಅಭಿನಯ ಚಕ್ರವರ್ತಿ ಸುದೀಪ ಮಾಡಲು ಸಿದ್ಧರಾಗಿದ್ದಾರೆ.. ಅದು ನಾಲ್ಕು ಭಾಷೆಯಲ್ಲಿ, ಭರ್ತಿ ನೂರು ಕೋಟಿ ವೆಚ್ಚದಲ್ಲಿ ಅನ್ನುವ ಸುದ್ದಿ ಪ್ರಸಾರವಾಗಿತ್ತು.

ಸುದ್ದಿ.. ಪ್ರಸಾರವಾಗ್ತಿದ್ದಂತೆ, ಇದೀಗ ಕೆಚ್ಚದೆಯ ಕಿಚ್ಚ ತಾವು ಕಂಡ ಮದಕರಿ ನಾಯಕನ ಕನಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯದ ರೂಪದಲ್ಲಿ ಹಂಚಿಕೊಂಡಿದ್ದಾರೆ.ಹೌದು, ಕನ್ನಡ ಚಿತ್ರರಂಗದ ಮಾಣಿಕ್ಯ, ಮದಕರಿನಾಯಕನಾಗುತ್ತಿರುವ ವಿಚಾರವನ್ನ ಒಪ್ಪಿಕೊಂಡಿದ್ದಾರೆ. ಮದಕರಿನಾಯಕ.. ಒಬ್ಬರೇ ಮಾಡಬೇಕಂತೇನಿಲ್ಲ. ನಾನೂ ಮಾಡುವದ್ರಲ್ಲೂ ತಪ್ಪಿಲ್ಲ ಅಲ್ವಾ ಅಂದಿದ್ದಾರೆ.

ವೀರ ಮದಕರಿ ನಾಯಕನ ಸಿನಿಮಾ ನಿರ್ಮಾಣದ ಕುರಿತಂತೆ ನನ್ನ ಕೆಲವು ಅಭಿಪ್ರಾಯಗಳು.ನಾನು ನನ್ನ ತಂಡ ಹಾಗೂ ಕೆಲವು ಲೇಖಕರ ಬಳಗವು ಈಗ್ಗೆ ಒಂದು-ಒಂದೂವರೆ ವರ್ಷದಿಂದ ವೀರ ಮದಕರಿ ನಾಯಕ ಸಿನಿಮಾ ನಿರ್ಮಾಣದ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈಗಾಗ್ಲೇ ಒಂದಷ್ಟು ಸಂಶೋಧನೆ ಮತ್ತಯ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.ವೀರ ಮದಕರಿ ಸಿನಿಮಾ ಮಾಡುವ ನಮ್ಮ ಆಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದಂತಹದು. ಆದರೆ, ಈ ದಿಸೆಯಲ್ಲಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು..

ಹೀಗಾಗಿ ಈ ಸಿನಿಮಾ ನಿರ್ದೇಶನ ಕೂಡಾ ಮಾಡುವ ಸ್ಫೂರ್ತಿ ಚಿಗುರೊಡೆದಿತ್ತು.ಇತ್ತೀಚಿಗೆ ಇದೇ ಕಥೆಯ ಆಧಾರಿತ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತ್ತು. ಸಹಜವಾಗಿಯೇ ನನಗೆ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟು ಹಾಕಿತ್ತು. ಯಾರೇ ಆಗಲಿ, ಇತಿಹಾಸದ ವಿಷಯಗಳ ಮೇಲೆ ಸಿನಿಮಾ ನಿರ್ಮಿಸಲು ಅರ್ಹರಿದ್ದಾರೆ. ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆಕಂಡ ಉದಾಹರಣೆಗಳಿವೆ.

ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ..? ಅವರು ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನಿಮಾ ಯಾರಾದರೂ ಮಾಡಬಹುದು.
ರಾಕ್‌ಲೈನ್ ವೆಂಕಟೇಶ್ ಅವರ ಸಿನಿಮಾ ಆಸಕ್ತಿ ಅದ್ವೀತಿಯವಾದದ್ದು. ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ರಾಜೇಂದ್ರ ಸಿಂಗ್ ಬಾಬು ಅವರ ಅನುಭವ ಕೂಡಾ ಇದರಲ್ಲಿ ಸಮ್ಮಿಲನವಾಗಿದೆ.

ಆದರೆ ನಾನು ಮತ್ತು ನನ್ನ ತಂಡವು ಮಾಡ ಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡಾ ಹೌದು. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಚಿಸುವುದಿಲ್ಲ. ಇದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ…!ರಾಕ್ ಲೈನ್ ಅವರ ತಂಡವನ್ನು ನಾನು ಇಂತಹ ಒಳ್ಳೆಯ ಕರ್ನಾಟಕದ ನೆಲದ ಕಥೆಯನ್ನ ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ.

