Home District ಸುಮಲತಾ ಪ್ರಚಾರದ ವೇಳೆ ರಾರಾಜಿಸಿದ ಬಿಜೆಪಿ-ಕಾಂಗ್ರೆಸ್ ಬಾವುಟಗಳು..! ನನ್ನ ಮುಖದಲ್ಲಿ ನೋವಿಲ್ಲ ಅಂತಾರೆ, ನಾನೇನು ಅಳಬೇಕಾ...

ಸುಮಲತಾ ಪ್ರಚಾರದ ವೇಳೆ ರಾರಾಜಿಸಿದ ಬಿಜೆಪಿ-ಕಾಂಗ್ರೆಸ್ ಬಾವುಟಗಳು..! ನನ್ನ ಮುಖದಲ್ಲಿ ನೋವಿಲ್ಲ ಅಂತಾರೆ, ನಾನೇನು ಅಳಬೇಕಾ ಎಂದು ಸಿಎಂಗೆ ಟಾಂಗ್..!

1877
0
SHARE

ರಾಜ್ಯದ ಹೈವೋಲ್ಟೇಜ್ ಚುನಾವಣಾ ಕಣ ಸಕ್ಕರೆ ನಾಡು ಮಂಡ್ಯ ದಿನ ಕಳೆಯುತ್ತಿದ್ದಂತೆ ರಂಗೇರ್‍ತಿದೆ. ಇವತ್ತು ಮೈತ್ರಿ ಅಭ್ಯರ್ಥಿ ನಿಕಿಲ್ ಕುಮಾರಸ್ವಾಮಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಕ್ಯಾಂಪೇನ್ ನಡೆಸಿದ್ರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕ್ಯಾಂಪೇನ್ ನಡೆಸಿದ್ರು.

ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಮಂಡ್ಯ ವಿಧಾನಸಭಾ ಕ್ಷೇತ್ರದ ಕೀಲಾರ ಗ್ರಾಮದಲ್ಲಿ ಪ್ರಚಾರ ನಡೆಸಿದ್ರು. ಇನ್ನೂ ಸುಮಲತಾ ಪ್ರಚಾರದ ವೇಳೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿಯ ಬಾವುಟಗಳು ರಾರಾಜಿಸಿದವು. ಇನ್ನು ಸುಮಾಗೆ ಕಹಳೆ ಗುರುತು ಸಿಕ್ಕಿರೋದ್ರಿಂದ ಕಹಳೆಯ ವಾದ್ಯ ಘೋಷ ಮೊಳಗಿತು.

ಇನ್ನು ಜಿಲ್ಲಾ ಕಾಂಗ್ರೆಸ್ ಸುಮಾ ಜೊತೆಗೆ ಗುರುತಿಸಿಕೊಂಡವರಿಗೆ ನೋಟಿಸ್ ಕೊಟ್ಟಿದ್ದರೂ ತಲೆ ಕೆಡಿಸಿಕೊಳ್ಳದ ಕೆರಗೋಡು ಕ್ಷೇತ್ರದ ಮಾಜಿ ಶಾಸಕ ಎಚ್.ಬಿ.ರಾಮು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಸುಮಾರ ಪ್ರಚಾರ ನಡೆಸಿದ್ರು. ಪ್ರಚಾರದ ವೇಳೆಯಲ್ಲಿ ಮಾತನಾಡಿದ ಸುಮಲತಾ, ನನ್ನ ಮುಖದಲ್ಲಿ ನೋವಿಲ್ಲ ಅಂತಾರೆ ನೋವು ಮರೆಯಲು ಜನರ ಮುಂದೆ ಬಂದಿದ್ದೇನೆ. ಅನುಕಂಪ ಬೇಡ ಪ್ರೀತಿ ಕೊಡಿ ಎಂದು ಗದ್ಗದಿತರಾದರು.

ಇತ್ತ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವ್ರು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ರು. ಬಳಿಕ ಆತಗೂರು ಗ್ರಾಮಕ್ಕೆ ಆಗಮಿಸಿದ ನಿಖಿಲ್ ಭತ್ತದ ನಾಟಿ ಮಾಡುವ ಮೂಲಕ ತಮ್ಮ ತಂದೆ ಕುಮಾರಸ್ವಾಮಿ ಪಾಂಡವಪುರದ ಸೀತಾಪುರದಲ್ಲಿ ಭತ್ತದ ನಾಟಿ ಮಾಡಿದ್ದನ್ನ ನೆನಪಿಸಿದ್ರು. ನಂತರ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ಮಾಡಿದ್ರು.

ಇದೇ ವೇಳೆ ಗ್ರಾಮದಲ್ಲಿ ಅಜ್ಜಿಯೊಬ್ಬರು ನಿಖಿಲ್ ರನ್ನು ಮಗುವಿನಂತೆ ಮುದ್ದಿಸಿ ಮುತ್ತಕೊಟ್ಟ ಪ್ರಸಂಗ ಸಹ ಜರುಗಿತು. ಇದಕ್ಕೂ ಮುನ್ನ ಪ್ರಚಾರಸಭೆಯಲ್ಲಿ ಮಾತನಾಡಿದ ನಿಖಿಲ್, ನಿಮಗೆ ವ್ಯಾಮೋಹ ಬೇಕಾ? ಅಭಿವೃದ್ಧಿ ಬೇಕಾ? ನೀವೇ ನಿರ್ಧರಿಸಿ. ವಿರೋಧಿಗಳು ಏನೇ ಟೀಕೆ ಮಾಢಿದರೂ ಹಲ್ಲು ಕಚ್ಚಿ ಕೂತಿದ್ದೇನೆ. ನಮಗೆ ಅದೆಲ್ಲಾ ಬೇಕಿಲ್ಲ.

ಅಭಿವೃದ್ಧಿ ಮಾತ್ರ ಬೇಕೆಂದ್ರು.ಇನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಂಬಿ ಆಪ್ತ, ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್ ಸುಮಾ ಜತೆ ಗುರುತಿಸಿಕೊಂಡವರ ಅಮಾನತಿಗೆ ಆಗ್ರಹಿಸಿದ್ರು. ಮಂಡ್ಯದಲ್ಲಿ ಚುನಾವಣಾ ಕಾವು ಬಲು ಜೋರಾಗಿದ್ದು, ಅಭ್ಯರ್ಥಿಗಳು ಮತದಾರರನ್ನ ಸೆಳೆಯಲು ನಾನಾ ಕಸರತ್ತು ನಡೆಸ್ತಿದ್ದಾರೆ.

LEAVE A REPLY

Please enter your comment!
Please enter your name here