Home Cinema ಸುಬ್ರಹ್ಮಣ್ಯನ ಶಾಪಕ್ಕೆ ತುತ್ತಾದ್ರಾ ಯಶ್..!? ಸಂಪ್ರದಾಯ ಮುರಿದಿದ್ರಿಂದಲೇ ರಾಕಿಂಗ್ ಸ್ಟಾರ್‌ಗೆ ಐಟಿ ಸಂಕಷ್ಟ..!

ಸುಬ್ರಹ್ಮಣ್ಯನ ಶಾಪಕ್ಕೆ ತುತ್ತಾದ್ರಾ ಯಶ್..!? ಸಂಪ್ರದಾಯ ಮುರಿದಿದ್ರಿಂದಲೇ ರಾಕಿಂಗ್ ಸ್ಟಾರ್‌ಗೆ ಐಟಿ ಸಂಕಷ್ಟ..!

1754
0
SHARE

ವಿಶ್ವದಾದ್ಯಂತ ಕೆಜಿಎಫ್ ಅನ್ನೋ ಒಂದು ಕನ್ನಡ ಚಿತ್ರವೊಂದರಿಂದ ಮನೆಮಾತಾಗಿರೋ ನಾಯಕ ನಟ ಯಶ್ ಹೆಲಿಕಾಪ್ಟರ್ ಮೂಲಕ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿರುವುದೇ ಕೆಜಿಎಫ್ ಚಿತ್ರದ ಅಡ್ಡಿಗೆ ಕಾರಣವಾಗಿತ್ತು.. ಇಂಥದ್ದೊದ್ದೊಂದು ಮಾತು ಸುಬ್ರಹ್ಮಣ್ಯ ಪರಿಸರದಲ್ಲಿ ಕೇಳಿ ಬಂದಿತ್ತು… ನಟ ಯಶ್ ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದ್ಧಿ ಹಲವು ಉಹಾಪೋಹಗಳಿಗೂ ಕಾರಣವಾಗಿತ್ತು. ಈಗ ಅದರ ಬೆನ್ನ ಹಿಂದೆಯೇ ಕನ್ನಡದ ಸ್ಟಾರ್ ನಟ ಯಶ್ ಮಲೆ ಮೇಲೆ ಐಟಿ ರೈಡ್ ಆಗಿರೋದು ಕುಕ್ಕೆ ಸುಭ್ರಮಣ್ಯನ ಶಾಪದಿಂದಲೇ ಎನ್ನಲಾಗುತ್ತಿದೆ.. ಹೀಗೊಂದು ಅನುಮಾನ ಹುಟ್ಟೋದಕ್ಕೆ ಕಾರಣವಾದ್ರೂ ಏನು…?

ಈ ಹಿಂದೆ ಯಾರೆಲ್ಲ ಇಲ್ಲಿಗೆ ಹೆಲಿಕಾಪ್ಟರ್ ಮೂಲಕ ಬಂದು ಸುಭ್ರಮಣ್ಯ ಸ್ವಾಮಿ ಕೋಪಕ್ಕೆ ಗುರಿಯಾಗಿದ್ದಾರೆ..? ರಾಜ್ಯದ ಪ್ರಸಿದ್ಧ ದೇವಾಯಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಬಂದವರು ತನ್ನ ಅಧಿಕಾರ, ಅಂತಸ್ತು ಕಳೆದುಕೊಳ್ಳುತ್ತಾರೆ ಎನ್ನುವ ವಿಚಾರ ಸುಬ್ರಹ್ಮಣ್ಯ ಭಾಗದ ಜನರ ಪ್ರತಿಯೊಬ್ಬರ ಬಾಯಲ್ಲೂ ಕೇಳಬಹುದಾಗಿದೆ. ಇದೇ ಕಾರಣಕ್ಕಾಗಿಯೇ ಕೆಲವು ದಿನಗಳ ಹಿಂದೆ ಕ್ಷೇತ್ರಕ್ಕೆ ಯಶ್ ಹೆಲಿಕಾಪ್ಟರ್ ಮೂಲಕ ಆಗಮಿಸಿದಾಗ ಈ ಮಾತು ಮುನ್ನೆಲೆಗೆ ಬಂದಿತ್ತು. ಹಿಂದಿನ ಹೆಲಿಕಾಪ್ಟರ್ ಗಳು ದೇವಸ್ಥಾನಕ್ಕೆ ಸುತ್ತು ಹೊಡೆದು ಬಳಿಕ ಲ್ಯಾಂಡಿಂಗ್ ಆಗುತ್ತಿತ್ತು.

