Home Cinema ಸುದೀಪ್ ಬಣದ ಕಣ್ಣುರಿಗೆ ಪೈಲ್ವಾನ್ ನಿರ್ಮಾಪಕಿ ಕಾರಣವಾಗಿದ್ಹೇಗೆ ಈಗ..? ನಿಖಿಲ್ ಕುಮಾರಸ್ವಾಮಿ ಹಾಗೂ ಯಶ್‌ಗೆ ಥ್ಯಾಂಕ್ಸ್...

ಸುದೀಪ್ ಬಣದ ಕಣ್ಣುರಿಗೆ ಪೈಲ್ವಾನ್ ನಿರ್ಮಾಪಕಿ ಕಾರಣವಾಗಿದ್ಹೇಗೆ ಈಗ..? ನಿಖಿಲ್ ಕುಮಾರಸ್ವಾಮಿ ಹಾಗೂ ಯಶ್‌ಗೆ ಥ್ಯಾಂಕ್ಸ್ ಹೇಳಿದ್ದಕ್ಕಾ..!?

3333
0
SHARE

ತೆರೆಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹೆಸರು ಬಂದ್ರೆ ಸಾಕು. ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಸೃಷ್ಟಿಯಾಗಿಬಿಡುತ್ತೆ. ಅಂತ ಸ್ಟಾರ್‌ಡಮ್‌ನ ರುಚಿ ನೋಡಿದವರು ಈ ಮಾಣಿಕ್ಯ. ಪೈಲ್ವಾನ್ ಸಿನಿಮಾ ಯಶಸ್ವಿಯಾಗಿ ೫೦ ದಿನಗಳನ್ನ ಪೂರೈಸಿ ತನ್ನ ನಾಗಾಲೋಟವನ್ನ ಮುಂದುವರೆಸಿದೆ. ಎಲ್ಲವೂ ಸರಿಹೋಯ್ತಲ್ಲ ಎನ್ನುವ ಈ ಟೈಮ್‌ನಲ್ಲೇ ಮತ್ತೆ ಕಿಚ್ಚನ ಬಳಗದಲ್ಲಿ ಅಸಮಾಧಾನದ ಹೊಗೆ ಕ್ರಿಯೆಟ್ ಆಗಿದೆ. ಇದು ಅಂತಿಂಥ ಹೊಗೆಯಲ್ಲ ಸ್ವಾಮಿ. ಸುದೀಪ್ ಸಿನಿಮಾಗಳನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ ಕರೆಂಟ್ ಶಾಕ್ ಕೊಡುವ ಕಥೆಯಿದು. ಸುದೀಪ್ ಹೆಸರಿನಲ್ಲೇ ನಡೆಯುತ್ತಿರುವ ಆನೋಖಾ ಖೇಲ್ ಇದು.

