Home Cinema ಸುದೀಪ ನಿಂತಿದ್ದ್ಹೇಗೆ ಆರಂಭಿಕ ದಿನಗಳ ಸವಾಲು ಮೆಟ್ಟಿ..!?? ಅಂದು ಐರನ್ ಲೆಗ್ ಅಂದೋರೇ ನಿಲ್ತಿದ್ದಾರೆ ಇಂದು...

ಸುದೀಪ ನಿಂತಿದ್ದ್ಹೇಗೆ ಆರಂಭಿಕ ದಿನಗಳ ಸವಾಲು ಮೆಟ್ಟಿ..!?? ಅಂದು ಐರನ್ ಲೆಗ್ ಅಂದೋರೇ ನಿಲ್ತಿದ್ದಾರೆ ಇಂದು ಸಾಲುಗಟ್ಟಿ..! ಆಲ್ ಇಂಡಿಯಾ ಕಟೌಟ್ ಆಗಿದ್ದು ಹೇಗೆ ಅಭಿನಯ ಚಕ್ರವರ್ತಿ..! “ಕಿಚ್ಚೋತ್ಸವ..!”

1809
0
SHARE

ಸುದೀಪ.. ಅಭಿಮಾನಿಗಳ ಪ್ರೀತಿಯ ಅಭಿನಯ ಚಕ್ರವರ್ತಿ. ತಮ್ಮ ಅಭಿನಯದಿಂದ ಇವತ್ತು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿರುವ ಸುದೀಪ ಇಲ್ಲೀತನ್ಕ ನಡೆದ ಬಂದ ಹಾದಿ ಇದೆಯಲ್ಲ ಅದು ಹೂವಿನದ್ದೇನಾಗಿರಲಿಲ್ಲ. ಪ್ಲೊಯಸ್, ಕೆಚ್ಚದೆಯ ಕಿಚ್ಚ ಸಿನಿರಂಗಕ್ಕೆ ಬರುವ ನಿರ್ಧಾರ ಮಾಡಿದಾಗ, ಹೆಗಲು ಕೊಟ್ಟವರಿಗಿಂತ ಕಾಲ್ ಎಳೆದವ್ರೇ ಹೆಚ್ಚು. ನಕ್ಕವ್ರೇ ಹೆಚ್ಚು. ಇದಕ್ಕೆ ತಕ್ಕಂತೆ ಇವ್ರನ್ನ ಅರಸಿ ಬಂದ ಬ್ರಹ್ಮ ಹಾಗೂ ಕುಸುಮ ಬಾಲೆ ಸಿನಿಮಾಗಳು ನಿಂತು ಹೋದ್ವು. ಇಷ್ಟೇ ಸಾಕಿತ್ತು.. ಕಾಲ್ ಎಳೆಯುವವರ ಕಾಟ ಇನ್ನಿಲ್ಲದಂತೆ ಹೆಚ್ಚಾಗಲು.

ಇಷ್ಟೆಲ್ಲಾ ಆದ್ರೂ ಸುದೀಪ ಇದಕ್ಕೆ ಕುಗ್ಗಲಿಲ್ಲ. ಪ್ರಯತ್ನ ಕೈ ಬಿಡಲಿಲ್ಲ. ಇದೇ ಇವ್ರ ಪ್ರಯತ್ನದ ಫಲ ಅನ್ನುವಂತೆ ತಾಯವ್ವ ಚಿತ್ರ ಇವ್ರಿಗೆ ಸಿಕ್ಕಾಗ ಸುದೀಪ ಸಂಭ್ರಮಿಸಿದ ಪರಿನೂ ಕಮ್ಮಿ ಇರಲಿಲ್ಲ. ಪ್ಲೊತಾಯವ್ವ ಅಂದುಕೊಂಡಂತೆ ಗೆಲ್ಲಲಿಲ್ಲ. ಇದಾದ ಬಳಿಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಬಂದ ಪ್ರತ್ಯರ್ಥ ಸುದೀಪಗೆ ಹೆಸರು ತಂದು ಕೊಡಲಿಲ್ಲ. ಹಾಗಂತ, ಸುದೀಪ ಆಗ್ಲೂ ಕುಗ್ಗಲಿಲ್ಲ. ಸುನೀಲ್ ಕುಮಾರ್ ದೇಸಾಯಿ ಸುದೀಪ ಕೈ ಬಿಡಲಿಲ್ಲ. ಕಾರಣ, ಸುನೀಲ್ ಕುಮಾರ್ ದೇಸಾಯಿ ಅವ್ರಿಗೆ ಅವತ್ತೇ ಮನವರಿಕೆಯಾಗಿತ್ತು.

