Home Cinema ‘ಸುದೀಪ’ ಇನ್ಮುಂದೆ ‘ಶಿವಣ್ಣ’ನಿಗೆ ‘ಕವಚ’..! ‘10ವರ್ಷ’ದ ಬಳಿಕ ಮತ್ತೆ ನಡೆದ ‘ಘಟನೆ’ಗೆ ಏನಂದ್ರು ಕಿಚ್ಚ…!

‘ಸುದೀಪ’ ಇನ್ಮುಂದೆ ‘ಶಿವಣ್ಣ’ನಿಗೆ ‘ಕವಚ’..! ‘10ವರ್ಷ’ದ ಬಳಿಕ ಮತ್ತೆ ನಡೆದ ‘ಘಟನೆ’ಗೆ ಏನಂದ್ರು ಕಿಚ್ಚ…!

1258
0
SHARE

ಕವಚ… ಸ್ಯಾಂಡಲ್‌ವುಡ್‌ನ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ ಮೋಸ್ಟ್ ಅವೇಟೆಡ್ ಸಿನಿಮಾ. ಇದೇ ಮೊದಲ ಬಾರಿಗೆ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿರುವ ಶಿವರಾಜ್‌ಕುಮಾರ್, ಪೋಸ್ಟರ್ ಮೂಲಕ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಲ್ಲಿದ್ದ ಕುತೂಹಲವನ್ನು ದುಪ್ಪಟ್ಟು ಮಾಡಿದ್ರು. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಕಂಡು ಹುಬ್ಬೇರಿಸುವಂತೆ ಮಾಡಿದ್ರು.

ಹೀಗೆ ಸಾಕಷ್ಟು ವಿಭಿನ್ನ & ವಿಷೇಶತೆಗಳನ್ನೊಳಗೊಂಡಿರುವ ಕವಚ ಚಿತ್ರತಂಡದಿಂದ ಸದ್ಯ ಹೊಚ್ಚ ಹೊಚ್ಚ ಹಾಡಿನ ಬಾಣ ಹೊರಬಂದಿದ್ದು. ಗಾಂಧಿನರದಲ್ಲಿ ಮೋಡಿ ಮಾಡ್ತಿದೆ.ಯಸ್.. ಶಿವರಾಜ್‌ ಕುಮಾರ್ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಿರುವ ಕವಚ ಚಿತ್ರದ ಎರಡನೇ ಸಾಂಗ್ ಬಿಡುಗಡೆಯಾಗಿದ್ದು. ‘ರೆಕ್ಕೆಯ ಕುದುರೆಯೇರಿ ಬೆಳ್ಳಿ ಮೋಡವ ದಾಟಿ ಎಂಬ ಸುಂದರವಾದ ಸಾಲುಗಳಿರುವ ಹಾಡನ್ನು ಕರುನಾಡಿ ಹೆಮ್ಮೆಯ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ.

ಇದೀಗ ಸೆಂಚುರಿ ಸ್ಟಾರ್ ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಸಾಥ್ ಕೊಟ್ಟಿರೋದು ಶಿವಣ್ಣನಿಗೆ ಕವಚ ಸಿಕ್ಕಂತಾಗಿದೆ.ದಿ ವಿಲನ್ ಚಿತ್ರದಲ್ಲಿ ಶಿವಣ್ಣ& ಕಿಚ್ಚ ಒಂದಾಗಿದ್ರು. ಈಗ ಶಿವಣ್ಣನ ಮೇಲಿನ ಪ್ರೀತಿಯಿಂದ, ಅಭಿಮಾನದಿಂದ ಚಿತ್ರದ ಮಧುರವಾದ ಹಾಡನ್ನು ರಿಲೀಸ್ ಮಾಡಿರುವ ಕಿಚ್ಚ. ಅದೇ ಸಂಭ್ರಮದಲ್ಲಿ ತಮ್ಮ ಮೊದಲ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಸವಿನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ. ಅಂದು ಸೀನಿಯರ್ ಆಗಿದ್ದ ಶಿವಣ್ಣ ಸ್ಪರ್ಶ ಸಿನಿಮಾದ ಹಾಡು ರಿಲೀಸ್ ಮಾಡಿದ್ರು. ಈಗ ಅವರ ಸಿನಿಮಾ ಹಾಡು ರಿಲೀಸ್ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಸಿಕ್ಕ ದೊಡ್ಡ ಹಾನರ್ ಎನ್ನುವ ಕಿಚ್ಚ.

