Home District ಸುಮಲತಾ ಎಷ್ಟು ಜನರಿಗೆ 1 ಗ್ಲಾಸ್ ನೀರು ಕೊಟ್ಟಿದ್ದಾರೆ! ನೀನು ಯಾವೂರಪ್ಪ, ಏನಪ್ಪ, ನಿನ್ ಸಮಸ್ಯೆ...

ಸುಮಲತಾ ಎಷ್ಟು ಜನರಿಗೆ 1 ಗ್ಲಾಸ್ ನೀರು ಕೊಟ್ಟಿದ್ದಾರೆ! ನೀನು ಯಾವೂರಪ್ಪ, ಏನಪ್ಪ, ನಿನ್ ಸಮಸ್ಯೆ ಅಂತಾ ಕೇಳಿದ್ದಾರಾ? ಸುಮಲತಾ ಅಂಬರೀಶ್ ವಿರುದ್ಧ ಸಚಿವ ಡಿ.ಸಿ.ತಮ್ಮಣ್ಣ ವಾಗ್ದಾಳಿ..

472
0
SHARE

ಲೊಕಸಭೆ ಚುನಾವಣೆಗೆ ಇನ್ನು ಅಭ್ಯರ್ಥಿಗಳೇ ಪೈನಲ್ ಆಗಿಲ್ಲ.. ಆಗ್ಲೇ ಮಂಡ್ಯದ ಲೋಕಸಭಾ ಅಖಾಡ ರಂಗೇರುತ್ತಿದೆ. ಅಲ್ಲದೇ, ಪರಸ್ಪರ ಕಾಲೆಳೆಯುವಲ್ಲಿ ನಿರತರಾಗಿದ್ದಾರೆ, ಸುಮಲತಾ ಪರ ಅಂಬಿ ಅಭಿಮಾನಿಗಳು ಬ್ಯಾಟಿಂಗ್ ಮಾಡಿ ಜೆಡಿಎಸ್ ಅಭ್ಯರ್ಥಿ‌ ನಿಖಿಲ್ ಕುಮಾರ ಸ್ವಾಮಿಗೆ ಗೋಬ್ಯಾಕ್ ಚಳವಳಿ ಪ್ರಾರಂಭಿಸಿದ್ದಾರೆ..

ಇದೇ ವೇಳೆ ಸಚಿವ ತಮ್ಮಣ್ಣ ನೇರವಾಗಿ ಸುಮಲತಾ ವಿರುದ್ದ ಹರಿಹಾಯ್ದಿದ್ದಾರೆ.ಲೋಕಸಭಾ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.. ಆದ್ರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಹಗ್ಗಜಗ್ಗಾಟ ಜೋರಾಗಿದೆ.. ಅಂಬರೀಷ್ ಪತ್ನಿ ಸುಮಲತಾ ಮತ್ತು ಸಿಎಂ ಹೆಚ್ಡಿಕೆ ಪುತ್ರ ನಿಖಿಲ್ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದೇ ಮಂಡ್ಯ ಕ್ಷೇತ್ರ ಕಾದ ಖಾವಲಿಯಂತಾಗಿದೆ.. ಒಂದೆಡೆ ಅಂಬರೀಷ್ ಅಭಿಮಾನಿಗಳು ಮತ್ತೊಂದೆಡೆ ದೇವೇಗೌಡ್ರು, ಹೆಚ್ಡಿಕೆ ಹಿಂಬಾಲಕರು ಚುನಾವಣಾ ಕಣವನ್ನ ಮತ್ತಷ್ಟು ರಂಗೇರುವಂತೆ ಮಾಡಿದ್ದಾರೆ..