ಹುಡುಗನಲ್ಲಿ ಏನೋ ಒಂದು ಸ್ಪಾರ್ಕ್ ಇದೆ ಅನ್ನೋದು. ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ಇದೆ ಅನ್ನೋದು. ಅವಾಗ್ಲೇ ತಯಾರಾಗಿದ್ದು ಸ್ಫರ್ಶ.ಪ್ಲೊಹೌದು ಸ್ಫರ್ಶ, ಸುದೀಪ.. ಸೋಲೋ ನಾಯಕನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ. ಖುದ್ದು ಕಿಚ್ಚ ತಂದೆ ಸರೋವರ್ ಸಂಜೀವ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ಸ್ಪರ್ಶವನ್ನ ಪ್ರೇಕ್ಷಕರು ವಿಮರ್ಷಕರು ಮೆಚ್ಚಿಕೊಂಡಿದ್ದರು. ಸುದೀಪ ಎಲ್ಲರ ಮನಸಿನಲ್ಲಿ ಈ ಮೂಲಕ ಅವತ್ತು ಒಳಹೊಕ್ಕಿದ್ದರು. ಬಟ್, ಹೀಗಿದ್ದೂ ದೊಡ್ಡ ಮಟ್ಟದ ಒಂದು ಗೆಲುವನ್ನ ಸುದೀಪ ಎದುರು ನೋಡ್ತಿದ್ದರು.

ಆಗ್ಲೇ ಆದ ಪವಾಡನೇ ಹುಚ್ಚಪ್ಲೊಯಸ್, ಹುಚ್ಚ.. ಓಂಪ್ರಕಾಶ್ ರಾವ್ ನಿರ್ದೇಶನದ ಸಿನಿಮಾ. ತಮಿಳಿನ ಸೇತು ಚಿತ್ರದ ಕನ್ನಡ ಅವತರಣಿಕೆಯಾಗಿದ್ದ ಹುಚ್ಚಗಾಗಿ, ಸುದೀಪ ತಮ್ಮ ಜೀವವನ್ನೇ ತೇಯ್ದಿದ್ದರು. ಹಗಲು ರಾತ್ರಿ ಅನ್ನದೇ ಕಷ್ಟಪಟ್ಟು ಚಿತ್ರಕ್ಕೆ ದುಡಿದಿದ್ದರು. ಶ್ರಮ ಹಾಕಿದ್ದರು. ಕಾಲು ಪೆಟ್ಟಾದಾಗ್ಲೂ ಚಿತ್ರೀಕರಣಕ್ಕೆ ಬ್ರೇಕ್ ಹಾಕ್ದೇ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಇದೆಲ್ಲದ್ರ ಫಲವೆನ್ನುವಂತೆ ಹುಚ್ಚ ಭಾರೀ ದೊಡ್ಡ ಯಶಸ್ಸನ್ನ ಗಳಿಸಿತ್ತು. ಸುದೀಪ ದೊಡ್ಡ ಹೆಸರನ್ನ ತಂದು ಕೊಟ್ಟಿತ್ತು. ಇಷ್ಟೇ ಅಲ್ಲ ಫಿಲ್ಮ್ ಫೇರ್ ಇವ್ರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಿತು.