ಪೈಲ್ವಾನ್ ಸಿನಿಮಾ ೫೦ ಡೇಸ್ ಕಂಪ್ಲೀಟ್ ಆಗಿ ಗಲ್ಲಾಪೆಟ್ಟಿಗೆ ದೋಚಿದ್ದೇ ತಡ, ಅದಕ್ಕೆ ಕಾರಣರಾದವರಿಗೆಲ್ಲ ನಿರ್ಮಾಪಕಿ ಸ್ವಪ್ನ ಕೃಷ್ಣ ಟ್ವಿಟರ್‌ನಲ್ಲಿ ಥ್ಯಾಂಕ್ಸ್ ಹೇಳಿದ್ರು. ಇಲ್ಲೇ ನೋಡಿ ಆಗಿದ್ದು ಎಡವಟ್ಟು, ಧನ್ಯವಾದಗಳನ್ನ ತಿಳಿಸೋ ಸ್ವೀಡ್‌ನಲ್ಲಿ ಸ್ವಪ್ನ ಕೃಷ್ಣ ಕಷ್ಟಕಾಲದಲ್ಲಿ ಆರ್ಥಿಕವಾಗಿ ತಮಗೆ ಸರ್ಪೋಟ್ ಕೊಟ್ಟ ನಿಖಿಲ್ ಕುಮಾರಸ್ವಾಮಿ ಹಾಗೂ ರಾಕಿಂಗ್ ಸ್ಟಾರ್ ಯಶ್‌ಗೂ ಥ್ಯಾಂಕ್ಸ್ ಹೇಳಿದ್ದಾರೆ. ಇದರಿಂದ ಸಿಕ್ಕಪಟ್ಟೆ ಕೆಂಡಮಂಡಲವಾಗಿರೋ ಕಿಚ್ಚನ ಅಭಿಮಾನಿ ವೃಂದ ಸ್ವಪ್ನ ಕೃಷ್ಣಗೆ ಓಪನ್ ಲೆಟರ್ ಬರೆದಿದ್ದಾರೆ.ಸಿನಿಮಾ ಸೆಟ್ಟೆರಿದಾಗಿದಂಲೂ ಕಿಚ್ಚ ಸುದೀಪ್ ಅಭಿಮಾನಿಗಳನ್ನ ನೀವು ನಿರಾಸೆಗೊಳಿಸುತ್ತಲೇ ಬಂದಿದ್ದೀರಾ, ಪ್ರಸ್ತುತ ಬೆಳವಣಿಗೆಗಳನ್ನ ನಾವು ಗಮನಿಸುತ್ತಲೇ ಬಂದ್ದಿದ್ದೇವೆ. ನಾವು ಸುದಿಪ್ಪಣ್ಣನ್ನ ಸಿನಿಮಾ ಅಲ್ವಾ ಎಲ್ಲವನ್ನೂ ಸಹಿಸಿಕೊಂಡೇ ಬಂದ್ವಿ.ಆದರೆ ನೀವು ಯಾರಿಗೋ ವೈಯಕ್ತಿಕವಾಗಿ ಧನ್ಯವಾದಗಳನ್ನ ತಿಳಿಸಿದ್ದೀರಿ .ಇದೇ ನಮಗೆ ಬೇಸರವನ್ನುಂಟು ಮಾಡಿದೆ. ಪೈಲ್ವಾನ್ ಸಿನಿಮಾ ಯಶಸ್ವಿಯಾಗೋಕೆ ಸುದೀಪ್ ಅಭಿಮಾನಿಗಳೇ ಕಾರಣ ಎನ್ನುವುದನ್ನ ಮರಿಬೇಡಿ ಮೆಡಂ ಅಂತ ಎಚ್ಚರಿಸಿದ್ದಾರೆ ಕಿಚ್ಚನ ಅಭಿಮಾನಿ ಬಳಗ.

