Home Cinema ಸುದೀಪ – ಶಿವಣ್ಣನ ದಿ ವಿಲನ್ ಸಿನಿಮಾ ನಾಯಕಿ ಬಗ್ಗೆ ಗುಲ್ಲೋಗುಲ್ಲು! `ಆಮಿ’ಯನ್ನ ಪ್ರಶ್ನೆ ಮಾಡ್ತಿದ್ದಾರೆ...

ಸುದೀಪ – ಶಿವಣ್ಣನ ದಿ ವಿಲನ್ ಸಿನಿಮಾ ನಾಯಕಿ ಬಗ್ಗೆ ಗುಲ್ಲೋಗುಲ್ಲು! `ಆಮಿ’ಯನ್ನ ಪ್ರಶ್ನೆ ಮಾಡ್ತಿದ್ದಾರೆ ಎಲ್ರೂ `ನೀನು ಸಲಿಂಗಕಾಮಿಯಾ’ ಅಂತ!

2088
0
SHARE

ಆಮಿ ಜಾಕ್ಸನ್ ತನ್ನ ಗೆಳತಿಯ ಜೊತೆಗಿರೋ ಫೋಟೋ ಆಗಿದೆ ವೈರಲ್ಲು!ಯೆಸ್ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್. ಅಷ್ಟೇ ಯಾಕೆ ಹಾಲಿವುಡ್ ಅಂಗಳದಲ್ಲೂ ನಟಿ ಆಮಿ ಜಾಕ್ಸನ್ ಬಗ್ಗೆ ಒಂದು ಗಾಸಿಪ್ ಹರಿದಾಡ್ತಿದೆ. ಇಷ್ಟೆಲ್ಲಾ ಚಿತ್ರರಂಗಗಳ ಗಾಸಿಪ್ ಕಾಲಂ ಗಳಲ್ಲಿ ಸದ್ಯ ಆಮಿ ಜಾಕ್ಸನ್ ಮಿಂಚಿಂಗೋ ಮಿಂಚಿಂಗು.. ಅಷ್ಟಕ್ಕೂ ಸ್ಯಾಂಡಲ್ ವುಡ್ ನಿಂದ  ಹಾಲಿವುಡ್ ವರೆಗೂ ಈಕೆ ಬಗ್ಗೆ ಗಾಸಿಪ್ ಹರಿದಾಡುತ್ತೆ ಅಂದ್ರೆ ಅದಕ್ಕೆ ಕಾರಣವೂ ಇದೆ.

ಆಮಿ ಮೂಲತಃ ಬ್ರಿಟನ್ ಮೂಲದ ಮಾಡೆಲ್. ಅಂತರಾಷ್ಟ್ರಿಯ ಮಟ್ಟದ ಮಾಡೆಲಿಂಗ್ ವೇದಿಕೆಗಳಲ್ಲಿ, ರ್ಯಾಂಪ್ ಗಳಲ್ಲಿ ಈಕೆ ಕಾಣಸಿಕ್ತಾಳೆ. ಸೋ ಆಮಿ ಬಗೆಗಿನ ಸುದ್ದಿ ಏನೇ ಇದ್ರೂ ಅಂತರಾಷ್ಟ್ರೀಯ ಸಿನಿ-ಫ್ಯಾಶನ್ ಜಗತ್ತಿನಲ್ಲಿ ಸುದ್ದಿ ಮಾಡುತ್ತೆ.ಇನ್ನೂ ಬ್ರಿಟನ್ ಮೂಲದವಳಾದ ಆಮಿ ಸದ್ಯ ಭಾರತೀಯಳೇ ಆಗಿ ಹೋಗಿದ್ದಾಳೆ.

ಅಸಲಿಗೆ ಆಮಿ ಭಾರತದಕ್ಕೆ ಬಂದಿದ್ದು ಮದ್ರಾಸ್ ಪಟ್ಟಣಂ ಅನ್ನೋ ತಮಿಳು ಸಿನಿಮಾದಲ್ಲಿ ನಟಿಸೋ ಮೂಲಕ. 2010ರಲ್ಲಿ ಬಂದ ಈ ಸಿನಿಮಾದಲ್ಲಿ ಆಮಿ ಒಬ್ಬ ಬ್ರಿಟಿಶ್ ಯುವತಿಯಾಗಿ ನಟಿಸಿದಾಳೆ. ಬ್ರಿಟಿಶ್ ಯುವತಿ ಪಾತ್ರಕ್ಕೆ ಬ್ರಿಟಿಶ್ ಹುಡುಗಿಯೇ ಬೇಕು ಅಂತ ಕಾಲಿವುಡ್ ಮಂದಿ ಈಕೆಯನ್ನ ಕರೆತಂದ್ರು.