ಪ್ಲೊಆಫ್ಟರ್ ಟ್ರೆಮಂಡಸ್ ಸಕ್ಸಸ್ ಆಪ್ ಹುಚ್ಚ, ಸುದೀಪ ಯಾವತ್ತೂ ಮತ್ತೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬಿಕೌಝ್ ಹುಚ್ಚ ಬಳಿಕ ಸುದೀಪ ಸಿನಿಜೀವನಕ್ಕೊಂದು ವೇಗ ಸಿಕ್ಕಿತ್ತು. ಸಾಲು ಸಾಲು ಸಿನಿಮಾಗಳು ಸುದೀಪರನ್ನ ಅರಸಿ ಬಂದ್ವು. ವಾಲಿ. ಚಂದು. ತುಂಟಾಟ. ಧಮ್. ಹೀಗೆ ಬ್ಯಾಕ್ ಟು ಬ್ಯಾಕ್ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾ, ಅಭಿಮಾನಿಗಳ ಮನತಣಿಸುತ್ತಾ. ತಮ್ಮ ವಾಯ್ಸ್ & ಅಫಿಯರೆನ್ಸ್ ಮೂಲಕ ಹೊಸದೊಂದು ಕ್ರಾಂತಿಯನ್ನೇ ಮಾಡುತ್ತಾ ಮುನ್ನುಗ್ಗಿದ ಸುದೀಪ ಸಿನಿಯಾನವನ್ನ ನಂದಿ ಮತ್ತೊಂದು ದಿಕ್ಕಿನತ್ತ ಕರೆದೊಯ್ತು.

ರಾಜೇಂದ್ರ ಬಾಬು ನಿರ್ದೇಶನದಲ್ಲಿ ಬಂದ ನಂದಿಯಲ್ಲಿನ ಸುದೀಪ ಅಭಿನಯಕ್ಕೆ, ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಇಷ್ಟೇ ಅಲ್ಲ ಫಿಲ್ಮ್ ಫೇರ್ ಕೂಡಾ ಮತ್ತೊಮ್ಮೆ ಸುದೀಪ ಅಭಿನಯಕ್ಕೆ ಮನಸೋತು ಅತ್ಯುತ್ತಮ ನಟ ಪ್ರಶಸ್ತಿಯನ್ನ ನೀಡಿ ಗೌರವಿಸಿತ್ತು. ನಂತ್ರ ಬಂದ.. ಕಿಚ್ಚ, ಪಾರ್ಥ & ಸ್ವಾತಿಮುತ್ತು ಕಿಚ್ಚನ ಅಭಿನಯಕ್ಕೆ ಹಿಡಿದ ಬೆಸ್ಟ್ ಕೈಗನ್ನಡಿಗಳಾಗಿದ್ವು. ಅದ್ರಲ್ಲೂ ಸ್ವಾತಿ ಮುತ್ತು ಚಿತ್ರದಲ್ಲಿ ಸುದೀಪ ಪರ್ಫಾಮೆನ್ಸ್ ವ್ಹಾರೇ ವ್ಹಾ ಅನ್ನುವಂತಿತ್ತು. ಪ್ಲೊಆಫ್ಟರ್ ಸ್ವಾತಿ ಮುತ್ತು ಬಂದ ರಂಗ ಎಸ್ ಎಸ್ ಎಲ್ ಸಿ. ನಲ್ಲ.

ಆಲ್ ಇಂಡಿಯಾ ಕಟೌಟ್ ಆಗಿದ್ದು ಹೇಗೆ ಅಭಿನಯ ಚಕ್ರವರ್ತಿ..!ಸೌಥ್ ಟು ನಾರ್ಥ್ ಪಸರಿಸಿದ್ದು ಹೇಗೆ ಗೊತ್ತೇ ಸುದೀಪ ಕೀರ್ತಿ..!ಮುಸ್ಸಂಜೆ ಮಾತು ಸಿನಿಮಾ, ಬಾಕ್ಸಾಫೀಸಿನಲ್ಲಿ ಬಹುದೊಡ್ಡ ಗೆಲುವನ್ನ ಕಂಡಿತ್ತು. ಸುದೀಪ ಪಾತ್ರ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು. ಇನ್ನು ಸುದೀಪ & ರಮ್ಯಾ ಕೆಮೆಸ್ಟ್ರೀ ಚಿತ್ರದ ಜೀವಾಳವಾಗಿತ್ತು. ಹೀಗಿದ್ದೂ ಸುದೀಪ ಚಿತ್ರರಂಗದ ಕೆಲವರಿಂದ ಕಡೆಗಣಿಸಲ್ಪಡ್ತಾನೇ ಇದ್ದರು. ಕಾಲ್ ಎಳೆಯುವವರು ಮಾತಾಡ್ತಾನೇ ಇದ್ದರು. ಇದಕ್ಕೆ ತಕ್ಕಂತೆ ಬಂದ ಕಾಮಣ್ಣನ ಮಕ್ಕಳು ಸಿನಿಮಾ ಸೋತಿತ್ತು.

