Home District ಸುಮಲತಾಗೆ ಕಾಂಗ್ರೆಸ್ ನಿಂದ ತಪ್ಪಿದ ಟಿಕೆಟ್..! ಎಸ್.ಎಂ.ಕೃಷ್ಣ ಭೇಟಿ ಮಾಡಿ ಬೆಂಬಲ ಕೋರಿದ ಸುಮಲತಾ ಅಂಬರೀಶ್..!

ಸುಮಲತಾಗೆ ಕಾಂಗ್ರೆಸ್ ನಿಂದ ತಪ್ಪಿದ ಟಿಕೆಟ್..! ಎಸ್.ಎಂ.ಕೃಷ್ಣ ಭೇಟಿ ಮಾಡಿ ಬೆಂಬಲ ಕೋರಿದ ಸುಮಲತಾ ಅಂಬರೀಶ್..!

262
0
SHARE

ಜೆಡಿಎಸ್ ವಿರುದ್ದ ಮಂಡ್ಯದಲ್ಲಿ ರಣಕಹಳೆ ಊದಿರುವ ಸುಮಲತಾ ಅಂಬರೀಶ್, ಗೆಲುವು ತನ್ನದೇ ಆಗಬೇಕು ಅನ್ನೋ ಹಠದಲ್ಲಿದ್ದಾರೆ . ಹಾಗಾಗೀ ಇಂದು ಮಾಜಿ ಸಿಎಂ ಎಸ್ ಎಂ ಕೃಷ್ಣರವರನ್ನು ಭೇಟಿ ಮಾಡಿದ ಸುಮಲತಾ, ತನಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸದಾಶಿವ ನಗರಲ್ಲಿರುವ ಮಾಜಿ ಸಿಎಂ ಎಸ್ ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಸುಮಾರು 1 ಗಂಟೆಗಳಿಗೂ ಹೆಚ್ಚು ಕಾಲ ಸುಮಲತಾ ಅಂಬರೀಷ್ ಚರ್ಚೆ ನಡೆಸಿದ್ದಾರೆ . ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲು ಈಗಾಗಲೇ ತೀರ್ಮಾನ ಮಾಡಿರುವ ಸುಮಲತಾ ಅಂಬರೀಶ್ ತನಗೆ ಬೆಂಬಲ ನೀಡುವಂತೆ ಎಸ್ ಎಂ ಕೃಷ್ಣರವರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಸುಮಲತಾ ಅವರ ಮನವಿ ಎಸ್ ಎಂ ಕೃಷ್ಣರವರು ಕೂಡ ಸಕಾರತ್ಮಾಕವಾಗಿ ಸ್ಪಂದಿಸಿದ್ದಾರೆ.

ತಾನು ಯಾವ ಪಕ್ಷದಿಂದ ಕಣಕ್ಕಿಳಿಯುತ್ತೇನೆ ಅನ್ನೋ ವಿಚಾರವನ್ನು ಮಾರ್ಚ್ 18 ರಂದು ತಿಳಿಸುತ್ತೇನೆ ಎಂದು ಸುಮಲತಾ ತಿಳಿಸಿದರು. ಮಂಡ್ಯ ಚುನಾವಣೆಗೆ ಅಂಬರೀಷ್ ಹೆಸರು ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಾ ಇದ್ದಾರೆ. ವಿನಾಕಾರಣ ನನ್ನ ಹಾಗೂ ಅಂಬರೀಶ್ ಹೆಸರು ಬಳಕೆ ಮಾಡಬಾರದು ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಸುಮಲತಾ ಮಾತಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣರವರು ಸಹಮತ ವ್ಯಕ್ತಪಡಿಸಿದ್ದಾರೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆಗಳನ್ನು ಮಾಡಬಾರದು ಎಂದು ತಿಳಿಸಿದರು . ಇನ್ನೂ ಸುಮಲತಾಗೆ ಬೆಂಬಲ ನೀಡುವ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ಮಾಡಿ ಮುಂದಿನ ತೀರ್ಮಾನವನ್ನು ಪ್ರಕಟಿಸುತ್ತೇವೆ, ಅಲ್ಲದೇ ಸುಮಲತಾರವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ನಡೆಯುತ್ತಾ ಇದೆ.

ಅವರು ಯಾವ ರೀತಿಯ ತೀರ್ಮಾನ ಮಾಡುತ್ತಾರೆ ಅನ್ನೋದನ್ನು ನೋಡಬೇಕಾಗಿದೆ ಎಂದು ಎಸ್ ಎಂ ಕೃಷ್ಣ ತಿಳಿಸಿದರು .ಜನ ಬೆಂಬಲ ಬಿಟ್ಟು ಬೇರೆ ಯಾರ ಬೆಂಬಲವೂ ಇಲ್ಲ ಎಂದು ಸುಮಲತಾ ತಮ್ಮ ನೋವನ್ನು ಎಸ್ ಎಂ ಕೃಷ್ಣ ಮುಂದೆ ತೋಡಿಕೊಂಡಿದ್ದಾರೆ.

ಹಾಗಾಗೀ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬಿಜೆಪಿ ನಾಯಕರು ತೆಗೆದುಕೊಳ್ಳುವ ತೀರ್ಮಾನ ಮಂಡ್ಯ ಲೋಕ ಸಭಾ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಾಯಿಸಲಿದೆ . ಜೆಡಿಎಸ್ ಸೋಲಿಸ ಬೇಕೆಂಬ ಆಸೆಗೆ ಬಿಜೆಪಿ ನಾಯಕರು ಸುಮಲತಾ ಜೊತೆ ಕೈ ಜೋಡಿಸಲು ಬಹುತೇಕ ಸಜ್ಜಾಗಿ ನಿಂತಿದ್ದಾರೆ .

LEAVE A REPLY

Please enter your comment!
Please enter your name here