ಇನ್ನೂ ಇಂಥಾ ಬಹುಬೇಡಿಕೆಯ ಚೆಲುವೆ ಆಮಿ ನಮ್ಮ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದಾಳೆ. ಅದು ಸುದೀಪ-ಶಿವಣ್ಣ ಜೋಡಿಯ ದಿ ವಿಲನ್ ಸಿನಿಮಾಗೆ ನಾಯಕಿಯಾಗೋ ಮೂಲಕ. ಈಗಾಗ್ಲೇ ವಿಲನ್ ಸಿನಿಮಾದಲ್ಲಿನ ಆಮಿಯ ಭಾಗದ ಚಿತ್ರೀಕರಣ ಮುಗಿದಿದ್ದು ಕನ್ನಡ ಸಿನಿಪ್ರಿಯರು ಕೂಡ ಆಮಿಯನ್ನ ಮೊದಲ ಬಾರಿ ಕನ್ನಡ ಸಿನಿಮಾದಲ್ಲಿ ನೋಡೋಕೆ ತುದಿಗಾಲ ಮೇಲೆ ನಿಂತಿದಾರೆ.,

ಅಷ್ಟಕ್ಕೂ ಈ ಒಂದು ಫೋಟೋದಲ್ಲಿ ಏನಿದೆ… ಇದ್ರಿಂದ ಗಾಸಿಪ್ ಗೆ ಸಿಲುಕುವಂಥದ್ದು ಏನಿದೆ ಅಂತ ನೀವು ಕೇಳಬಹುದು. ಕಳೆದ ಜೂನ್ 5 ನೇ ತಾರೀಖು ತಮ್ಮ ಸ್ನೇಹಿತೆಯೊಬ್ಬಳ ಜೊತೆಗಿರೋ ಈ ಫೊಟೋವನ್ನ ಆಮಿ ಜಾಕ್ಸನ್ ಇಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದಾರೆ.ಮೇಲ್ನೋಟಕ್ಕೆ ಈ ಪೋಟೋದಲ್ಲಿ ಏನೂ ಇಲ್ಲ.

ಸಹಜವಾಗಿ ಸ್ನೇಹಿತೆಯರು ತಬ್ಬಿಕೊಂಡು ಪೋಟೋ ಹಾಕೋದು ಕಾಮನ್. ಇದನ್ನ ಕೂಡ ಕೆಲವರು ಕಾಮನ್ ಅಂತಲೇ ಅಂದುಕೊಂಡು ಸುಮ್ಮನಾಗಿದಾರೆ. ಆದ್ರೆ ಕೆಲವರು ಈ ಕಾಮನ್ ಫೊಟೋದೂ  ಹಿಂದೆನೋ ಒಂದು ಕಾಮನೆಯ ಕಥೆಯನ್ನೇ ಕಂಡುಹಿಡಿದಾರೆ. ಯೆಸ್ ಈ ಫೋಟೋವನ್ನ ಹಾಕಿ ವೈಫ್ ಲೈಫ್ ಅಂತ ಶಿರ್ಷಿಕೆ ಕೊಟ್ಟದಾಳೆ ಆಮಿ. ಇಲ್ಲಿ ಗೆಳತಿಯ ಜೊತೆಗಿದ್ದು ವೈಫ್ ಅಂದಿರೋದು ಯಾಕೆ ಅಂತ ಹುಡುಕ ಹೋದವರಿಗೆ ಈ ಪೋಟೋ ಮತ್ತೊಂದು ರೀತಿಯಲ್ಲಿ ಕಾಣತೊಡಗಿದೆ.

ಎಲ್ಲಾ ನೋಡಿದವರು ಇಬ್ಬರಿಬ್ಬರೂ ಸಲಿಂಗಕಾಮಿಗಳು ಅನ್ನೋ ತೀರ್ಮಾನಕ್ಕೆ ಬಂದು ಬಿಟ್ಟಿದಾರೆ. ಆಮಿ ಲೆಸ್ಬಿಯನ್ ಅಂತೆ ಅನ್ನೋ  ಸುದ್ದಿ ಎಲ್ಲಾ ಕಡೆ ಹರಿದಾಡ್ತಿದೆ.ನಟಿ ಆಮಿ ಜಾಕ್ಸನ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ತನ್ನ ಗೆಳತಿಯೊಬ್ಬಳ ಜೊತೆ ತುಂಬಾ ಆತ್ಮೀಯವಾಗಿ ತಬ್ಬಿಕೊಂಡಿದ್ದು, ಇದಕ್ಕೆ ‘ವೈಫ್-ಲೈಫ್’ ಎಂದು ಅಡಿಬರಹ ನೀಡಿದ್ದಾರೆ.

ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಈ ಫೋಟೋ ಮತ್ತು ಸ್ಟೇಟಸ್ ನೋಡಿದ ನೆಟ್ಟಿಗರು ”ನೀವು ಸಲಿಂಗಕಾಮಿನಾ” ಎಂದು ಕೇಳುತ್ತಿದ್ದಾರೆ. ‘ಆ ಫೋಟೋವನ್ನ ಗಂಭೀರವಾಗಿ ಗಮನಿಸಿದ್ರೆ ಅದೇ ಫೀಲಿಂಗ್ ಬರ್ತಿದೆ’ ಎಂದು ಕಾಮೆಂಟ್ ಮಾಡ್ತಿದ್ದಾರೆ. ಇನ್ನು ಆಮಿ ಹಾಕಿರುವ ಸ್ಟೇಟಸ್ ಇದಕ್ಕೆ ಪುಷ್ಠಿ ನೀಡುವಂತಿದೆ. ಇದೆಲ್ಲವನ್ನ ಗಮನಿಸಿದ್ರೆ ಇದು ನಿಜ ಇರಬಹುದು ಎನ್ನಲಾಗುತ್ತಿದೆ.

ಯೆಸ್ ಆಮಿ ಜಾಕ್ಸನ್ ತಮ್ಮ ಸ್ನೇಹಿತೆಯೊಬ್ಬಳ ಜೊತೆಗಿರೋ ಫೊಟೋವನ್ನ ಆಪ್ ಲೋಡ್ ಮಾಡಿ ಅದಕ್ಕೆ ವೈಫ್ ಲೈಫ್ ಅಂತ ಶಿರ್ಷಿಕೆ ಕೊಟ್ಟಿದ್ದೇ ತಡ. ಅದಕ್ಕೆ ಕಮೆಂಟ್ ಗಳ ಸುರಿಮಳೆಯೇ ಆಗಿದೆ. ಕೆಲವರು ಈ ಫೋಟೋ ನೋಡಿ ಇವರಿಬ್ಬರೂ ಸಲಿಂಗಕಾಮಿಗಳು ಇರಬಹುದು ಅಂತ ಕಮೆಂಟ್ ಮಾಡಿದಾರೆ… ಕೆಲವು ಪ್ರಶ್ನೆ ಇನ್ನು ಕೆಲವರು ಇವರು ಲೆಸ್ಬಿಯನ್ ಗಳೇ ಅಂತ ತೀರ್ಮಾನಕ್ಕೆ ಬಂದುಬಿಟ್ಟಿದಾರೆ.

ಯೆಸ್ ಕಳೆದ ವರ್ಷ ನೀಡಿದ ಸಂದರ್ಶನವೊಂದರಲ್ಲಿ ಆಮಿ ಜಾಕ್ಸನ್ ಸಲಿಂಗಕಾಮದ ಬಗ್ಗೆ ಮಾತನಾಡುತ್ತಾ, “ನಾನು ಅದರ ಬಗ್ಗೆ ಬಹಿರಂಗವಾಗಿರುತ್ತೇನೆ, ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಸಲಿಂಗಕಾಮಿ ಇದ್ದಾರೆ” ಎಂದು ಹೇಳಿಕೊಂಡಿದ್ದರು. ಬಹುಶಃ ಆ ಸ್ನೇಹಿತೆ ಇವರೇ ಇರಬಹುದು ಎಂಬ ಕುತೂಹಲ ಈಗ ನೆಟ್ಟಿಗರನ್ನ ಕಾಡುತ್ತಿದೆ.

ಯೆಸ್ ಅಷ್ಟಕ್ಕೂ ಇಷ್ಟೆಲ್ಲಾ ಗಾಸಿಪ್ ಸೃಷ್ಟಿಯಾಗೋದಕ್ಕೆ ಕಾರಣವಾದ ಈ ಗೆಳತಿ ಯಾರು.. ಆಮಿ ವೈಫ್-ಲೈಫ್ ಅಂತ ಶಿರ್ಷಿಕೆ ಕೊಟ್ಟು ಹಾಕಿರೋದು ಅದ್ಯಾರ ಫೊಟೋವನ್ನ ಅಂತಲೂ ಗಾಸಿಪ್ ಪಂಡಿತರು ಹುಡುಕಾಡಿದಾರೆ. ಫೈನಲಿ ಆಮಿಯ  ಗೆಳತಿ ಯಾರು ಅನ್ನೋದನ್ನ ಪತ್ತೆ ಮಾಡಿದಾರೆ. ಅಂದಹಾಗೆ ಈಕೆ ಮೂಲತಃ ಭಾರತದವಳೇ… ಹೆಸರು ನೀಲಂ ಗಿಲ್..

LEAVE A REPLY

Please enter your comment!
Please enter your name here