ಚಂದನವನದಲ್ಲಿ ಕೆಲವೊಂದು ಕಡೆ ಸುದೀಪ ಎಡವಿದ್ಮೇಲೆ, ಇದೇ ಕಾಲ್ ಎಳೆಯುವವರ ಕಾಟದಿಂದ ಅವಕಾಶಗಳು ಕಮ್ಮಿಯಾಗಿದ್ವು. ಆಗ್ಲೇ ರಾಮು ಇವ್ರ ಜೊತೆ ಸಾಲು ಸಾಲು ಸಿನಿಮಾ ಮಾಡಿದ್ದು. ಹೀಗಿದ್ದೂ ಕನ್ನಡದಲ್ಲಿ ತನ್ನ ಶಕ್ತಿಯ ಪರಿಚಯ ಮಾಡಿಕೊಡುವ ತವಕ ಹೊಂದಿದ್ದ ಸುದೀಪ ವೀರ ಮದಕರಿ ಹಾಗೂ ಕೆಂಪೇಗೌಡ ಮೂಲಕ ತಾವ್ ಅಂದುಕೊಂಡಿದ್ದನ್ನ ಸದ್ದಿಲ್ಲದೇ ಮಾಡಿ ತೋರಿಸಿದ್ದರು. ಪ್ಲೊವಿಷ್ಣುವರ್ಧನ ಸುದೀಪ ಅಭಿನಯದ ಮತ್ತೊಂದು ಹಿಟ್ ಸಿನಿಮಾ. ಸಾಹಸಸಿಂಹನ ಆರಾಧಕನಾಗಿರುವ ಸುದೀಪ, ವಿಷ್ಣು ಹೆಸರಿಗೆ ಇಲ್ಲಿ ಎಲ್ಲೂ ಧಕ್ಕೆ ತರಲಿಲ್ಲ. ಸೋಲಲಿಲ್ಲ. ಬಹುಶ, ಇದೇ ಸಾಹಸಸಿಂಹ ವಿಷ್ಣುವರ್ಧನ್ ಆಶಿರ್ವಾದದಿಂದ.. ಹಾಗೂ ಸುದೀಪ ತೆಗೆದುಕೊಂಡಿದ್ದ ಹಿಂದಿ ಸಿನಿಮಾ ಮಾಡುವ ನಿರ್ಧಾರದಿಂದ, ಅಭಿನಯ ಚಕ್ರವರ್ತಿಯ ಖ್ಯಾತಿ ಉತ್ತುಂಗಕ್ಕೇರುವ ಕಾಲ ಬಂದಾಗಿತ್ತು.