ಹೀಗೆ ಸುತ್ತು ಹೊಡೆಯುವುದು ಕ್ಷೇತ್ರಕ್ಕೆ ಸಂಬಂಧಪಟ್ಟ ಗರುಡ ಮಾತ್ರವಾಗಿದೆ. ಬೇರೆ ಯಾರೇ ದೇವಸ್ಥಾನಕ್ಕೆ ಸುತ್ತು ಹೊಡೆದು ಬಂದರೆ ಅಂತಸ್ತನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ಸ್ಥಳೀಯರ ನಂಬಿಕೆ.ಸುಭ್ರಮಣ್ಯ ಸ್ವಾಮಿ ಭಕ್ತರ ನಂಬಿಕೆ ಹಾಗೂ ಸ್ವಾಮಿಯ ಶಕ್ತಿ ಎನ್ನುವಂತೆ ಸ್ಟಾರ್ ನಟ ಯಶ್ ಹೆಲಿಕಾಪ್ಟರ್ ನಲ್ಲಿ ಕುಕ್ಕೆಗೆ ಹೋಗಿ ಬಂದ ಬಳಿಕ ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ದೇಶಾದ್ಯಂತ ಇಂದು ತೆರೆಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ ‘ಕೆಜಿಎಫ್’ ಚಿತ್ರ ಬಿಡುಗಡೆಗೆ ಕೋರ್ಟ್ ಗುರುವಾರದಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು..

‘ಕೆಜಿಎಫ್’ ರೌಡಿ ತಂಗಂ ಜೀವನಾಧರಿತ ಸಿನಿಮಾ ಇದಾಗಿದ್ದು , ಈ ಹಿಂದೆಯೇ ತಂಗಂ ಜೀವನಾಧಾರಿತ ಕತೆಯನ್ನು ಚಿತ್ರೀಕರಿಸಲು ತಾನು ಹಕ್ಕು ಪಡೆದಿದ್ದೇ‌ನೆ ಅಂತ ಆರೋಪಿಸಿ ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 10ನೇ ಸಿಟಿ ಸಿವಿಲ್ ಕೋರ್ಟ್, 2019, ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿತ್ತು. ಚಿತ್ರದ ಟ್ರಯಲ್ ಮೂಲಕವೇ ಭಾರಿ ಸುದ್ದಿ ಮಾಡಿದ್ದ 40 ಕೋಟಿ ರುಪಾಯಿ ವೆಚ್ಚದ ಕೆಜಿಎಫ್​ ಚಿತ್ರದ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು ‘ಕೆಜಿಎಫ್’ಗಾಗಿ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗುವಂತೆ ಮಾಡಿತ್ತು. ಇದೆಲ್ಲದಕ್ಕೂ ಸುಬ್ರಮಣ್ಯನ ಸನ್ನಿಧಿಯಲ್ಲಿ ಯಶ್ ನಡೆದುಕೊಂಡ ರೀತಿಯೇ ಕಾರಣ ಎನ್ನಲಾಗಿತ್ತು..

ಅದೇನೋ ಅಂತಾರಲ್ಲ ಬೆಂಕಿಯಿದ್ದ ದ್ದು ಬಾಣಲೆಗೆ ಬಿದ್ದ ಹಾಗೆ ಹಾಗೋ ಹೀಗೋ ಕೆಜಿಎಪ್ ಚಿತ್ರವೇನೋ ಬಿಡುಗಡೆಯಾಯ್ತು.. ಆದ್ರೀಗ ಯಶ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಸುಬ್ರಮಣ್ಯ ಸ್ವಾಮಿಯ ಕೋಪ ಇನ್ನೂ ಯಶ್ ಮೇನೆ ಹಾಗೇ ಇದೆ ಎನ್ನಲಾಗುತ್ತಿದೆ… ಹಣ, ಅಂತಸ್ತು, ಅಧಿಕಾರ ಏನೆಲ್ಲ ಸಂಪಾದಿಸಿದ್ರೂ ಸುಬ್ರಮಣ್ಯನ ಸನ್ನಿದಿಗೆ ಬರುವಾಗ ಮಾತ್ರ ಅಷ್ಟೇ ನಯ ವಿನಯದಿಂದ ಬರಬೇಕು ಅನ್ನೋದು ಸ್ಥಳೀಯರ  ನಂಬಿಕೆ ಮತ್ತು ಸುಭ್ರಮಣ್ಯ ದೇಗುಲಕ್ಕಿರೋ ಇತಿಹಾಸ.. ಅದ್ರಲ್ಲೂ ಸುಬ್ರಮಣ್ಯನ ದೇವಸ್ಥಾನದ ಗರ್ಭಗುಡಿಯ ಮೇಲೆ ಸುತ್ತು ಹೊಡೆಯೋಕೆ ಆ ಸುಭ್ರಮಣ್ಯ ಸ್ವಾಮಿ ಗರುಡನಿಗೆ ಪರವಾನಿಗೆ ನೀಡಿದ್ದಾನಂತೆ. ಹಾಗಿದ್ದೂ ಅದನ್ನ ಮೀರಿ ಅಧಿಕಾರ ಅಂತಸ್ತು ಇದೆ ಅಂತ ಹೆಲಿಕಾಪ್ಟರ್ ನಲ್ಲಿ ಬಂದು ದೇಗುಲ ಸುತ್ತು ಹೊಡೆದ್ರೆ ಅಪಾಯ ಕಟ್ಟಿಟ್ಟ ಬುತ್ತಿ.

