Home Latest ಸುಮಲತಾಗೆ JDS ಟಿಕೆಟ್ ಕೊಡಿಸುವ ಆಸೆಯಿತ್ತು! ಆದ್ರೆ ಸಂಧಾನಕ್ಕೆ ಒಪ್ಪಲಿಲ್ಲ ಎಂದ ಸಚಿವ D.C.ತಮ್ಮಣ್ಣ!

ಸುಮಲತಾಗೆ JDS ಟಿಕೆಟ್ ಕೊಡಿಸುವ ಆಸೆಯಿತ್ತು! ಆದ್ರೆ ಸಂಧಾನಕ್ಕೆ ಒಪ್ಪಲಿಲ್ಲ ಎಂದ ಸಚಿವ D.C.ತಮ್ಮಣ್ಣ!

136
0
SHARE

ರಾಜ್ಯದ ಇಡೀ ಲೋಕಸಭಾ ಚುನಾವಣೆಯೇ ಸಕ್ಕರೆ ನಾಡಿನತ್ತ ಮುಖಮಾಡಿರುವುದರಲ್ಲಿ ಎರಡನೇ ಮಾತೇಯಿಲ್ಲ… ಒಂದೆಡೆ ದಳಪತಿಗಳು ತಮ್ಮ ತೆನೆಹೊತ್ತ ಮಹಿಳೆಯನ್ನ ಗೆಲ್ಲಿಸುವಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಇದರ ನಡುವೆ ಮಂಡ್ಯದ ಜನರೆಲ್ಲ ಮಂಡ್ಯ ಸೊಸೆ ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ.. ಸುಮಲತಾ ಅಂಬರೀಷ್‌ರಿಗೆ ವ್ಯಕ್ತವಾಗಿರೋ ಅನುಕಂಪಕ್ಕೆ ತೆನೆಹೊತ್ತ ಮಹಿಳೆ ಪಕ್ಷ ಬೆರಗಾಗಿರುವುದಂತು ಅಕ್ಷರಸಹ ಸತ್ಯ..ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಮತ್ತು ಸಿಎಂ ಹೆಚ್ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆಯಿಂದ ಸಕ್ಕರೆ ನಾಡಿನ ರಾಜಕೀಯ ರಂಗೇರಿದೆ..

ಸುಮಲತಾ ಎಂಟ್ರಿಯಿಂದ ಜೆಡಿಎಸ್ ದಳಪತಿಗಳು ಕಂಗಾಲಾಗಿರೋದು ಸತ್ಯ ಕೂಡ.. ಸುಮಲತಾ ಅವರಿಗೆ ಕ್ಷೇತ್ರದಲ್ಲಿ ವ್ಯಕ್ತವಾಗ್ತಿರೋ ಅನುಕಂಪ ಕಂಡು ಜೆಡಿಎಸ್ ನಾಯಕರು ಬೆರಗಾಗಿದ್ದಾರೆ… ಇನ್ನೊಂದೆಡೆ ನಿಖಿಲ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದ್ದು, ತನೆಹೊತ್ತ ಮಹಿಳೆ ನಾಯಕರಿಗೆ ನುಂಗಲಾರಾದ ತುತ್ತಾಗಿ ಪರಿಣಮಿಸಿದೆ.

ಸುಮಲತಾರ ನಾಗಲೋಟಕ್ಕೆ ಹೇಗಾದ್ರೂ ಬ್ರೇಕ್ ಹಾಕಲು ಜೆಡಿಎಸ್ ನಾಯಕರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.. ಆದ್ರೆ ಮಂಡ್ಯದಲ್ಲಿ ಸದ್ಯಕ್ಕೆ ಸುಮಲತಾ ಪರ ಅಲೆ ಎದ್ದಿದ್ದು, ಅವರಿಗೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ… ಈ ಬೆಳವಣಿಗೆಗಳ ನಡುವೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅಚ್ಚರಿಯ ಹೇಳಿಕೆ ನೀಡಿ ಮಂಡ್ಯ ಕಣವನ್ನ ಮತ್ತಷ್ಟು ಕಾವೇರುವಂತೆ ಮಾಡಿದ್ದಾರೆ…,

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ಕೊಡಿಸುವ ಆಸೆಯಿತ್ತು ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ. ಸುಮಲತಾ ಅವರ ಜೊತೆ ಸಂಧಾನಕ್ಕೆ ನಾನು ಪ್ರಯತ್ನಿಸಿದ್ದೆ, ನಾನು ಮತ್ತು ನನ್ನ ಮಗ ಯತ್ನಿಸಿದ್ದೇವೆ, ಮಧು ಹಾಗೂ ಹೊನ್ನೇಗೌಡ ಎಂಬವರು ಸಂಧಾನ ಮಾಡಿದ್ದರು ಆದರೆ ಸುಮಲತಾ ಅವರೇ ಇದಕ್ಕೆ ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.

ಹೆಚ್​ಡಿಕೆ-ಸುಮಲತಾ ನಡುವೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ನಾನು ಮತ್ತು ನನ್ನ ಮಗ ಸಕಲ ಪ್ರಯತ್ನ ಮಾಡಿದ್ದೆವು ಎಂದು ತಮ್ಮಣ್ಣ ಹೇಳಿದ್ದಾರೆ..ಇನ್ನೊಂದೆಡೆ ತಮ್ಮಣ್ಣ ಹೇಳಿಕೆಯನ್ನ ಸುಮಲತಾ ತಳ್ಳಿ ಹಾಕಿದ್ದಾರೆ.. ಮೇಲುಕೋಟೆ ಚಲುವನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿ ಸುಮಲತಾ ಪ್ರಚಾರ ನಡೆಸುವ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ..

ಜೆಡಿಎಸ್ ಸೇರುವಂತೆ ಡಿಸಿ ತಮ್ಮಣ್ಣ ನನಗೆ ಆಹ್ವಾನ ಕೊಟ್ಟಿರಲಿಲ್ಲ ಎಂದು ಸುಮಲತಾ ಹೇಳಿದ್ದಾರೆ ಅಂಬಿ ಅವರ ಅಣ್ಣನ ಮಗನ ಬಳಿ ಏನೋ ಮಾತನಾಡುವುದಿದೆ ಎಂದಿದ್ರು. ಆದ್ರೆ ಯಾವುದೇ ರೀತಿಯ ಆಹ್ವಾನ ನೀಡಿರಲಿಲ್ಸ.. ಈಗ ನನ್ನ ಹೆಸರು ಏಕೆ ಬಳಕೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.ಇದೇ ವೇಳೆ, ಅಂಬಿ ಸಂಪಾದನೆ ಮಾಡಿದ ಜನರನ್ನು ನಂಬಿಕೊಂಡು ಚುನಾವಣೆ ಮಾಡ್ತಿನಿ ಎಂದು ಸುಮಲತಾ ಹೇಳಿದ್ದಾರೆ.. ಇದಕ್ಕೂ ಮೊದಲು ಮೇಲುಕೋಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಲತಾ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ್ರು…

LEAVE A REPLY

Please enter your comment!
Please enter your name here