ಸಾಂಗ್ ಅಧ್ಭುತವಾಗಿ ಮೂಡಿಬಂದಿದ್ದು. ನಿಮ್ಮ ಅಭಿನಯವನ್ನು ನೋಡಲು ಕಾತುರದಿಂದ ಕಾಯುವವರಲ್ಲಿ ನಾವು ಒಬ್ಬರೆನ್ನುತ್ತಾರೆ. ಚಿತ್ರತಂಡಕ್ಕೆ ಶುಭಕೋರಿದ್ದಾರೆ.ಇನ್ನು ಮಧುರವಾದ ಈ ಹಾಡನ್ನು ಚಿತ್ರ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್ ರಚಿಸಿದ್ದು, ಎಸ್. ಪಿ ಬಾಲಸುಬ್ರಹ್ಮಣ್ಯಂ ಹಾಗೂ ಶ್ರೇಯ ಜಯದೀಪ್ ಕಂಠ ಸಿರಿಯಲ್ಲಿ ಮೆಲೋಡಿ ಟ್ರಾಕ್ ಮೂಡಿಬಂದಿದೆ. ಅಂದ ಹಾಗೇ ಕವಚ, ಮಲಯಾಳಂ ಹಿಟ್ ಸಿನಿಮಾ ಒಪ್ಪಂ ಚಿತ್ರದ ರಿಮೇಕ್. ಭರ್ತಿ ಹದಿನೈದು ವರ್ಷಗಳ ಬಳಿಕ ಶಿವಣ್ಣ ರಿಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜಗತ್ತು ಕಾಣದಿದ್ದರೂ ಚಲನವಲನಗಳ ಮೂಲಕ ಮತ್ತು ದೈಹಿಕವಾಗಿ ಆತ ಬಲಶಾಲಿಯಾಗಿರುವ ಪಾತ್ರದಲ್ಲಿ ನಿಬ್ಬೇರಗಾಗುವಂತೆ ನಟಿಸಿದ್ದಾರೆ. ಶಿವಣ್ಣನ ಮಗಳ ಪಾತ್ರದಲ್ಲಿ ಬೇಬಿ ಅನನ್ಯ ಕ್ಯೂಟ್ ಆಗಿ ಮಿಂಚಿದ್ದು, ಕೊಡೆಕೆನಾಲ್‌ನಲ್ಲಿ ಚಿತ್ರದ ಹಾಡಿನ ಭಾಗ ಚಿತ್ರೀಕರಣಗೊಂಡಿದೆ.ಜಿ.ವಿ. ವಾಸು ಈ ಚಿತ್ರದ ನಿರ್ದೇಶಕ. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಿವಿಆರ್ ವಾಸು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇಶಾ ಕೊಪ್ಪಿಕರ್ ನಾಯಕಿಯಾಗಿ ನಟಿಸಿದ್ದು ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ.

ಉಳಿದಂತೆ ಕಂಚಿನ ಕಂಠದ ಖಳನಾಯಕ ವಸಿಷ್ಠ, ಕೃತಿಕಾ, ರವೀಂದ್ರನಾಥ್, ರಾಜೇಶ್ ನಟರಂಗ, ಇತಿ ಆಚಾರ್ಯ, ಲಯೇಂದ್ರ, ತಬಲ ನಾಣಿ, ನವೀನ್, ರವಿಖಾಳೆ ಇನ್ನಷ್ಟು ಮಂದಿ ಉಳಿದ ತಾರಾಬಳಗದಲ್ಲಿ ನಟಿಸಿದ್ದಾರೆ. ಮಾಚ್ ೨೯ ರಂದು ಚಿತ್ರ ಅದ್ದೂರಿಯಾಗಿ ತೆರೆಗೆ ಬರ್ತಿದ್ದು. ಶಿವಣ್ಣನ ಹೊಸ ಪ್ರಯತ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಬಿಡುವಿಲ್ಲದೆ ಬ್ಯಾಕ್ ಟು ಬ್ಯಾಕ್ ಚಿತ್ರೀರಕಣದಲ್ಲಿ ಬಿಝಿಯಾಗಿರುವ ಕಲಾವಿದ. ಸದ್ಯ ಸ್ಯಾಂಡಲ್‌ವುಡ್, ಬಾಲಿವುಡ್ ,ಹಾಲಿವುಡ್ ಚಿತ್ರರಂಗದಲ್ಲಿ ಮಿಂಚುಹರಿಸುತ್ತಿರುವ ಕಿಚ್ಚ ಬರೋಬ್ಬರಿ ೧೦ ವರ್ಷಗಳ ನಂತ್ರ ಬಾಲಿವುಡ್ ಬಿಗ್- ಬಿ ಅಮಿತಾಭ್ ಬಚ್ಚನ್ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು.