ಈ ಹಿಂದೆಯೂ ಅನೇಕರು ಈ ರೀತಿ ಹೆಲಿಕಾಪ್ಟರ್ ನಲ್ಲಿ ಬಂದು ದೇಗುದ ಮೇಲೆ ಸುತ್ತು ಹಾಕಿ ಹಾಕಿ ಸಂಕಷ್ಟ ಅನುಭವಿಸಿದ್ದಾರೆ.ಈ ಹಿಂದೆ ಕನ್ನಡದ ಸ್ಟಾರ್ ನಟ ಯಶ್ ರ ಹಾಗೆ ಅನೇಕರು ಕುಕ್ಕೆ ಸುಭ್ರಮಣ್ಯನ ಸನ್ನಿಧಿಗೆ ಹೆಲಿಕಾಪ್ಟರ್ ನಲ್ಲಿ ಬಂದು ಹೇಳ ಹೆಸರಿಲ್ಲದಂತಾಗಿ ಹೋಗಿದ್ದಾರೆ. ಅವರಲ್ಲಿ ಅನೇಕರು ದೊಡ್ಡ ವ್ಯಕ್ತಿಗಳು ಅನ್ನೋದು ವಿಶೇಷ… ಹಾಗಾದ್ರೆ ಯಾರೆಲ್ಲ ಬಂದಿದ್ರು ಇಲ್ಲಿಗೆ ಹೆಕಾಪ್ಟರ್ ನಲ್ಲಿ ಅಂತ ನೋಡಿದ್ರೆ, ಇಲ್ಲಿನ ಜನರು ಹೇಳೋ ಪ್ರಕಾರ ಈ ಹಿಂದೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಹೆಲಿಕಾಪ್ಟರ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದ್ದರು. ಆಗಲೂ ಇಲ್ಲಿನ ಜನಗಳು ಸ್ವತ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸಿದ್ರು.. ಜೊತೆಗೆ ಅಂದು ಸಾಮಾನ್ಯ ಜನಗಳೂ ಕೂಡ  ಧರ್ಮಸಿಂದ್ ಅವ್ರಿಗೆ ಗಂಡಾಂತರಗಳಾಗೋದು ಪಕ್ಕಾ ಅಂತ ಮಾತನಾಡಿಕೊಂಡಿದ್ದರು..

ಅದರಂತೆ ಬಳಿಕದ ದಿನಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.ಅದೇ ಪ್ರಕಾರ ಧರ್ಮ್ ಸಿಂಗ್ ರಂತೆ ಹಿಂದೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಕೂಡಾ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದರು. ಅಂದು‌ ಕೂಡಾ ಅವರು ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ಅದೇ ಪ್ರಕಾರ ಮದ್ಯದ ದೊರೆ ವಿಜಯ ಮಲ್ಯ ಕೂಡಾ ಕುಕ್ಕೆಗೆ ಹೆಲಿಕಾಪ್ಟರ್ ಮೂಲಕ ಬಂದು ಸೇವೆ ಸಲ್ಲಿಸಿದ್ದರು. ಆ ಬಳಿಕದ ದಿನಗಳಿಂದ ವಿಜಯ ಮಲ್ಯರ ಉದ್ಯಮ ರಂಗದಲ್ಲಿ ಸಾಕಷ್ಟು ಏರುಪೇರಾಗಿತ್ತು ಎನ್ನುವುದನ್ನು ಇಲ್ಲಿನ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.ಹೀಗೆ ಸುಭ್ರಮಣ್ಯನ ಸನ್ನಿಧಿಯಲ್ಲಿ ಹೆಲಿಕಾಪ್ಟರ್ ಮೂಲಕ ಬಂದು ದೇಗುಲ ಸುತ್ತು ಹಾಕಬಾರದು ಅನ್ನೋ ಜನರ ನಂಬಿಕೆಗೆ ಈಗ ಯಶ್ ಮನೆ ಮೇಲೆ ನಡೆದ ಐಟಿ ದಾಳಿಯಿಂದ ಮತ್ತಷ್ಟು ಇಂಬು ನೀಡಿದಂತಾಗಿದೆ.. ಇನ್ನಾದ್ರೂ ನಾಗದೇವನ ಕೋಪಶಮನಕ್ಕೆ ಯಶ್ ಏನು ಮಾಡ್ತಾರೋ ಅನ್ನೋದನ್ನ ಕಾದು ನೋಡಬೇಕಿದೆ…

LEAVE A REPLY

Please enter your comment!
Please enter your name here