ಹಾಗಾಗೇ, ಈಗ ಇವ್ರನ್ನ ಅರಸಿ ಬಂದಿತ್ತುಪ್ಲೊಯಸ್, ಈಗ, ಸುದೀಪರನ್ನ ಇಂಟರ್ ನ್ಯಾಶನಲ್ ಬ್ರ್ಯಾಂಡ್‌ನನ್ನಾಗಿಸಿದ ಸಿನಿಮಾ. ಖ್ಯಾತ ನಿರ್ದೇಶಕ ರಾಜ್ ಮೌಳಿ ನಿರ್ದೇಶನದಲ್ಲಿ ಬಂದ ಈಗ ಸಿನಿಮಾ ಸುದೀಪ ಸಿನಿಯಾನಕ್ಕೆ ಮಹತ್ತರವಾದ ತಿರುವನ್ನ ನೀಡಿತು. ತೆಲುಗು,ತಮಿಳು. ಇಷ್ಟೇ ಯಾಕೆ ಹಿಂದಿ ಉದ್ಯಮದ ದಿಗ್ಗಜರೆಲ್ಲಾ ಸುದೀಪಗೆ ಶರಣಾದ್ರು. ಅಭಿನಯವನ್ನ ಬಾಯ್ತುಂಬ ಹೊಗಳಿದ್ರು. ಪ್ಲೊಆಫ್ಟರ್ ಈಗ ಮತ್ತೊಂದು ಹಂತ, ಮತ್ತೊಂದು ಸ್ಥಾನವನ್ನ ತಲುಪಿದ ಸುದೀಪ.. ಬಾಹುಬಲಿಯಲ್ಲೂ ಮಿಂಚಿದ್ರು. ಪುಲಿಯಲ್ಲೂ ಅಬ್ಬರಿಸಿದ್ರು. ಇನ್ನು ಕನ್ನಡದಲ್ಲಿ ಬಂದ ಬಚ್ಚನ್, ಕೋಟಿಗೊಬ್ಬ ೨, ಹೆಬ್ಬುಲಿ.. ಸುದೀಪ, ಸ್ಟಾರ್ ಪವರ್‌ಗೆ ಬೆಸ್ಟ್ ಎಕ್ಸಾಂಪಲ್. ಇನ್ನು, ಮಾಣಿಕ್ಯ & ರನ್ನ..

ಸುದೀಪರಲ್ಲಿರುವ ನಿರ್ದೇಶನಕ್ಕೆ ಹಿಡಿದ ಇನ್ನೆರಡು ಅತ್ಯುತ್ತಮ ಉದಾಹರಣೆಗಳು.ಸದ್ಯ, ಸುದೀಪ, ದಿ ವಿಲನ್ ಚಿತ್ರದ ಮೂಲಕ ಕನ್ನಡ ಕಲಾಭಿಮಾನಿಗಳ ಮುಂದೆ ಬರಲಿದ್ದಾರೆ. ದಿ ವಿಲನ್ ಬಂದು ಹೋದ ಬೆನ್ನಲ್ಲೇ ಅಂಬಿ ನಿಂಗ್ ವಯಸ್ಸಾಯ್ತೋದಲ್ಲಿ ಕಾಣಸಿಗುವ ದೀಪು ಬಳಿಕ ಪೈಲ್ವಾನ್ ರೂಪದಲ್ಲಿ ಪ್ರತ್ಯಕ್ಷವಾಗಲಿದ್ದಾರೆ. ಇಷ್ಟೇ ಅಲ್ಲ ಕೋಟಿಗೊಬ್ಬ ೩ಯಲ್ಲೂ ಕೆಚ್ಚದೆಯ ಕಿಚ್ಚನ ಕರಾಮತ್ತು & ತಾಕತ್ತಿನ ಅನಾವರಣವಾಗಲಿದೆ. ಸುದೀಪ ಹುಟ್ಟುಹಬ್ಬದ ಪ್ರಯುಕ್ತ, ಪೈಲ್ವಾನ್ & ಕೋಟಿಗೊಬ್ಬ ೩ ಚಿತ್ರತಂಡಗಳು ಅಭಿಮಾನಿಗಳಿಗೆ ಟೀಸರ್‌ಗಳನ್ನ ಉಡುಗೊರೆಯನ್ನಾಗಿ ನೀಡಿವೆ. ನಿರೀಕ್ಷೆಗಳನ್ನ ದುಪಟ್ಟುಗೊಳಿಸಿವೆ ಪ್ಲೊಇಷ್ಟೇ ಅಲ್ಲ, ಮೆಘಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿಯಲ್ಲೂ ಸುದೀಪ ಫ್ಲೇವರ್ ಕಾಣಸಿಗಲಿದೆ. ಇನ್ನು, ಸ್ಯಾಂಡಲ್ವುಡ್‌ನಿಂದ ಹಾಲಿವುಡ್‌ವರೆಗೂ ಪ್ರಯಾಣ ಬೆಳೆಸಿರುವ ಸುದೀಪ, ರೈಸಿನ್ ಸಿನಿಮಾದಲ್ಲೂ ಕಾಣಸಿಗಲಿದ್ದಾರೆ.

LEAVE A REPLY

Please enter your comment!
Please enter your name here