ತಮ್ಮ ಟ್ವೀಟ್‌ನಲ್ಲಿ ಬಿಗ್ ಬಿ ಜೊತೆಗೆ ಸೈರಾ ಸೆಟ್‌ನಲ್ಲಿ ತೆಗೆದುಕೊಂಡಿರುವ ಫೋಟೋ ಪೋಸ್ಟ್ ಮಾಡಿ ಹಳೇಯ ಘಟನೆಯನ್ನು ರೀಕಾಲ್ ಮಾಡಿಕೊಂಡಿದ್ದಾರೆ.ಸುದೀಪ್ ಟ್ವೀಟ್:ಸೈರಾಗೆ ಧನ್ಯವಾದಗಳು..ರಣ್ ಚಿತ್ರದ ಚಿತ್ರೀರಕಣದ ನಂತರ ಬರೋಬ್ಬರಿ ೧೦ ವರ್ಷಗಳ ಬಳಿಕ ನನಗೆ ದೊಡ್ಡ ಐಕಾನ್ ಹಾಗೂ ಲೆಜೆಂಡ್ ಜೊತೆ ಮತ್ತೆ ಬೆಳ್ಳಿ ತೆರೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದೆ. ಇವರು ತಮ್ಮ ಇಡೀ ಜೀವನವನ್ನು ಸಿನಿಮಾಕ್ಕಾಗಿ ಹಾಗೂ ನಮ್ಮನ್ನು ಮನರಂಜನೆ ನೀಡುವ ಸಲುವಾಗಿ ಮೀಸಲಿಟ್ಟಿದ್ದಾರೆ. ನನಗೆ ಈ ಅದ್ಭುತ ಕ್ಷಣವನ್ನು ಉಡುಗೊರೆಯಾಗಿ ನೀಡಿದ ಸೈರಾ ತಂಡಕ್ಕೆ, ರಾಮ್ ಚರಣ್ ಗೆ, ಸುರೇಂದರ್‌ಗೆ ಧನ್ಯವಾದಗಳು..

ಸುದೀಪ್ ೨೦೧೦ರಲ್ಲಿ ಬಿಡುಗೆಯಾದ ರಣ್ ಚಿತ್ರದಲ್ಲಿ ಅಮಿತಾಬ್ ರೋಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು. ರಾಮ್ ಗೋಪಾಲ್ ವರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರು. ಈಗ ಬರೋಬ್ಬರಿ ೧೦ ವರ್ಷಗಳ ಲಾಂಗ್ ಗ್ಯಾಪ್ ಬಳಿಕ ಲೆಜೆಂಡ್ರಿ ಆಕ್ಟರ್ ಜೊತೆ ನಟಿಸುತ್ತಿರುವ ಸಂತಸವನ್ನು ಕಿಚ್ಚ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿರೋದು. ಕಿಚ್ಚನ ಫ್ಯಾನ್ಸ್ ಕುಣಿದು ಕುಪ್ಪಳಿಸುವಂತೆ ಮಾಡಿರೋದು ಸುಳ್ಳಲ್ಲ. ಇದಕ್ಕೆ ಕೈ ಗನ್ನಡಿ ಅನ್ನುವಂತೆ ಸುದೀಪ ಶೇರ್ ಮಾಡಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

LEAVE A REPLY

Please enter your comment!
Please enter your name here