ಸುದೀಪ್ ಫ್ಯಾನ್ಸ್‌ಗೆ ಬೇಸರವಾಗಿರೋದು ಸ್ವಪ್ನ ಕೃಷ್ಣ ನಿಖಿಲ್ ಹಾಗೂ ಯಶ್‌ಗೆ ಥ್ಯಾಂಕ್ಸ್ ಹೇಳಿದಕ್ಕೆ ಆಲ್ಲವಂತೆ. ಬದಲಾಗಿ ಈ ಧನ್ಯವಾದಗಳನ್ನ ಟ್ವಿಟರ್‌ನಲ್ಲಿ ಸಾರ್ವಜನಿಕವಾಗಿ ಹೇಳೊ ಅಗತ್ಯವೇನಿತ್ತು. ವೈಯಕ್ತಿಕವಾಗಿ ಅವರಿಗೆ ಯಾವ ಗೌರವ ಸಲ್ಲಬೇಕೊ ಅದನ್ನ ಸಲ್ಲಿಸಿದ್ರೆ ಇಷ್ಟೆಲ್ಲಾ ಆಗ್ತಾನೆ ಇರಲಿಲ್ಲ ಅಂತ ಸಿಡಿಮಿಡಿಗೊಂಡಿದ್ದಾರೆ. ಅಲ್ಲದೇ ಪ್ರತಿ ಸಿನಿಮಾಕೂಡ ೫೦ ದಿನ ಕಂಪ್ಲೀಟ್ ಮಾಡಿದ್ರೆ ಸಕ್ಸಸ್ ಮೀಟ್ ಮಾಡ್ತಾರೆ. ಆದರೆ ನಮ್ಮ ಕಿಚ್ಚನ ವಿಷಯದಲ್ಲಿ ಈ ಜಾಣಮರೆವು ಯಾಕೆ..?ಇಲ್ಲಿ ನಮ್ಮ ಕಿಚ್ಚನಿಗೆ ಅವಮಾನವಾಗ್ತಿದೆ. ಇನ್ನೊಮ್ಮೆ ನಿಮ್ಮ ಜೊತೆ ಸುದೀಪಣ್ಣ ಸಿನಿಮಾ ಮಾಡದೇ ಹೋದ್ರೆನೇ ಒಳ್ಳೆದು ಅಂತ ಫುಲ್ ರೈಸ್ ಆಗಿದ್ದಾರೆ ಈ ಸುದೀಪ್ ಫ್ಯಾನ್ಸ್.ಪೈಲ್ವಾನ್ ಚಿತ್ರ ೫೦ ದಿನ ಪೂರೈಸಿರೋದೆನೊ ನಿಜಕ್ಕೂ ಖುಷಿಯ ವಿಚಾರವೇ .ಆದರೆ ಈ ಬೆನ್ನಲ್ಲೇ ಸ್ವಪ್ನ ಕೃಷ್ಣರ ಈ ಟ್ವೀಟ್ ಕಿಚ್ಚನ ಅಭಿಮಾನಿ ಬಳಗದಲ್ಲಿ ಭಾರೀ ಕೋಲಾಹಲ ಮೂಡಿಸಿಬಿಟ್ಟಿದೆ. ಸಿನಿಮಾ ೫೦ ದಿನ ಪೂರೈಸಿದ್ರೂ ಆ ಸಂಭ್ರಮವನ್ನ ಸುದೀಪ್ ಫ್ಯಾನ್ಸ್ ಅನುಭವಿಸುತ್ತಿಲ್ಲ.

ಟ್ವಿಟರ್‌ನಲ್ಲೂ ತಮ್ಮ ಕೋಪವನ್ನ ಆಚೆ ಹಾಕಿರೋ ಅಭಿಮಾನಿಗಳು ಇನ್ನೊಮ್ಮೆ ಪೈಲ್ವಾನ್-೨ ಸಿನಿಮಾ ಅನ್ಕೊಂಡು ಬನ್ನಿ, ಆಗ ಇದೆ ಮಾರಿಹಬ್ಬ ಅಂತ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಸ್ವಪ್ನ ಕೃಷ್ಣ ಯಶ್ ಹಾಗೂ ನಿಖಿಲ್‌ಗೆ ಥ್ಯಾಂಕ್ಸ್ ಹೇಳಿದ್ದೇ ಕಿಚ್ಚನ ಅಭಿಮಾನಿಗಳನ್ನ ಈ ಪಾಟಿ ಕೆರಳಿಸಿಬಿಟ್ಟಿದೆ.ಪೈಲ್ವಾನ್ ಸಡಗರಕ್ಕೆ ಈ ಮೂಲಕ ಒಂದು ಕಪ್ಪು ಚುಕ್ಕೆ ಹುಟ್ಟಿಕೊಂಡಿದೆ. ಆದರೆ ಆಶ್ಚರ್ಯವೆನೆಂದ್ರೆ, ಇಷ್ಟೆಲ್ಲಾ ಟ್ವಟಿರ್ ವಾರ್ ನಡಿತಿದ್ರೂ ಸ್ವತಃ ಕಿಚ್ಚ ಸುದೀಪ್ ಈ ವಿಚಾರವಾಗಿ ಯಾವ ರಿಯಾಕ್ಷನ್ ಕೂಡ ಕೊಟ್ಟಿಲ್ಲ. ಇಂತಹ ಬೆಳವಣಿಗೆಗಳು ಕಿಚ್ಚನ ಮನಸ್ಸನ್ನು ಘಾಸಿಗೊಳಿಸಿರಬಹುದೇನೊ ಎನ್ನುವುದು ಗಾಂಧಿನಗರದ ಗುಲ್ಲು.

LEAVE A REPLY

Please enter your comment!
Please enter your name here