ಅಂಬರೀಶ್ ಕುಟುಂಬದ ವಿರುದ್ಧ ಸಚಿವ ಡಿ.ಸಿ.ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ. ಅಂಬರೀಶ್ ಶಾಸಕರು ಮತ್ತು ಸಚಿವರಾಗಿದ್ದಾಗ ಅವರ ಮನೆಗೆ ಹೋದ ಎಷ್ಟು ಜನಸಾಮಾನ್ಯರನ್ನು ಈಯಮ್ಮ ಮಾತಾಡಿಸಿದ್ದಾರೆ ಎಂದು ಸುಮಲತಾರನ್ನು ಟೀಕಿಸಿದ್ದಾರೆ. ಮದ್ದೂರಿನ ಕೂಳಗೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಚಾಲನೆ ವೇಳೆ ವಾಗ್ದಾಳಿ ಮಾಡಿದ ಸಚಿವರು, ಸುಮಲತಾ ಅವರು ಮನೆಗೆ ಬಂದ ಎಷ್ಟು ಜನಕ್ಕೆ ಒಂದ್ ಗ್ಲಾಸ್ ಕುಡಿಯಲು ನೀರು ಕೊಟ್ಟು, ನೀನು ಯಾವೂರಪ್ಪ, ಏನಪ್ಪ, ನಿನ್ ಸಮಸ್ಯೆ ಅಂತಾ ಕೇಳಿದ್ದಾರಾ?

ಇವತ್ತು ಅಂಬರೀಶ್​ ಅವರ ಹೆಸರೇಳಿಕೊಂಡು ಬಂದು ನಾನೇನೋ ಉದ್ಧಾರ ಮಾಡ್ತೀನಿ ಅಂತಿದ್ದಾರೆ ಎಂದು ಲೇವಡಿ ಮಾಡಿದರು.ಬಣ್ಣದವರ ಮಾತಿಗೆ ಜಿಲ್ಲೆಯ ಜನರು ಬೆರಗಾಗೋದು ಬೇಡ. ಯಾರಿಗೆ ಈ ಸಮಾಜದ ಬಗ್ಗೆ ಚಿಂತನೆ ಇದೆ, ಸದಾ ರೈತರ ಬಗ್ಗೆ ಯಾರು ಚಿಂತೆ ಮಾಡ್ತಾರೆ, ಯಾರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸ್ತಾರೆ, ನಮ್ಮ ಜೊತೆಗೆ ನಿಲ್ಲುತ್ತಾರೆ ಅನ್ನೋದನ್ನ ನೋಡಿ ಆಯ್ಕೆ ಮಾಡಿ. ಆದ್ದರಿಂದ ರೈತರ ಮಗನಾದ ನಿಖಿಲ್​ರನ್ನು ಈ ಬಾರಿ ಆಯ್ಕೆ ಮಾಡುವಂತೆ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.

ಇನ್ನು ಸುಮಾಲತಾ ಕೂಡಾ ಟಾಂಗ್‌ ನೀಡಿದ್ದು ತಮ್ಮಣ್ಣ ನವರು ಎಷ್ಷು ಬಾರಿ ನಮ್ಮ ಮನೆ ನೀರು ಕುಡಿದಿದ್ದಾರೆ ಎಷ್ಟು ಬಾರಿ ಊಟ ಮಾಡಿದ್ದಾರೆ ಅನ್ನೋದು ಅವರಿಗೇ ಗೋತ್ತು.. ಅವರಂತೆ ಮಾತನಾಡುವ ಸಂಸ್ಕೃತಿ ನಮ್ಮದಲ್ಲ ಅಂದಿದ್ದಾರೆ.ಜೆಡಿಎಸ್ ಹಾಗೂ ಸುಮಲತಾ ಅಭಿಮಾನಿಗಳ ನಡುವೆ ಪದಗಳ ಜಟಾಪಟಿ ಶುರುವಾಗಿದೆ. ಸುಮಲತಾ ಅಭಿಮಾನಿಗಳು ಒಂದು ಪ್ರಶ್ನೆ ಕೇಳಿದರೆ, ಜೆಡಿಎಸ್ ಕಾರ್ಯಕರ್ತರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅಂತರ್ಜಾಲದಲ್ಲಿ ಸುಮಲತಾಗೆ ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ ಮಾಡಿದರೆ, ಅದಕ್ಕೆ ವಿರುದ್ಧವಾಗಿ ಅಂಬಿ ಅಭಿಮಾನಿಗಳು ಖಾರವಾಗಿಯೇ ಪ್ರಶ್ನೆ ಹಾಕಲು ಶುರು ಮಾಡಿದ್ದಾರೆ.

LEAVE A REPLY

Please enter your comment!
Please enter your name here