ಅವರಿಗೆ ನನ್ನ ಶುಭಾಶಯಗಳು. ಅದೇ ರೀತಿಯಾಗಿ ನನ್ನ ನಿರ್ಣಯವನ್ನು ನೀವೆಲ್ಲರೂ ಸಮ್ಮತಿಸುತ್ತೀರೆಂದು ನಂಬಿರುವೆ.ಇದು ಸುದೀಪ ವ್ಯಕ್ತಪಡಿಸಿದ ಅಭಿಪ್ರಾಯ. ಖುದ್ದು ಸುದೀಪ ಹೇಳಿದಂತೆ ಇದು ಮಾಡಿ ಮಡಿಯುವ ಪ್ರಯತ್ನ. ಹಾಗಂತ, ಬೇರೆಯವರು ಮಾಡಬಾರದು ಅಂತೇನಿಲ್ಲ ಅಂದಿರುವ ಅಭಿನಯ ಚಕ್ರವರ್ತಿ, ಅಪ್ಪಿ ತಪ್ಪಿಯೂ ತಮ್ಮ ಪತ್ರದಲ್ಲಿ ತಮ್ಮ ಹಳೆಯ ಕುಚಿಕೂ ದರ್ಶನ್ ಹೆಸರನ್ನೂ ಎಲ್ಲೂ ನಮೂದಿಸಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ.

ಇನ್ನೂ ಸುದೀಪ ಸಿಡಿಸಿದ ಮದಕರಿ ನಾಯಕ ಬಾಂಬ್ ಬಗ್ಗೆ ಪ್ರಜಾಟಿವಿಗೆ ರಿಯ್ಯಾಕ್ಟ್ ಮಾಡಿದ, ರಾಕ್ ಲೈನ್ ವೆಂಕಟೇಶ್ ಇದು ನಾಲ್ಕು ವರ್ಷದ ಹಿಂದೆ ನಾನು ಕಂಡ ಕನಸು ಅಂದಿದ್ದಾರೆ.ಇದು, ರಾಕ್ ಲೈನ್ ವೆಂಕಟೇಶ್ ಮಾತು. ಖುದ್ದು ರಾಕ್ ಲೈನ್ ವೆಂಕಟೇಶ್ ಹೇಳುವಂತೆ ಸ್ನೇಹಿತರಾಗಿಯೂ ಇಬ್ಬರು ಮದಕರಿನಾಯಕ ಜೀವನಕಥೆಗೆ ಸಿನಿರೂಪ ಕೊಡುವ ವಿಚಾರ, ಹಿಂದೆ ಚರ್ಚೆನೇ ಮಾಡಿಲ್ಲ. ಹಾಗಂತ, ಅಭಿನಯ ಚಕ್ರವರ್ತಿ ಕಂಡ ಕನಸಿನಲ್ಲೂ ಯಾವ ತಪ್ಪಿಲ್ಲ.

ಅವರು ಮಾಡಲು ಹೊರಟಿರುವ ರಾಜಾ ಮದಕರಿ ನಾಯಕ ಸಿನಿಮಾಗೂ ಒಳ್ಳೇಯದಾಗಲಿ ಅನ್ನುತ್ತಾರೆ ರಾಕ್ ಲೈನ್ ವೆಂಕಟೇಶ್.ಅದೇನೆ ಇರ‍್ಲಿ, ಸದ್ಯ ಒಂದೇ ಕಥೆ ಎರಡು ಸಿನಿಮಾಗಳು.. ಹಾಗೂ ಬೇರೆ ಬೇರೆ ರೂಪದಲ್ಲಿ ಎರಡು ದಿಗಜ್ಜರನ್ನ ನೋಡುವ ಅವಕಾಶ, ಕನ್ನಡ ಕಲಾಭಿಮಾನಿಗಳಿಗೆ ಸಿಗಲಿದೆ. ದರ್ಶನ್ ಅವರ ಗಂಡುಗಲಿ ಮದಕರಿನಾಯಕ ಸಿನಿಮಾ ಇದೇ ಜನವರಿಯೊತ್ತಿಗೆ ಸೆಟ್ಟೇರಲಿದೆ. ಸುದೀಪ ಅವರ ರಾಜಾ ಮದಕರಿ ನಾಯಕ.. ಸೆಟ್ಟೇರೋದ್ಯಾವಾಗ, ಉತ್ತರ.. ಖುದ್ದು ಮಾಣಿಕ್ಯನೇ ನೀಡಬೇಕು…

LEAVE A REPLY

Please enter your comment!
Please enter your name here